ಬೆಂಗಳೂರು ಉಪನಗರ ರೈಲು ಯೋಜನೆಯ ಲೊಕೇಶನ್‌ ಸರ್ವೆ ಶೀಘ್ರ ಪೂರ್ಣಗೊಳಿಸಲು ಸೋಮಣ್ಣಗೆ ಸಂಸದ ಸುಧಾಕರ್‌ ಮನವಿ!

By Govindaraj S  |  First Published Jul 3, 2024, 10:24 PM IST

ಚಿಕ್ಕಬಳ್ಳಾಪುರ- ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿಗೆ ವೇಗ ನೀಡಲು ಫೈನಲ್‌ ಲೊಕೇಶನ್‌ ಸರ್ವೆ (FLS) ಶೀಘ್ರ ಪೂರ್ಣಗೊಳ್ಳುವಂತೆ ಕ್ರಮ ವಹಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಡಾ.ಕೆ.ಸುಧಾಕರ್‌ ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದಾರೆ.
 


ಚಿಕ್ಕಬಳ್ಳಾಪುರ (ಜು.03): ಚಿಕ್ಕಬಳ್ಳಾಪುರ- ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿಗೆ ವೇಗ ನೀಡಲು ಫೈನಲ್‌ ಲೊಕೇಶನ್‌ ಸರ್ವೆ (FLS) ಶೀಘ್ರ ಪೂರ್ಣಗೊಳ್ಳುವಂತೆ ಕ್ರಮ ವಹಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಡಾ.ಕೆ.ಸುಧಾಕರ್‌ ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದಾರೆ. ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿದ ಅವರು ಈ ಕುರಿತು ಲಿಖಿತ ಮನವಿ ನೀಡಿದ್ದಾರೆ.

ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಎಫ್‌ಎಲ್‌ಎಸ್‌ ನಿರ್ಣಾಯಕವಾಗಿದ್ದು, ಕಾರಿಡಾರ್‌ 1 ಮತ್ತು 4 ರಲ್ಲಿ ಈ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ. ಅಮೃತ ಭಾರತ ಯೋಜನೆಯಡಿ ನಡೆಯುತ್ತಿರುವ ದೊಡ್ಡಬಳ್ಳಾಪುರ ಮತ್ತು ಚನ್ನಸಂದ್ರ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಕಾಲಮಿತಿ ಹಾಕಿಕೊಂಡು ಶೀಘ್ರ ಪೂರ್ಣಗೊಳಿಸಬೇಕು. 

Tap to resize

Latest Videos

ಡೆಂಗ್ಯೂ ಟೆಸ್ಟ್‌ಗೆ ಬೆಲೆ ನಿಗದಿಪಡಿಸಿದ ಸರ್ಕಾರ: ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿದ ಸಚಿವ ದಿನೇಶ್ ಗುಂಡೂರಾವ್

ಹೊಸ ರೈಲು ಮಾರ್ಗ ಯೋಜನೆಗಳಾದ ಚಿಕ್ಕಬಳ್ಳಾಪುರ-ಗೌರಿಬಿದನೂರು (44 ಕಿ.ಮೀ.), ಚಿಕ್ಕಬಳ್ಳಾಪುರ-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ (103 ಕಿ.ಮೀ.), ಶ್ರೀನಿವಾಸಪುರ-ಮದನಪಲ್ಲಿ (75 ಕಿ.ಮೀ.) ಮಾರಿಕುಪ್ಪಂ-ಕುಪ್ಪಂ (23.7 ಕಿ.ಮೀ.) ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್‌ 1: ದೇವನಹಳ್ಳಿ-ಯಲಹಂಕ ಮತ್ತು ಕಾರಿಡಾರ್‌ 4: ರಾಜಾನುಕುಂಟೆ-ಯಲಹಂಕ ಮಾರ್ಗಗಳನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಅವರು ಕೋರಿದ್ದಾರೆ. 

ಹೆದ್ದಾರಿ ಯೋಜನೆಗಳಿಗೆ ಮನವಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆದ್ದಾರಿ ಯೋಜನೆಗಳನ್ನು ಜಾರಿ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಸಂಸದ ಡಾ.ಕೆ.ಸುಧಾಕರ್‌ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ NH-44 ಮತ್ತು NH-69 ರ ನಡುವೆ ಚತುಷ್ಫಥ ಹೊರವರ್ತುಲ ರಸ್ತೆ ನಿರ್ಮಿಸಲು ಕಾರ್ಯಸಾಧ್ಯತಾ ವರದಿ/ವಿಸ್ತೃತ ಯೋಜನಾ ವರದಿ ರೂಪಿಸಲು ಒಪ್ಪಿಗೆ ನೀಡಬೇಕು. 

ರಾಹುಲ್ ಗಾಂಧಿ ಸಮಸ್ತ ಹಿಂದುಗಳ ಕ್ಷಮೆ ಕೇಳಲಿ: ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಆಗ್ರಹ

ಚಿಕ್ಕಬಳ್ಳಾಪುರದಲ್ಲಿ NH-7 ನ ಎಲ್‌ಸಿ ನಂ. 39 ರಲ್ಲಿ ಚತುಷ್ಪಥ ರೈಲು ಮೇಲ್ಸೇತುವೆ ನಿರ್ಮಿಸಲು 40 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಬೇಕು. ಗೌರಿಬಿದನೂರಿನಲ್ಲಿ SH-9 ನಲ್ಲಿ ಚತುಷ್ಪಥ ರೈಲು ಮೇಲ್ಸೇತುವೆ ನಿರ್ಮಿಸಲು 75 ಕೋಟಿ ರೂ. ಅನುದಾನ ನೀಡಬೇಕು. NH-234 ರ ಅಗಲೀಕರಣದಿಂದ ಪ್ರಯಾಣದ ಅವಧಿ ಹಾಗೂ ದಟ್ಟಣೆ ಕಡಿಮೆಯಾಗಲಿದ್ದು, ಈ ಕುರಿತು ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

click me!