2024ರಲ್ಲಿ ಮೋದಿ ಮಣಿಸುವ ವಿಪಕ್ಷಗಳ ಪ್ಲಾನ್‌ಗೆ ಹಿನ್ನಡೆ, ಕಾಂಗ್ರೆಸ್ ಟಿಎಂಸಿ ದೂರ ದೂರ!

By Contributor AsianetFirst Published Aug 8, 2022, 11:43 AM IST
Highlights

ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆ ಬಳಿಕ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸಂಬಂಧ ಹಳಸಿದೆ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಹೋರಾಡುವ ವಿಪಕ್ಷಗಳ ಪ್ಲಾನ್‌ಗೆ ಬಹುದೊಡ್ಡ ಹಿನ್ನಡೆ ತಂದಿದೆ.

ನವದೆಹಲಿ(ಆ.08):  ಭಾರತದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಹಾಗೂ ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವಿನೊಂದಿಗೆ ಪ್ರಾಬಲ್ಯ ಸಾಧಿಸಿತ್ತು. ಆದರೆ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಗಳ ಚುನಾವಣೆ ವಿಪಕ್ಷಗಳಲ್ಲಿ ಒಡಕು ಮೂಡಿಸಿದೆ. ಪ್ರಮುಖವಾಗಿ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಈಗಾಗಲೇ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದೆ. ವಿಪಕ್ಷ ಅಭ್ಯರ್ಥಿಗಳ ಸೋಲಿಗೆ ಒಬ್ಬರನ್ನೊಬ್ಬರು ಹೊಣೆಯಾಗಿಸಿದ್ದಾರೆ. ಕಾಂಗ್ರೆಸ್ ಹಾಗೂ ಟಿಎಂಸಿ ಕಚ್ಚಾಟದಿಂದ ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸೋಲಿಸುವ ವಿಪಕ್ಷಗಳ ಪ್ಲಾನ್‌ಗೆ ಭರ್ಜರಿ ಹಿನ್ನಡೆಯಾಗಿದೆ.  ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲಿ ಆದ ಭಿನ್ನಮತ, ಉಪರಾಷ್ಟ್ರಪತಿ ಆಯ್ಕೆ ವೇಳೆ ಸ್ಫೋಟಗೊಂಡಿದೆ. ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅಸಮಧಾನ ವ್ಯಕ್ತಪಡಿಸಿದ್ದರು. 

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲಿ ವಿಪಕ್ಷಗಳಲ್ಲಿ ಒಮ್ಮತ ಮೂಡಿರಲಿಲ್ಲ. ಆರಂಭದಲ್ಲಿ ಸೂಚಿಸಿದ ಮೂವರು ಅಭ್ಯರ್ಥಿಗಳು ಹಿಂದೇಟು ಹಾಕಿದ ಕಾರಣ ನಾಲ್ಕನೇ ಅಭ್ಯರ್ಥಿ, ಟಿಎಂಸಿ ನಾಯಕ ಯಶವಂತ್ ಸಿನ್ಹ ಕಣಕ್ಕಿಳಿದಿದ್ದರು. ಆದರೆ ಯಶವಂತ್ ಸಿನ್ಹ ಆಯ್ಕೆ ಟಿಎಂಸಿ, ಎನ್‌ಸಿಪಿ ಸೇರಿದಂತೆ ಕೆಲ ಪಕ್ಷಗಳ ನಾಯಕರಿಗೆ ಮಾತ್ರ ಒಪ್ಪಿಗೆ ಇತ್ತು. ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಈ ಭಿನ್ನಮತ ಉಪ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಳಿಕ ಸ್ಫೋಟಗೊಂಡಿದೆ. ವಿಪಕ್ಷಗಳ ಸಭೆಯಲ್ಲಿ ಮಾರ್ಗರೆಟ್ ಆಳ್ವ ಉಪ ರಾಷ್ಟ್ರತಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಖ್ಯಾತೆ ತೆಗೆದಿದ್ದರು. 

ಸದನದಲ್ಲಿ ಹಣದುಬ್ಬರ ಚರ್ಚೆ ವೇಳೆ, 1.6 ಲಕ್ಷದ ಬ್ಯಾಗ್‌ಅನ್ನು ಮುಚ್ಚಿಟ್ಟ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ!

ಟಿಎಂಸಿ ಸಂಪರ್ಕಿಸದೇ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ ಅನ್ನೋ ಆರೋಪ ಬಹಿರಂಗ ವಾಕ್ಸಮರಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲ ಮತದಾನದಿಂದ ದೂರ ಉಳಿಯುವುದಾಗಿ ಘೋಷಿಸಿದ್ದರು. ಇಷ್ಟೇ ಅಲ್ಲ ಉಪ ರಾಷ್ಟ್ರಪತಿ ಮತದಾನದಿಂದ ದೂರ ಉಳಿದಿದ್ದರು. ಮತದಾನದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ನಿರ್ಧಾರವನ್ನು, ವಿಪಕ್ಷಗಳ ಜಂಟಿ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್‌ ಆಳ್ವ ಟೀಕಿಸಿದ್ದರು. ಉಪ ರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯುವ ಟಿಎಂಸಿ ನಿರ್ಧಾರ ಬೇಸರ ತರಿಸುವಂಥದ್ದು. ಇದು ಪ್ರತೀಕಾರ, ಅಹಂಕಾರ ಅಥವಾ ಸಿಟ್ಟಿನ ಸಮಯವಲ್ಲ. ಬದಲಾಗಿದೆ ಧೈರ್ಯ, ನಾಯಕತ್ವ ಮತ್ತು ಐಕ್ಯತೆಯನ್ನು ತೋರಿಸುವ ಸಮಯ. ಹೀಗಾಗಿ ಧೈರ್ಯಕ್ಕೆ ಉದಾಹರಣೆಯಂತಿರುವ ಮಮತಾ ಅವರು ವಿಪಕ್ಷಗಳ ಜೊತೆಗೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಾರ್ಗರೆಟ್ ಆಳ್ವ ಟ್ವೀಟ್ ಮಾಡಿದ್ದರು. 

ಕಾಂಗ್ರೆಸ್ ಹಾಗೂ ಟಿಎಂಸಿ ಕಚ್ಚಾಟದಿಂದ ಸಂಬಂಧ ಹಳಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಚುನಾವಣೆ ಎದುರಿಸುವ ಪ್ರತಿಪಕ್ಷಗಳ ಪ್ಲಾನ್‌ಗೆ ಹಿನ್ನಡೆಯಾಗಿದೆ. 2014, 2019ರ ಲೋಕಸಭೆ ಚುನಾವಣೆ ಹಾಗೂ ರಾಜ್ಯಗಳ ವಿಧಾಸಭಾ ಚುನಾವಣೆಯಲ್ಲಿ ಬಿಜೆಪಿ ಅತೀವೇಗವಾಗಿ ಮುನ್ನುಗ್ಗುತ್ತಿದೆ. ರಾಜ್ಯ ರಾಜ್ಯಗಳಲ್ಲಿ ಅಧಿಕಾರ ಹಿಡಿದುಕೊಳ್ಳುತ್ತಿದೆ. ಹೀಗಾಗಿ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ನಿಯಂತ್ರಿಸಲು ವಿಪಕ್ಷಗಳು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿತ್ತು. ಆದರೆ ಕಾಂಗ್ರೆಸ್ ಹಾಗೂ ಮಮತಾ ಬ್ಯಾನರ್ಜಿ ನಡುವಿನ ಕಚ್ಚಾಟ, ಶಿವಸೇನೆ ಇಬ್ಬಾಗ ಸೇರಿದಂತೆ ಹಲವು ಘಟನೆಗಳಿಂದ ವಿಪಕ್ಷಗಳ ತಂತ್ರ ಫಲಿಸುವಂತೆ ಕಾಣುತ್ತಿಲ್ಲ. 

ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಆಪ್ತೆ ಮನೆಯಲ್ಲಿ ಮತ್ತೆ ಸಿಕ್ತು 28 ಕೋಟಿ ಹಣ, ಕೆಜಿಗಟ್ಟಲೆ ಚಿನ್ನ

ಇತ್ತ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸೂಚನೆ ಉಲ್ಲಂಘಿಸಿ ಮತ ಚಲಾಯಿಸಿದ ಇಬ್ಬರು ಸಂಸದರನ್ನು ಅನರ್ಹಗೊಳಿಸಲು ಟಿಎಂಸಿ ಮನವಿ ಸಲ್ಲಿಸಿದೆ. ಸಂಸದ ಶಿಶಿರ್‌ ಅಧಿಕಾರಿ ಮತ್ತು ಅವರ ಪುತ್ರ ದಿವ್ಯೇಂದು ಅಧಿಕಾರಿ ಸಂಸತ್‌ ಭವನದ ಕೊಠಡಿ ಸಂಖ್ಯೆ 63ರಲ್ಲಿ ಮತ ಚಲಾಯಿಸಿದ್ದಾರೆ. ಈ ಚುನಾವಣೆಯಲ್ಲಿ ಟಿಎಂಸಿ ಸದಸ್ಯರು ಭಾಗಿಯಾಗಬಾರದು ಎಂದು ಪಕ್ಷ ಆ.4ರಂದು ಸೂಚನೆ ನೀಡಿತ್ತು. ಆದರೂ ಇಬ್ಬರು ಮತ ಹಾಕಿರುವುದರಿಂದ ಪಕ್ಷ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ.

click me!