ರಾಹುಲ್‌ ಗಾಂಧಿಯೊಂದಿಗೆ ಜೈಲಿಗೆ ಹೋಗಲು ಸಿದ್ಧ: ಕಾಂಗ್ರೆಸ್ ಮುಖಂಡ

Published : Mar 30, 2023, 08:21 AM IST
ರಾಹುಲ್‌ ಗಾಂಧಿಯೊಂದಿಗೆ ಜೈಲಿಗೆ ಹೋಗಲು ಸಿದ್ಧ: ಕಾಂಗ್ರೆಸ್ ಮುಖಂಡ

ಸಾರಾಂಶ

ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ನಗರದ ಮಹಾತ್ಮ ಗಾಂಧಿ ಪಾರ್ಕ್ನಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರು (ಮಾ.30) : ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ನಗರದ ಮಹಾತ್ಮ ಗಾಂಧಿ ಪಾರ್ಕ್ನಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಂ.ಎಲ್‌.ಮೂರ್ತಿ(ML Murthy) ಮಾತನಾಡಿ, ಮೋದಿ(Narendra Modi) ಎಂದಕೂಡಲೆ ಇಂತಹ ಜಾತಿ ಹೆಸರು ಎಂದು ಹೇಳುವುದು ಸರಿಯಲ್ಲ, ರಾಹುಲ್‌ ಗಾಂಧಿ(Rahul gandhi) ಕೈಗೊಂಡಿದ್ದ ಭಾರತ್‌ ಜೋಡೋ ಯಾತ್ರೆ(Bharat Jodo yatre)ಯಿಂದ ಬಿಜೆಪಿಗೆ ನಡುಕ ಶುರುವಾಗಿದೆ. ರಾಹುಲ್‌ ಗಾಂಧಿ ಜನಸಾಮಾನ್ಯರೊಂದಿಗೆ ಬೆರೆತು ನಾನು ಓರ್ವ ಸಾಮಾನ್ಯರಲ್ಲಿ ಎಂದು ರುಜುವಾತು ಪಡಿಸುವ ಮೂಲಕ ಜನಪ್ರಿಯ ನಾಯಕರಗಿ ಬೆಳೆದಿದ್ದಾರೆ ಎಂದು ಹೇಳಿದರು.

ಮೀಸಲಾತಿ ವಿಚಾರದಲ್ಲಿ ತಾರತಮ್ಯ ಮಾಡಲು ನಮ್ಮದು ಕಾಂಗ್ರೆಸ್‌ ಸರ್ಕಾರವಲ್ಲ: ಸಿ.ಟಿ.ರವಿ

ಕಾನೂನು ಬರಿ ಕಾಂಗ್ರೆಸ್ಸಿಗರಿಗೆ ಅನ್ವಯವಾಗುತ್ತದೋ ಅಥವಾ ಬಿಜೆಪಿಗರಿಗೂ ಅನ್ವಯವಾಗುತ್ತದೋ, ಬಿಜೆಪಿಯ ಹಲವು ಪ್ರತಿನಿಧಿಗಳು ಹಗರಣಗಳಲ್ಲಿ ಭಾಗಿಯಾಗಿದ್ದರೂ ಅವರನ್ನು ಏಕೆ ವಜಾ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.

ದೇಶದಲ್ಲಾಗು​ತ್ತಿ​ರುವ ವಂಚನೆ, ಹಗ​ರ​ಣ​ಗಳ ಬಗ್ಗೆ ಪ್ರಶ್ನಿ​ವು​ದು ಪ್ರತಿಯೊಬ್ಬ ಪ್ರಜೆಯ ಹಕ್ಕು, ಹಾಗಾಗಿ ಇದನ್ನು ಮುಂದುವರೆಸುತ್ತೇವೆ. ರಾಹುಲ್‌ ಗಾಂಧಿಯವರು ದಂಡ ಕಟ್ಟುವುದಿಲ್ಲ, ಜೈಲಿಗೆ ಹೋಗಲು ಸಿದ್ಧ ಆದರೆ ಕ್ಷಮೆ ಕೇಳು​ವು​ದಿಲ್ಲ ಎಂದಿ​ದ್ದಾರೆ. ನಾವು ಕೂಡ ರಾಹುಲ್‌ ಗಾಂಧಿಯವರೊಂದಿಗೆ ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದರು. ಇಡೀ ದೇಶದಲ್ಲಿ ಬಿಜೆಪಿಯವರ ಮನೆಗಳನ್ನು ಐಟಿಯವರು ರೈಡ್‌ ಮಾಡಿಲ್ಲ, ಆದರೆ ರಾಜಕೀಯ ಪ್ರಬಲ ವ್ಯಕ್ತಿ​ಯಾ​ಗಿ​ದ್ದಾ​ರೆ ಅವರ ಮನೆ ಮೇಲೆ ದಾಳಿ ಆಗು​ತ್ತದೆ.

ಬಿಜೆಪಿಗರಾರ‍ಯರು ಲೂಟಿ ಮಾಡಿಲ್ಲವಾ, ಯಾವ ಕ್ಷೇತ್ರದಲ್ಲಿ ನೋಡಿದರೂ ಭ್ರಷ್ಟಾಚಾರ ಮಾಡಿದ್ದಾರೆ ಆದರೆ ಜಾರಿ ನಿರ್ದೇ​ಶ​ನಾ​ಲ​ಯಕ್ಕೆ ಇದು ಕಾಣುವುದಿಲ್ಲವಾ ಇದನ್ನೆಲ್ಲಾ ಪ್ರಶ್ನಿಸಿದ್ದಕ್ಕೆ ರಾಹುಲ್‌ ಗಾಂಧಿಯವರ ಬಾಯಿ ಮುಚ್ಚಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದ್ದು ಹೀಗೆ ಇವರನ್ನು ಬಿಟ್ಟುಕೊಂಡು ಹೋದರೆ ದೇಶದಲ್ಲಿ ಮತ್ತೊಂದು ಸ್ವಾಂತಂತ್ರ್ಯ ಚಳವಳಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಜನರಿಗೆ ಬರುತ್ತದೆ. ಇಂದು ಜನ ಮೌನವಾಗಿದ್ದಾರೆ ಜಾಗೃತರಾಗಿ ಅನ್ಯಾಯ​ದ ವಿರುದ್ಧ ಹೋರಾಟ ಮಾಡಬೇಕು. ಇಂತಹ ವಾತಾವವರಣದಲ್ಲಿ ಮೌನವಾಗಿದ್ದರೆ ಪ್ರಜಾತಂತ್ರ ಹರಣವಾಗುತ್ತದೆ ಎಂದು ಕಿಡಿಕಾರಿದರು.

Ticket fight: ಕಾಫಿನಾಡು ಮೂಡಿಗೆರೆಯಲ್ಲಿ ಮುಗಿಯದ ಬಿಜೆಪಿ ಬಣ ರಾಜಕೀಯ!

ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಪುಟ್ಟೇಗೌಡ, ಎಚ್‌.ಎಂ.ಸತೀಶ್‌, ನಯಾಜ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಂಪಾಪುರ ಮಂಜೇಗೌಡ, ಹಿರೇಮಗಳೂರು ರಾಮಚಂದ್ರ, ಮಲ್ಲೇಶ್‌, ಎಂ.ಡಿ.ರಮೇಶ್‌, ಜಯರಾಜ್‌ ಅರಸ್‌, ಪ್ರಶಾಂತ್‌, ಆನಂದ್‌ ಹಾಗೂ ಕಾರ್ಯಕರ್ತರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!