ಶಿಕಾರಿಪುರ ಹಿಂದುಳಿದ ತಾಲೂಕು ಎಂಬ ಶಾಶ್ವತ ಹಣೆಪಟ್ಟಿಯನ್ನು ಯಡಿಯೂರಪ್ಪ ಅವರು ಹೋಗಲಾಡಿಸಿ ತಾಲೂಕಿನಾದ್ಯಂತ ಅಭಿವೃದ್ಧಿ ಪರ್ವದ ಮೂಲಕ ಇದೀಗ ರಾಜ್ಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವಂತೆ ನಿರ್ಮಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಶಿಕಾರಿಪುರ (ಆ.8) : ಶಿಕಾರಿಪುರ ಹಿಂದುಳಿದ ತಾಲೂಕು ಎಂಬ ಶಾಶ್ವತ ಹಣೆಪಟ್ಟಿಯನ್ನು ಯಡಿಯೂರಪ್ಪ ಅವರು ಹೋಗಲಾಡಿಸಿ ತಾಲೂಕಿನಾದ್ಯಂತ ಅಭಿವೃದ್ಧಿ ಪರ್ವದ ಮೂಲಕ ಇದೀಗ ರಾಜ್ಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವಂತೆ ನಿರ್ಮಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ (Vijayendra Yeddyurappa) ಹೇಳಿದರು. ಭಾನುವಾರ ಪಟ್ಟಣದ ಮಂಗಳ ಭವನದಲ್ಲಿ ನಡೆದ ತಾಲೂಕು ಬಿಜೆಪಿ ಮಹಾಶಕ್ತಿ ಕೇಂದ್ರ ಹಾಗೂ ಪೇಜ್ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ನಾಯಕರು ತಲೆಯೆತ್ತಿ ನಡೆಯಲಾಗುತ್ತಿಲ್ಲ: ಬಿವೈ ವಿಜಯೇಂದ್ರ ಅಸಮಾಧಾನ
ಕಳೆದ 4-5 ದಶಕದ ಹಿಂದೆ ಶಿಕಾರಿಪುರ ತಾಲೂಕು ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಹೊಂದಿದ್ದು, ನಂಜುಂಡಪ್ಪ ವರದಿ(Najundappa Report)ಯ ಅನ್ವಯ ಹಿಂದುಳಿದ ತಾಲೂಕು ಎಂಬ ಶಾಶ್ವತ ಕಪ್ಪುಚುಕ್ಕೆಯನ್ನು ಯಡಿಯೂರಪ್ಪ(B.S.Yadiyurappa) ಅವರು ಮುಖ್ಯಮಂತ್ರಿ ಅವಧಿಯಲ್ಲಿ ಸಮಗ್ರ ಅಭಿವೃದ್ಧಿ ಮೂಲಕ ರಾಜ್ಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವಂತೆ ನಿರ್ಮಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇದೀಗ ತಾಲೂಕು ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ತಾಲೂಕಿನ ಜನತೆಯ ಆಶೀರ್ವಾದದಿಂದ ನಾಲ್ಕು ಬಾರಿಗೆ ಮುಖ್ಯ ಮಂತ್ರಿಯಾದ ಯಡಿಯೂರಪ್ಪನವರು ಜನಪರ ಕಾರ್ಯದ ಮೂಲಕ ಋುಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರು ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಹಗಲು ಕನಸು ಕಾಣುತ್ತಿದ್ದು, ಅದು ಅವರ ಭ್ರಮೆ. ರಾಜ್ಯದಲ್ಲಿ ಬಿಜೆಪಿ ಪುನಃ ಅಧಿಕಾರದ ಗದ್ದುಗೇರಲಿದೆ. ಪ್ರಧಾನಿಯವರ ಅಭಿವೃದ್ಧಿ ಪರವಾದ, ಸಮರ್ಥ ಆಡಳಿತದಿಂದ ಪಕ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ವೃದ್ಧಿಸಿಕೊಂಡಿದೆ. ಪಕ್ಷದ ಶಿಸ್ತಿನ ಸಿಪಾಯಿಯಾದ ನಾನು ಪಕ್ಷ ಅವಕಾಶ ಕಲ್ಪಿಸಿದಲ್ಲಿ ಮಾತ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಜನತೆಯ ಸೇವೆ ಮಾಡುವುದಾಗಿ ತಿಳಿಸಿದರು.
ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿ, ಪಕ್ಷದ ಮುಖಂಡರು, ಕಾರ್ಯಕರ್ತರು ಸಂಘಟನೆಯನ್ನು ಸದೃಢಗೊಳಿಸುವ ಬಗ್ಗೆ ಮಾತ್ರ ಹೆಚ್ಚಿನ ಗಮನ ಹರಿಸಬೇಕು. ಪಕ್ಷ ಕಟ್ಟಿಬೆಳೆಸಿದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಸಬೇಕು. ಶಕ್ತಿಕೇಂದ್ರದ ಮಟ್ಟದಲ್ಲಿ ಸಭೆಯನ್ನು ನಡೆಸಲಾಗುತ್ತಿದೆ. ಪೇಜ್ ಪ್ರಮುಖರಿಗೆ ಅತಿ ದೊಡ್ಡ ಜವಾಬ್ದಾರಿಯಿದೆ. ಪ್ರತಿ ಪೇಜ್ ವ್ಯಾಪ್ತಿಯಲ್ಲಿ 6ರಿಂದ 8 ಮನೆಗಳಿವೆ. ಪ್ರತಿಯೊಬ್ಬರ ಗುರಿ ಪಕ್ಷ ಸಂಘಟನೆ ಮಾತ್ರ. ಚುನಾವಣೆ ಸಮಯದಲ್ಲಿ ಪ್ರತಿ ಬೂತ್‌ನಲ್ಲಿ ನಡೆದಿರುವ ಕೆಲಸ ಕಾರ್ಯದ ಬಗ್ಗೆ ಸ್ಥಳೀಯ ಜನತೆಗೆ ಅರಿವು ಮೂಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾದವರ ಪಟ್ಟಿಮಾಡಬೇಕು. ಅವರಿಗೆ ಸ್ಪಂದಿಸಬೇಕು, ಪ್ರತಿ ಮನೆಯೂ ನಮ್ಮ ಮನೆಯಾಗಬೇಕು. ಅವರಿಗೆ ಸರ್ಕಾರ ನೀಡಿರುವ ಸವಲತ್ತುಗಳನ್ನು ಪರಿಚಯಿಸಬೇಕು. ಉಚಿತ ಯೋಜನೆಗಳ ಬಗ್ಗೆ ಗಮನ ಸೆಳೆಯಬೇಕು ಎಂದು ಸೂಚಿಸಿದರು.\
ಇಂದಿನ ರಾಜಕಾರಣದಲ್ಲಿ ಕಬಡ್ಡಿ, ಚದುರಂಗ ಎರಡೂ ಗೊತ್ತಿರಬೇಕು: ವಿಪಕ್ಷಗಳಿಗೆ ವಿಜಯೇಂದ್ರ ಟಾಂಗ್
ತಾಲೂಕಿನ ಪ್ರತಿ ಗ್ರಾಮಕ್ಕೆ ಅಂದಾಜು .5 ಕೋಟಿ ಅನುದಾನ ನೀಡಲಾಗಿದೆ. ಈ ವಿಷಯವನ್ನು ವ್ಯಾಪ್ತಿಯಲ್ಲಿನ ಪ್ರತಿ ಕುಟುಂಬದವರಿಗೆ ಮನದಟ್ಟು ಮಾಡಬೇಕಾದ ಅಗತ್ಯವಿದೆ. ಇದರಿಂದಮತದಾರರ ಒಲವು ಗಳಿಸಲು ಸಾದ್ಯ ಎಂದು ತಿಳಿಸಿದರು. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಮಾಜಿ ಶಾಸಕ ಹರೀಶ್ ಮುಖಂಡ ಕೆ. ಹಾಲಪ್ಪ, ಮಲ್ಲೇಶಪ್ಪ, ಅಂಬಾರಗೊಪ್ಪ ಶೇಖರಪ್ಪ, ಗಾಯತ್ರಿ ಮಲ್ಲಪ್ಪ, ಕುಮಾರಗೌಡ, ನೇತ್ರಾವತಿ, ರುದ್ರೇಶ್, ಗುರುರಾಜ ಜಕ್ಕಿನಕೊಪ್ಪ, ಎ.ಬಿ. ಸುಧೀರ್, ಗಣೇಶ್ ನಾಗೀಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.