Ramanagara: ಅವ್ಯ​ವ​ಹಾರ ಲೋಕಾಯುಕ್ತ​ ತನಿ​ಖೆಗೆ ಶಿಫಾ​ರಸು: ಶಾಸಕ ಇಕ್ಬಾಲ್‌ ಹುಸೇನ್‌

By Kannadaprabha News  |  First Published Jun 15, 2023, 8:43 PM IST

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡುವ ಜೊತೆಗೆ ಸಾರ್ವಜನಿಕರಿಗೆ ನ್ಯಾಯ ಕೊಟ್ಟು ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಶಾಸಕ ಎಚ್‌.ಎ. ಇಕ್ಬಾಲ್‌ ಹುಸೇನ್‌ ತಿಳಿಸಿದರು. 


ರಾಮನಗರ (ಜೂ.15): ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡುವ ಜೊತೆಗೆ ಸಾರ್ವಜನಿಕರಿಗೆ ನ್ಯಾಯ ಕೊಟ್ಟು ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಶಾಸಕ ಎಚ್‌.ಎ. ಇಕ್ಬಾಲ್‌ ಹುಸೇನ್‌ ತಿಳಿಸಿದರು. ನಗರದ ಕೆಂಗಲ್‌ ಹನುಮಂತಯ್ಯ ಅಭಿವೃದ್ಧಿ ಸೌಧದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಅ​ಧಿಕಾರಿಗಳ ಸಭೆ ನಡೆಸಿದ ಅವರು, ಸಾರ್ವಜನಿಕರ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಧಿಕಾರ ರಚನೆಯಾಗಿದೆ. ಆದರೆ ಪ್ರಾಧಿಕಾರದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿರುವವರು ಕಾನೂನನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದ್ದು, ಜನರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ​ರು.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರವು ಜಿಗೇನಹಳ್ಳಿ/ಅರ್ಕಾವತಿ ವಸತಿ ಬಡಾವಣೆ, ಸುಣ್ಣಘಟ್ಟ/ಕಣ್ವ ಬಡಾವಣೆ, ಅರ್ಚಕರಹಳ್ಳಿ/ಹೆಲ್ತ ಸಿಟಿ ಮೂರು ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಿದ್ದು, ಯಾವುದಕ್ಕೂ ಅನುಮೋದಿತ ಬಡಾವಣೆಯ ನಕ್ಷೆಗಳು ಇಲ್ಲ, ನಿವೇಶನ ಪಡೆದವರಿಗೆ ನೊಂದಣಿ ಪತ್ರ ಬಿಟ್ಟರೆ ಮತ್ತೇನು ನೀ​ಡಿಲ್ಲ. ಅಷ್ಟೆಅಲ್ಲದೆ 2010ರಲ್ಲಿ ಚನ್ನಪಟ್ಟಣ ವಿವಾದಿತ ಸ್ಥಳದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಸೇರಿದಂತೆ ಅನಾವಶ್ಯಕ ಯೋಜನೆಗಳನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಅಧಿಕಾರಿಗಳು ಕಾನೂನು ಬಾಹಿರವಾಗಿ ಕೆಲಸಗಳನ್ನು ಕೈಗೆತ್ತಿಕೊಂಡು ನಗರಾಭಿವೃದ್ಧಿ ಪ್ರಾಧಿಕಾರವನ್ನು ನಷ್ಟಕ್ಕೆ ತಳ್ಳಿದ್ದಾರೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

Tap to resize

Latest Videos

ಜೆಡಿಎಸ್‌-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್‌.ಡಿ.ಕುಮಾರಸ್ವಾಮಿ

ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶಿವನಂಕರೀಗೌಡ ಶಾಸಕರಿಗೆ ಮಾಹಿತಿ ಒದಗಿಸಿ ಪ್ರಾಧಿಕಾರ ರಚನೆಯಾದಂದಿನಿಂದ ಮೂರು ಬಡಾವಣೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಬಡಾವಣೆಗಳಿಗೆ ಸಂಬಂಧಿ​ಸಿದ ಖಾತಾ ರಿಜಿಸ್ಟರ್‌, ಹರಾಜು ಪ್ರಕ್ರಿಯೆ ರಿಜಿಸ್ಟರ್‌, ಅಲಾಟ್ಮೆಂಚ್‌ ಹಾಗೂ ಫಲಾನುಭವಿಗಳ ಪಟ್ಟಿಅನುಮೋದನೆ ಆಗಿಲ್ಲ, ಇನ್ನೂ ಅರ್ಚಕರಹಳ್ಳಿ ಹೆಲ್ತ್‌ ಸಿಟಿ ವಸತಿ ಬಡಾವಣೆಯ ಭೂ ಮಾಲೀಕತ್ವ ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ಮುಂದುವರೆಯುತ್ತಿದೆ ಎಂದು ತಿಳಿಸಿದರು.

ಒಂದೇ ವಾರದ ಅಂತರ, ಒಂದೇ ಜಾಗದಲ್ಲಿ ಎರಡು ಚಿರತೆ ಸೆರೆ

ಆಗ ಶಾಸಕ ಇಕ್ಬಾಲ್‌ ಹುಸೇನ್‌, ವಸತಿ ಬಡಾವಣೆ ನಿರ್ಮಾಣ ಸಮಯದಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಲೋಕಾಯುಕ್ತಕ್ಕೆ ಶಿಫಾರಸು ಮಾಡುತ್ತೇನೆ. ಸಾರ್ವಜನಿಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಲು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಸರ್ಕಾರದ ಹಂತದಲ್ಲಿ ಕ್ರಮ ವಹಿಸಿ ನಷ್ಟಅನುಭವಿಸುತ್ತಿರುವ ಪ್ರಾಧಿಕಾರಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಸಭೆಯಲ್ಲಿ ನಗರ ಯೋಜನಾ ಸದಸ್ಯೆ ನಿಸರ್ಗ, ನಗರ ಯೋಜಕ ಚಂದ್ರಶೇಖರ್‌ ಪಟೇಲ ಮತ್ತಿ​ತ​ರರು ಹಾಜ​ರಿ​ದ್ದರು.

click me!