ಸ್ವಾತಂತ್ರ್ಯ ತಂದವರು ಕಾಂಗ್ರೆಸ್‌ನವರು ಕಾಂಗ್ರೆಸ್‌ನವರೇ ಸ್ವಾತಂತ್ರ್ಯದ ವಾರಸುದಾರರು, ಇಂದು ಬೇರೆಯವರಿಗೆಲ್ಲಾ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ, ಅವರೆಲ್ಲಾ ಡೋಂಗಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಮಾಜಿ ಸಂಸದ ಚಂದ್ರಪ್ಪ ಹೇಳಿದರು
ಹೊಸದುರ್ಗ ಆ.8: ಸ್ವಾತಂತ್ರ್ಯ ತಂದವರು ಕಾಂಗ್ರೆಸ್‌ನವರು ಕಾಂಗ್ರೆಸ್‌ನವರೇ ಸ್ವಾತಂತ್ರ್ಯದ ವಾರಸುದಾರರು, ಇಂದು ಬೇರೆಯವರಿಗೆಲ್ಲಾ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ, ಅವರೆಲ್ಲಾ ಡೋಂಗಿ ಸ್ವಾತಂತ್ರ್ಯ ಹೋರಾಟಗಾರರು ಎಂದು ಮಾಜಿ ಸಂಸದ ಚಂದ್ರಪ್ಪ ಹೇಳಿದರು. ತಾಲೂಕಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಯುತ್ತಿರುವ 75 ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 75 ಕಿ.ಮೀ. ಪಾದಯಾತ್ರೆಯ ಮೂರನೇ ದಿನದ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಪೀಳಿಗೆಗಳು ಎಂದರೆ ನಾವು ಹಾಗಾಗಿ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ಉಳಿಸುವ ಕಾರಣಕ್ಕಾಗಿ ನಾವು ಇಂದು ಹೆಜ್ಜೆ ಹಾಕುತ್ತಿದ್ದೇವೆ. ಹಿಂದೆ ಜಾತಿಯ ವಿಷ ಬೀಜವನ್ನು ಹಿರಿಯರ ಮೂಲಕ ಬಿತ್ತಲಾಗುತ್ತಿತ್ತು. ಆದರೆ, ಇಂದು ಬಟ್ಟೆ, ಪುಸ್ತಕಗಳ ಮೂಲಕ ಎಳೆ ಮಕ್ಕಳಲ್ಲಿ ಬಿತ್ತುವ ಹೇಯ ಕೃತ್ಯ ನಡೆಯುತ್ತಿದೆ ಎಂದರು.
ಭೋವಿ ಶ್ರೀ ಸೇರಿ ಇಬ್ಬರು ಶಾಸಕರಿಗೆ ಕೊಲೆ ಬೆದರಿಕೆ ಸಂದೇಶ
undefined
ದೇಶದಲ್ಲಿ ಹುಟ್ಟಿಕೊಂಡಿರುವ ಜಾತಿವಾದಿ ಪಕ್ಷಗಳು ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ತಂದವರನ್ನು ವಿರೋಧಿಗಳು ಎನ್ನುವಂತೆ, ಸ್ವಾತಂತ್ರ್ಯಕ್ಕೆ ವಿರೋಧಿಸಿದವರನ್ನು ಸೇನಾನಿಗಳು ಎನ್ನುವಂತೆ ಬಿಂಬಿಸುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ಈ ಸಂದರ್ಭದಲ್ಲಿ ದೇಶಕ್ಕೆ ಎಚ್ಚರಿಕೆ ನೀಡಬೇಕಿದೆ ಈ ಹಿನ್ನೆಲೆ ಈ ಜಾಥಾವನ್ನು ನಡೆಸಲಾಗುತ್ತಿದೆ. ಎಲ್ಲರೂ ಒಟ್ಟಿಗೆ ಬದುಕಬೇಕು ಎನ್ನುವ ಸಂವಿಧಾನವನ್ನು ಅಂಬೇಡ್ಕರ್ ಬರೆದರೂ ಸಹ ಇವತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಶೇ.21 ರಷ್ಟುಇರುವ ಅಲ್ಪಸಂಖ್ಯಾತ, ಜೈನ, ಬೌದ್ದ, ಕ್ರಿಶ್ಚಿಯನ್‌ರನ್ನು ಹೊರಗಿಟ್ಟು ಸರ್ಕಾರವನ್ನು ರಚಿಸಲಾಗಿದೆ. ಪ್ರಧಾನಿ ಹೇಳುವ ಸಬ್‌ಕಾ ಸಾತ್ ಸಬ್‌ಕಾ ವಿಕಾಸ್ ಎಂದರೆ ಇದೇನಾ? ಎಂದರು.
ಚಿತ್ರದುರ್ಗ: ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಕಾಮಗಾರಿ, ಮರದ ಕೆಳಗೆ ಮಕ್ಕಳಗೆ ಪಾಠ
ಮಾಜಿ ಶಾಸಕ ಬಿಜಿ ಗೋವಿಂದಪ್ಪ ಮಾತನಾಡಿ, ಭ್ರಷ್ಟಬಿಜೆಪಿ ಸರ್ಕಾರ ಜಿಎಸ್‌ಟಿ ಮೂಲಕ ಬಡಜನ, ಶೋಷಿತರನ್ನು ನಿರ್ಮೂಲನೆ ಮಾಡಲು ಹೊರಟಿದೆ. ಶ್ರೀಮಂತರ ಉದ್ಧಾರಕ್ಕೆ ಅನುಕೂಲವಾಗುವಂತ ಕಾನೂನುಗಳನ್ನು ಜಾರಿಗೆ ತಂದಿದೆ ಇದನ್ನು ದೇಶದಲ್ಲಿ ತೊಲಗಿಸಲು ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮ ಮಾಡಬೇಕಿದೆ. ದೇಶದ ದೇಶದ ವ್ಯವಸ್ಥೆ ಹಾಳು ಮಾಡಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಸಂಕಲ್ಪ ಮಾಡಬೇಕು. ಈ ಪಾದಯಾತ್ರೆ ಮೂಲಕ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವೈಪಲ್ಯವನ್ನು ತಿಳಿಸಲಾಗುತ್ತದೆ. ಎಂದರು.
ಜಾಥಾದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಆರ್ ರಾಜಣ್ಣ, ಕೆಪಿಸಿಸಿ ಸದಸ್ಯರಾದ ಎಂಪಿ ಶಂಕರ್, ಆಲ್ತಾಪ್‌ಪಾಷ, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ ತಿಪ್ಪೇಶ್, ಮಹಿಳಾ ಘಟಕದ ಅಧ್ಯಕ್ಷೆ ದೀಪಿಕಾಸತೀಶ್, ವಿವಿಧ ಘಟಕಗಳ ಪದಾಧಿಕಾರಿಗಳು, ಯುವ ಕಾರ್ಯಕರ್ತರು, ಗ್ರಾಮಸ್ಥರು ಭಾಗವಹಿಸಿದ್ದರು. ಮೂರನೇ ದಿನದ ಜಾಥವನ್ನು ಸೋಡರ್‌ನಾಳ್, ಕುರುಬರಹಳ್ಳಿ, ಗೋರವಿನಲ್ಲು , ಕೆಲ್ಲೋಡು ಗ್ರಾಮಗಳ ಮೂಲಕ ಮೆಣಸಿನೋಡು ಗ್ರಾಮದಲ್ಲಿ ತಂಗುವ ಮೂಲಕ ಮುಕ್ತಾಯಗೊಳಿಸಲಾಯಿತು.