
ಬಾಗಲಕೋಟೆ(ನ.17): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಚಾರದ ತಾಂಡವವಾಡುತ್ತಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಟಿಎಂ ಎಂಬುದಕ್ಕೆ ಸಿ.ಎಂ.ಸಿದ್ದರಾಮಯ್ಯವರ ಪುತ್ರ, ಮಾಜಿ ಶಾಸಕ ಯತೀಂದ್ರ ಅವರ ವಿಡಿಯೋ ಸಾಕ್ಷಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂದು ಬಿಜೆಪಿ ಜಿಲ್ಲಾ ಘಟಕ ಪ್ರಶ್ನೆ ಮಾಡಿದೆ.
ಸಂವಿಧಾನದ ರಕ್ಷಕ ತಾನೊಬ್ಬನೇ ಹಾಗೂ ತಾನೊಬ್ಬನೇ ಶ್ರೇಷ್ಠ ಎಂಬ ಫೋಸು ಕೊಡುವ ಮುಖ್ಯಮಂತ್ರಿಗಳು ಯಾವ ಸಂವಿಧಾನದ ಅಡಿ ಸ್ವಜನಪಕ್ಷಪಾತರಹಿತ, ಸ್ವಾರ್ಥರಹಿತ ಆಡಳಿತ ಬಗ್ಗೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಯಾವುದೇ ಸಂವಿಧಾನಾತ್ಮಕ ಹುದ್ದೆ ಇಲ್ಲದ ಅಥವಾ ಶಾಸಕನಲ್ಲದ ಯತೀಂದ್ರ ವರ್ಗಾವಣೆ ವಿಚಾರವಾಗಿ ನೇರವಾಗಿ ಸಾರ್ವಜನಿಕವಾಗಿ ಮುಖ್ಯಮಂತ್ರಿಗಳಿಗೆ ಅಪ್ಪ ಅಂತಾ ಸಂಬೋಧಿಸುತ್ತ ಮಾತನಾಡಿದ್ದು, ಸಂಬಂಧಪಟ್ಟ ಅಧಿಕಾರಿಗೆ ಅಧಿಕಾರಯುತವಾಗಿ ನಿರ್ದೇಶನ ನೀಡುವ ಪರಿ ಅಕ್ಷಮ್ಯ ಅಪರಾಧವಾಗಿದೆ ಎಂದು ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹಾಗೂ ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಜಂಟಿಯಾಗಿ ಪತ್ರಿಕಾ ಪ್ರಕಟಣೆ ಮುಖಾಂತರ ಖಂಡಿಸಿದ್ದಾರೆ.
ಕಂದಾಯ ವಿಭಾಗಕ್ಕೊಬ್ಬ ಸಿಎಂ ನೇಮಿಸಿ: ಕಾರಜೋಳ ವ್ಯಂಗ್ಯ
ನೈತಿಕತೆಯ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ತಮ್ಮ ಪುತ್ರನ ಮುಖಾಂತರ ಹಣ ಸಂಗ್ರಹ ಮಾಡುತ್ತಿರುವುದಕ್ಕೆ, ಸುಪರ್ ಸಿಎಂ ಮುಖ್ಯಮಂತ್ರಿ ಯತೀಂದ್ರ ಎನ್ನುವುದಕ್ಕೆ ಸ್ಪಷ್ಟ ಸಾಕ್ಷ್ಯ ನೀಡುತ್ತಿದೆ. ಕಾರಣ ಸಮಾಜವಾದಿ ಫೋಸು ನೀಡುವ ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕೆಂದು ಬಿಜೆಪಿ ಬಾಗಲಕೋಟೆ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇವಲ ಸಿಎಂ ಕುರ್ಚಿ ಕಿತ್ತಾಟ, ಬಣ ರಾಜಕಾರಣ, ಬಹುತೇಕ ಸಚಿವರ ಅಪ್ರಬುದ್ಧ, ಇಲ್ಲಸಲ್ಲದ ಹೇಳಿಕೆಗಳು, ಗ್ಯಾರಂಟಿಗಳ ವೈಫಲ್ಯ, ಆರ್ಥಿಕ ಸ್ಥಿತಿ ದಿವಾಳಿ, ರಾಜ್ಯದಲ್ಲಿ ಬರಗಾಲ, ವಿದ್ಯುತ್ ಅಭಾವದಿಂದ ರಾಜ್ಯವನ್ನು ಕತ್ತಲೆಯಲ್ಲಿ ಮುಳುಗಿಸಿರುವ ಸರ್ಕಾರ0 ಸಂಪೂರ್ಣ ಬೌದ್ಧಿಕ ಹಾಗೂ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.