ಕಾಂಗ್ರೆಸ್‌ಗೆ ಮತ ನೀಡಿರುವುದು ಕೆಲಸಕ್ಕೋ, ಹೈಕಮಾಂಡ್‌ ಗುಲಾಮಗಿರಿಗೋ?: ಎಚ್‌ಡಿಕೆ

Published : Jun 15, 2023, 08:24 PM IST
ಕಾಂಗ್ರೆಸ್‌ಗೆ ಮತ ನೀಡಿರುವುದು ಕೆಲಸಕ್ಕೋ, ಹೈಕಮಾಂಡ್‌ ಗುಲಾಮಗಿರಿಗೋ?: ಎಚ್‌ಡಿಕೆ

ಸಾರಾಂಶ

ಸರ್ಕಾರದ ಅ​ಧಿಕಾರಿಗಳ ಜತೆ ಸಭೆ ನಡೆಸುವ ಅ​ಧಿಕಾರವನ್ನು ಸುರ್ಜೇವಾಲಗೆ ಕೊಟ್ಟವರು ಯಾರು. ರಾಜ್ಯದ ಜನ ಕಾಂಗ್ರೆಸ್‌ಗೆ ಮತ ನೀಡಿರುವುದು ಜನರ ಕೆಲಸ ಮಾಡುವುದಕ್ಕೋ ಅಥವಾ ದೆಹಲಿ ಹೈಕಮಾಂಡ್‌ ಗುಲಾಮಗಿರಿ ಮಾಡುವುದಕ್ಕೋ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ (ಜೂ.15): ಮೊನ್ನೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅ​ಧಿಕಾರಿಗಳ ಸಭೆ ನಡೆಸಿದ್ದಾರೆ. ಸರ್ಕಾರದ ಅ​ಧಿಕಾರಿಗಳ ಜತೆ ಸಭೆ ನಡೆಸುವ ಅ​ಧಿಕಾರವನ್ನು ಸುರ್ಜೇವಾಲಗೆ ಕೊಟ್ಟವರು ಯಾರು. ರಾಜ್ಯದ ಜನ ಕಾಂಗ್ರೆಸ್‌ಗೆ ಮತ ನೀಡಿರುವುದು ಜನರ ಕೆಲಸ ಮಾಡುವುದಕ್ಕೋ ಅಥವಾ ದೆಹಲಿ ಹೈಕಮಾಂಡ್‌ ಗುಲಾಮಗಿರಿ ಮಾಡುವುದಕ್ಕೋ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದ ಎ.ವಿ.ಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿಗೂ ರಾಜ್ಯದ ಜನತೆಗೂ ಸಂಬಂಧ ಇಲ್ಲ. ಸರ್ಕಾರದ ಅಧಿ​ಕಾರಿಗಳ ಜೊತೆ ಸಭೆ ಮಾಡುವ ಯಾವುದೇ ಅ​ಧಿಕಾರ ಇಲ್ಲ. ಮೊನ್ನೆ ಅವರು ಸಭೆ ನಡೆಸುವ ಫೋಟೊ ಹೊರಬಂದಿದೆ. ಕಾಂಗ್ರೆಸ್‌ ಸರ್ಕಾರದ ಸಚಿವರೇ ಅದನ್ನು ಹೊರಗೆ ಬಿಟ್ಟಿದ್ದಾರೆ ಎಂದು ಬಾಂಬ್‌ ಸಿಡಿಸಿದರು.

ಜೆಡಿಎಸ್‌-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್‌.ಡಿ.ಕುಮಾರಸ್ವಾಮಿ

ಅವರನ್ನೇ ಸಿಎಂ ಮಾಡಿ: ಕಾಂಗ್ರೆಸ್‌ನವರು ಅ​ಧಿಕಾರಕ್ಕೆ ಬಂದು ಇನ್ನೂ 15ದಿನ ಆಗಿಲ್ಲ. ಆಗಲೇ ಇದೆಲ್ಲ ಶುರುಮಾಡಿಕೊಂಡಿದ್ದಾರೆ. ನಿಮ್ಮ ಪ್ರತಿನಿ​ಧಿ ಜನರನ್ನು ಉದ್ಧಾರ ಮಾಡೋದಿಕ್ಕೆ ಬಂದಿಲ್ಲ, ಬಂದಿರುವುದು ವಸೂಲಿ ಮಾಡುವುದಕ್ಕೆ. ಈ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಸಂಪತ್ತನ್ನು ಯಾವ ರೀತಿ ಲೂಟಿ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ. ನಿಮ್ಮ ಪಕ್ಷದಿಂದ ನಿಮಗೆ ಯಾವುದಾದರೂ ಸೂಚನೆ ಇದ್ದರೆ ಕಾಂಗ್ರೆಸ್‌ ಕಚೇರಿ ಒಳಗೆ ಸಭೆ ಮಾಡಿಕೊಳ್ಳಿ. ಸರ್ಕಾರಿ ಅ​ಕಾರಿಗಳ ಜತೆ ಕೂತು ಸೂಚನೆ ಮಾಡೋದ ಸರಿಯಲ್ಲ. ಹಾಗೇ ಮಾಡುವುದಾದರೆ ಅವರನ್ನೇ ಮುಖ್ಯಮಂತ್ರಿ ಮಾಡ್ಕೊಳಿ ಎಂದು ಕಿಡಿಕಾರಿದರು.

ಡಿಸಿಎಂ ಸುಳ್ಳಿಗೆ ಇದೇ ಸಾಕ್ಷಿ: ಸುರ್ಜೇವಾಲ ಸಭೆಯ ಕುರಿತಂತೆ ಉಪಮುಖ್ಯಮಂತ್ರಿ, ಅದ್ಯಾವೂದೋ ಶ್ಯಾಂಗ್ರೀಲಾ ಹೋಟೆಲ್‌ನಲ್ಲಿ ಅವರು ಇದ್ದರಂತೆ, ಅವರನ್ನು ಕರೆದುಕೊಂಡು ಹೋಗಲು ಅ​ಧಿಕಾರಿಗಳು ಬಂದರಂತೆ. ಯಾವುದೇ ಸಭೇ ಮಾಡಿಲ್ಲ ಎಂದು ಹೇಳುತ್ತಾರೆ. ಆಗಿದ್ದರೆ ಆ ಟೇಬಲ್‌ ಮೇಲೆ ಕೂತಿದ್ದವರೆಲ್ಲ ಯಾರು. ಅಲ್ಲಿ ಸಭೆ ನಡೆಸಿ ತೆಗೆದುಕೊಂಡಿರುವ ನಡಾವಳಿ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲೂ ಬಂದಿದೆ. ಇದನ್ನು ನೋಡಿದರೆ ನಾಡಿನ ಜನತೆಗೆ ಎಷ್ಟರ ಮಟ್ಟಿಗೆ ಮಂಕುಬೂದಿ ಎರಚಿದ್ದಾರೆ ಅಂತ ಗೊತ್ತಾಗುತ್ತದೆ. ಉಪಮುಖ್ಯಮಂತ್ರಿ ಎಷ್ಟುಸುಳ್ಳು ಹೇಳುತ್ತಾರೆ ಅನ್ನುವುದಕ್ಕೆ ಸಾಕ್ಷಿ ಎಂದರು.

ಜನ ಕಾಂಗ್ರೆಸ್‌ನವರಿಗೆ ಮತ ಕೊಟ್ಟಿರೋದು ರಾಜ್ಯದ ಮಂತ್ರಿಗಳು ಕೆಲಸ ಮಾಡೋದಿಕ್ಕೋ. ಅಥವಾ ದೆಹಲಿ ಹೈಕಮಾಂಡ್‌ನ ಗುಲಾಮಗಿರಿ ಮಾಡೋದಿಕ್ಕೋ. ಸುರ್ಜೇವಾಲಾ ಮೀಟಿಂಗ್‌ ಮಾಡಲು ಯಾರು ಪವರ್‌ ಕೊಟ್ಟಿದ್ದು. ಈ ವಿಚಾರ ಕೇಳಿದರೆ ಸರ್ಕಾರ ಲಘುವಾಗಿ ಉಡಾಫೆ ಉತ್ತರ ಕೊಡುತ್ತಿದೆ. ಈ ಕೆಲಸ ಮಾಡೇ ಬಿಜೆಪಿಯವರು ಮನೆಗೆ ಹೋಗಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಯೊಂದಕ್ಕೂ ಅಲ್ಲಿಂದಲೇ ಡೈರೆಕ್ಷನ್‌: ರಾಜ್ಯದ ಹಿತದೃಷ್ಟಿಯಿಂದ ಕನ್ನಡಿಗರಿಗಾಗಿ ಕನ್ನಡಿಗನಿಗೆ ಅಧಿ​ಕಾರ ಕೊಡಿ ಎಂದು ರಾಜ್ಯ ಜನರನ್ನು ಕೇಳಿಕೊಂಡೆ. ರಾಷ್ಟ್ರೀಯ ಪಕ್ಷಗಳಿಗೆ ಅ​ಧಿಕಾರ ಕೊಡಬೇಡಿ ಅಂತಾ ದಿನ ಜಾಗಟೆ ಹೊಡೆದೆ. ಇವತ್ತು ಪ್ರತಿಯೊಂದಕ್ಕೂ ಅಲ್ಲಿಂದಲೇ ಡೈರೆಕ್ಷನ್‌ ಬರಬೇಕು. ಈಗ ಗ್ಯಾರಂಟಿಗಳ ಬಗ್ಗೆ ಅವರೇ ಬೆನ್ನುತಟ್ಟಿಕೊಳ್ತಿದ್ದಾರೆ. ಅದು ಏನೇನ್‌ ಆಗುತ್ತೋ ನೋಡೊಣ. ಅವರು ಏನು ಮಾತು ಕೊಟ್ಟಿದ್ದಾರೆ ಹಾಗೆ ನಡೆದುಕೊಳ್ಳಲಿ. ಅದೇನೋ ನುಡಿದಂತೆ ನಡೆದ ಸರ್ಕಾರ ಅಂತ ಹೇಳ್ತಿದ್ದಾರಲ್ಲ ಮಾಡಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಹಾಗೂ ಬಿಜೆಪಿ ಒಳ ಒಪ್ಪಂದ ಕುರಿತು ಪ್ರತಾಪ್‌ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಜೆಡಿಎಸ್‌ ಅನ್ನು ಬಿಜೆಪಿಯ ಬಿ ಟೀಂ ಅಂತ ಹೇಳುತ್ತಿದ್ದರಲ್ಲ. ಇವತ್ತು ಪ್ರತಾಪ್‌ ಸಿಂಹ ಏನು ಹೇಳಿದ್ದಾರೆ. ಸತ್ಯ ಏನಿದೆ ಅಂತ ಬಿಜೆಪಿ-ಕಾಂಗ್ರೆಸ್‌ನವರು ಹೇಳಬೇಕು. ಅರ್ಕಾವತಿ ಕರ್ಮಕಾಂಡದ ಬಗ್ಗೆ ಬೊಮ್ಮಾಯಿ ಯಾಕೆ ತನಿಖೆ ಮಾಡಲಿಲ್ಲ. ಮೂರು ವರ್ಷ ಇವರದ್ದೇ ಸರ್ಕಾರದ ಅಧಿ​ಕಾರ ಇತ್ತಲ್ಲ ಯಾಕೆ ಅವರನ್ನು ಸೆರಗಲ್ಲಿ ಇಟ್ಕೊಂಡಿದ್ರಿ ಎಂದು ಪ್ರಶ್ನಿಸಿದರು.

ಈಗ ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರದ ಅವ​ಧಿಯ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ತನಿಖೆ ಆಗುವುದಿಲ್ಲ, ಇದನ್ನು ಬರೆದಿಟ್ಟುಕೊಳ್ಳಿ. ಯಾವ ತನಿಖೆಯಿಂದಲೂ ರಾಜ್ಯ ಲೂಟಿ ಮಾಡಿದವರಿಗೆ ಏನೂ ತೊಂದರೆ ಆಗಲ್ಲ. ಬಿಜೆಪಿ ಸರ್ಕಾರದಲ್ಲೂ ತನಿಖೆ ನಡೆದು ಎಲ್ಲಾ ಹಳ್ಳಹಿಡಿತು. ಯಾವುದಕ್ಕೂ ತಾರ್ಕಿಕ ಅಂತ್ಯ ಸಿಗಲಿಲ್ಲ. ಬಿಜೆಪಿ- ಕಾಂಗ್ರೆಸ್‌ ಹೊಂದಾಣಿಕೆ ಬಗ್ಗೆ ಪ್ರತಾಪ್‌ ಸಿಂಹ ಹೇಳಾಯ್ತು, ಸಿ.ಟಿ.ರವಿ ಹೇಳಾಯ್ತು ಎಂದು ವ್ಯಂಗ್ಯವಾಡಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು

ಪರಮೇಶ್ವರ್‌ ರೇಸ್‌ನಲ್ಲಿಲ್ಲವಾ?: ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಹಲವು ಮಂದಿ ಇದ್ದಾರೆ. ಸಚಿವ ಪರಮೇಶ್ವರ್‌ ರೇಸ್‌ನಲ್ಲಿಲ್ಲವಾ ಎಂದು ಪ್ರಶ್ನಿಸಿದ ಎಚ್‌ಡಿಕೆ, ಮೊನ್ನೆ ಸಿದ್ದರಾಮಯ್ಯ ದಲಿತರ ಸಭೆ ಮಾಡಿ ಎಲ್ಲರೂ ಒಗಟ್ಟಾಗಿರಬೇಕು ಎಂದು ಡಂಗೂರ ಹೊಡೆದರು. ಆದರೆ ಪರಮೇಶ್ವರ್‌ ಅವರೇ ನಮ್ಮ ಪಕ್ಷದಲ್ಲಿ ದಲಿತ ಸಿಎಂ ಬಗ್ಗೆ ಧ್ವನಿ ಎತ್ತಿಲ್ಲ ಅಂದಿದ್ದಾರೆ. 2013ರಲ್ಲಿ ಕಾಂಗ್ರೆಸ್‌ ಅ​ಧಿಕಾರಕ್ಕೆ ಬಂದಾಗ ನಾನೇ ಪಕ್ಷದ ಅಧ್ಯಕ್ಷ ಆಗಿದ್ದೆ. ಆಗ ನನ್ನ ಹೆಸರ ಯಾರೂ ಹೇಳಲಿಲ್ಲ ಅಂತ ಪರಮೇಶ್ವರ್‌ ಅವರೇ ಹೇಳಿದ್ದಾರೆ. ಈಗ ಅವರು ವಿಮರ್ಶೆ ಶುರು ಮಾಡಿದ್ದಾರೆ. ಅದರಿಂದ ಆ ಪಕ್ಷದಲ್ಲಿ ಜನತೆಯ ಸಮಸ್ಯೆಗಿಂತ ಹೆಚ್ಚಾಗಿ ಆಂತರಿಕ ಕಲಹ ಹೆಚ್ಚಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ