ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗಾಳ: ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್‌ ರಾಜಕೀಯ ಶುರು..!

By Girish Goudar  |  First Published Nov 17, 2023, 9:34 PM IST

ಎಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಆಗಮನದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿರುವ ಎರಡು ರೆಸಾರ್ಟ್‌ಗಳನ್ನು ಕುಮಾರಸ್ವಾಮಿ ಅವರ ಹೆಸರಿನಲ್ಲಿ ಬುಕ್ ಮಾಡಲಾಗಿತ್ತು. ಶುಕ್ರವಾರ ಸಂಜೆಯೇ ಚಿಕ್ಕಮಗಳೂರಿಗೆ ಬಂದಿರುವ ಕುಮಾರಸ್ವಾಮಿ ಅವರು ಹನಿ ಡ್ಯೂ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ಹನಿ ಡ್ಯೂ ರೆಸಾರ್ಟ್ ಸೇರಿದಂತೆ ಸಿಲ್ವರ್ ಗೇಟ್ ರೆಸಾರ್ಟ್‌ನಲ್ಲಿ ಜೆಡಿಎಸ್ ಶಾಸಕರು ಉಳಿದುಕೊಂಡಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.17):  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಫಿನಾಡಿನ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದು, ಇಲ್ಲಿಯೇ ಜೆಡಿಎಸ್ ಶಾಸಕರ ಸಭೆ ನಡೆಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರ ಪುತ್ರಿ ನಿಶ್ಚಿತಾರ್ಥದ ನೆಪದಲ್ಲಿ ಚಿಕ್ಕಮಗಳೂರಿಗೆ ಆಗಮಿಸಿರುವ ಕುಮಾರಸ್ವಾಮಿ ಇಲ್ಲಿನ ಖಾಸಗಿ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

Tap to resize

Latest Videos

undefined

ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂಬ ಗುಲ್ಲೆದ್ದ ಬೆನ್ನಲ್ಲೇ ರೆಸಾಲ್ಟ್‌ಗೆ ಶಿಫ್ಟ್? 

ಎಚ್.ಡಿ.ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಆಗಮನದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿರುವ ಎರಡು ರೆಸಾರ್ಟ್‌ಗಳನ್ನು ಕುಮಾರಸ್ವಾಮಿ ಅವರ ಹೆಸರಿನಲ್ಲಿ ಬುಕ್ ಮಾಡಲಾಗಿತ್ತು. ಶುಕ್ರವಾರ ಸಂಜೆಯೇ ಚಿಕ್ಕಮಗಳೂರಿಗೆ ಬಂದಿರುವ ಕುಮಾರಸ್ವಾಮಿ ಅವರು ಹನಿ ಡ್ಯೂ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ಹನಿ ಡ್ಯೂ ರೆಸಾರ್ಟ್ ಸೇರಿದಂತೆ ಸಿಲ್ವರ್ ಗೇಟ್ ರೆಸಾರ್ಟ್‌ನಲ್ಲಿ ಜೆಡಿಎಸ್ ಶಾಸಕರು ಉಳಿದುಕೊಂಡಿದ್ದಾರೆ.

ರಾಜಕೀಯ ಬಿಟ್ಟು ಸುಮ್ಮನೆ ಕೂರುವೆ ಆದರೆ ಬೇರೆ ಪಕ್ಷ ಸೇರಲ್ಲ: ಸಿಟಿ ರವಿ

ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂಬ ಗುಲ್ಲೆದ್ದ ಬೆನ್ನಲ್ಲೇ ಕುಮಾರಸ್ವಾಮಿ ಅವರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣದ ಹಿನ್ನೆಲೆಯಲ್ಲಿ ಎಂಎಲ್‌ಸಿ ಭೋಜೇಗೌಡ ಅವರ ಮಗಳ ನಿಶ್ಚಿತಾರ್ಥದ ನೆಪದಲ್ಲಿ ಎಲ್ಲ ಶಾಸಕರನ್ನು ಚಿಕ್ಕಮಗಳೂರಿನ ರೆಸಾರ್ಟ್ಗಳಿಗೆ ಕರೆಯಿಸಿಕೊಂಡು ಅಲ್ಲಿಯೇ ನಾಳೆ ಶಾಸಕರ ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಶಾಸಕರು ಒಂಡೆದೆ ಸೇರಿದಾಗ ಸಭೆ ನಡೆಯುವುದು ಸಹಜ: ಭೋಜೇಗೌಡ

ನವೆಂಬರ್ 18ರಂದು ಇಡೀ ದಿನ ಶಾಸಕರ ಸಭೆ ನಡೆಸಲಿರುವ ಕುಮಾರಸ್ವಾಮಿ ಅವರು ನವೆಂಬರ್ 19ರಂದು ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಶಾಸಕರ ಸಭೆ ನಡೆಸುವ ಉದ್ದೇಶದಿಂದಲೇ ಎಂಎಲ್‌ಸಿ ಭೋಜೇಗೌಡ ಅವರ ಪುತ್ರಿ ನಿಶ್ಚಿತಾರ್ಥಕ್ಕೆ  ಇನ್ನೆರಡು ದಿನ ಇರುವಾಗಲೇ ದಳಪತಿ ಚಿಕ್ಕಮಗಳೂರಿಗೆ ಬಂದು ಬೀಡು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ರಾಜಕೀಯ ಬೇಡ ಎನ್ನಿಸಿದರೆ ರಾಜಕಾರಣ ಬಿಟ್ಟು ಕುಳಿತುಕೊಳ್ಳುತ್ತೇನೆ: ಸಿ.ಟಿ.ರವಿ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಚಿಕ್ಕಮಗಳೂರು ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಅವರು ಶಾಸಕರು ಒಂಡೆದೆ ಸೇರಿದಾಗ ಸಭೆ ನಡೆಯುವುದು ಸಹಜ. ನಮ್ಮ ಪಕ್ಷದ ಶಾಸಕರಿಗೆ ಪಕ್ಷ ನಿಷ್ಟೆ, ನಿಯತ್ತು ಎಲ್ಲವೂ ಇದೆ. ಯಾವ ಶಾಸಕರೂ ಪಕ್ಷ ಬಿಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ಎಲ್ಲರು ಒಂದೆಡೆ ಸೇರಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

ಕುಮಾರಸ್ವಾಮಿ ಅವರೂ ನನ್ನ ಮಗಳ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಹಾಗೆಯೇ ಶಾಸಕರೂ ಆಗಮಿಸಿದ್ದಾರೆ. ಎಲ್ಲರೂ ಇದ್ದಿದ್ದರಿಂದ ಸಭೆ ನಡೆಯುವುದು ಸಾಮಾನ್ಯ. ರೆಸಾರ್ಟ್ ನಲ್ಲಿ ರಾಜಕೀಯದ ಚರ್ಚೆಯೂ ನಡೆಯುತ್ತದೆ ಎಂದು ಸ್ಪಷ್ಟನೆ ನೀಡಿದರು.

click me!