ಕಾಂಗ್ರೆಸ್ ಶಾಸಕರ ಬಡಿದಾಟ: ಪ್ರಕರಣ ದಾಖಲು, ಬಂಧನದ ಭೀತಿಯಲ್ಲಿ ಗಣೇಶ್

Published : Jan 21, 2019, 07:16 PM IST
ಕಾಂಗ್ರೆಸ್ ಶಾಸಕರ ಬಡಿದಾಟ: ಪ್ರಕರಣ ದಾಖಲು, ಬಂಧನದ ಭೀತಿಯಲ್ಲಿ ಗಣೇಶ್

ಸಾರಾಂಶ

ಬಿಡದಿ ಬಳಿಯ ಈಗಲ್​​ಟನ್ ರೆಸಾರ್ಟ್​​​ನಲ್ಲಿ ನಡೆದಿದ್ದ ಕಾಂಗ್ರೆಸ್​​ ಶಾಸಕರ ಬಡಿದಾಟ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲ್ಲೆ ಮಾಡಿದ ಕಂಪ್ಲಿ ಶಾಸಕನಿಗೆ ಬಂಧನ ಭೀತಿ ಶುರುವಾಗಿದೆ.

ಬೆಂಗಳೂರು, [ಜ.21]: ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್​ ಸಿಂಗ್​​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಎಫ್​​ಐಆರ್​ ದಾಖಲಾಗಿದೆ.

 ಆನಂದ್ ಸಿಂಗ್ ಹೇಳಿಕೆ ಮೇರೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಶಾಸಕರ ಗಲಾಟೆ ಪ್ರಕರಣದ ಏ-1 ಆರೋಪಿ ಆಗಿರುವ ಕಂಪ್ಲಿ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 323, 324, 307, 504 ಹಾಗೂ 506 ಅಡಿಯಲ್ಲಿ ದೂರು ದಾಖಲಾಗಿದೆ.

ರೆಸಾರ್ಟ್ ರಂಪಾಟ: ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ 'ಕೈ' ಶಾಸಕ ಅಮಾನತು

 ಇದ್ರಿಂದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್​ಗೆ ಬಂಧನದ ಭೀತಿ ಶುರುವಾಗಿದ್ದು, ಯಾವುದೇ ಸಂದರ್ಭದಲ್ಲಾದರೂ ಶಾಸಕ ಕಂಪ್ಲಿ ಗಣೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ಗಣೇಶ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

ಏಟು ತಿಂದ ಆನಂದ್‌ ಸಿಂಗ್‌ ಹೇಗಿದ್ದಾರೆ? ಫೋಟೋ ಹಿಂದಿನ ಸತ್ಯ!

ಮೊನ್ನೆ CLP ಮೀಟಿಂಗ್​​ ಮುಗಿದ ತಕ್ಷಣ ಬಿಡದಿ ಬಳಿಯ ಈಗಲ್​​ಟನ್ ರೆಸಾರ್ಟ್​​​ನಲ್ಲಿ ಬಳ್ಳಾರಿ ಭಾಗದ ಶಾಸಕರಾದ ಆನಂದ್​ ಸಿಂಗ್​​ ಮತ್ತು ಗಣೇಶ್​​ ಅವರು ರಾತ್ರಿ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದರು. 

ಕೈ ಶಾಸಕರ ಬಡಿದಾಟ: ಆತಂಕ ತಂದ ಆನಂದ ಸಿಂಗ್ ಹೆಲ್ತ್ ರಿಪೋರ್ಟ್

ಈ ವೇಳೆ ವಿಜಯನಗರ ಶಾಸಕರಾದ ಆನಂದ್​ ಸಿಂಗ್ ಅವರ ಮೇಲೆ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್​ ತೀವ್ರವಾಗಿ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ಆನಂದ್​ ಸಿಂಗ್ ಬಲಗಣ್ಣಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ