ನಿಖರ ಮತ್ತು ಸ್ಪಷ್ಟ ಫಲಿತಾಂಶ ಹೇಳಿದವರಿಗೆ ಸಿಗಲಿದೆ 10 ಲಕ್ಷ!

By Gowthami K  |  First Published May 12, 2023, 6:18 PM IST

ಮಂಗಳೂರಿನ ವಿಚಾರವಾದಿ ಫ್ರೊ.ನರೇಂದ್ರ ನಾಯಕ್ ಭವಿಷ್ಯ ನುಡಿಯೋ ಜ್ಯೋತಿಷ್ಯರಿಗೆ ಮಹಾ ಸವಾಲು ಹಾಕಿದ್ದಾರೆ. ನರೇಂದ್ರ ನಾಯಕ್ ಸವಾಲಿನ ಪ್ರಶ್ನೆಗಳಿಗೆ ಉತ್ತರಗಳು ಹರಿದು ಬಂದಿದೆ.


ಮಂಗಳೂರು (ಮೇ.12): ಮಂಗಳೂರಿನ ವಿಚಾರವಾದಿ ಫ್ರೊ.ನರೇಂದ್ರ ನಾಯಕ್ ಭವಿಷ್ಯ ನುಡಿಯೋ ಜ್ಯೋತಿಷ್ಯರಿಗೆ ಮಹಾ ಸವಾಲು ಹಾಕಿದ್ದಾರೆ. ನರೇಂದ್ರ ನಾಯಕ್ ಸವಾಲಿನ ಪ್ರಶ್ನೆಗಳಿಗೆ ಉತ್ತರಗಳು ಹರಿದು ಬಂದಿದೆ. ಸ್ಪಷ್ಟ ಮತ್ತು‌ ನಿಖರ ಫಲಿತಾಂಶದ ಭವಿಷ್ಯ ನುಡಿಯಲು ಸವಾಲು ನಾಯಕ್ ಹಾಕಿದ್ದರು. ಸವಾಲಿನ ಬೆನ್ನಲ್ಲೇ ವಾಟ್ಸಪ್, ಪತ್ರಗಳ ಮೂಲಕ ನಾಯಕ್ ಗೆ ಉತ್ತರ ನೀಡಲಾಗಿದೆ.  ಒಟ್ಟು 20 ಪ್ರಶ್ನೆಗಳ ಪೈಕಿ 19 ಪ್ರಶ್ನೆಗೆ ಉತ್ತರಿಸಿದವರಿಗೆ 10 ಲಕ್ಷ ಘೋಷಣೆಯಾಗಿದೆ.

ಯಾವ ಸರ್ಕಾರ ಬರುತ್ತೆ, ಬಿಜೆಪಿಗೆ ಎಷ್ಟು ಸೀಟ್, ಕಾಂಗ್ರೆಸ್ ಗೆ ಎಷ್ಟು? ಜೆಡಿಎಸ್ ಗೆ ಎಷ್ಟು ಸೀಟ್? ಸಿದ್ದರಾಮಯ್ಯ, ಕುಮಾರಸ್ವಾಮಿ, ಬೊಮ್ಮಾಯಿ ಪಡೆಯೋ ನಿಖರ ಮತಗಳೆಷ್ಟು? ಹೀಗೆ ಸುಮಾರು 20 ಪ್ರಶ್ನೆಗಳಿಗೆ ಹಲವು ಜ್ಯೋತಿಷಿಗಳು, ಜನ ಸಾಮಾನ್ಯರು ಉತ್ತರ ನೀಡಿದ್ದಾರೆ.

Tap to resize

Latest Videos

31000 ಮತಗಟ್ಟೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಲೀಡ್‌: ಬಿ.ಎಲ್‌.ಸಂತೋಷ್‌

ಈಗಾಗಲೇ ಉತ್ತರ ಕಳುಹಿಸಲು ಹಾಕಿದ್ದ ಡೆಡ್ ಲೈನ್ ಮುಕ್ತಾಯವಾಗಿದ್ದು, ಸದ್ಯ ನರೇಂದ್ರ ನಾಯಕ್ ಗೆ ಹಲವರು ಉತ್ತರಗಳು ತಲುಪಿದೆ. ಫಲಿತಾಂಶದ ಬಳಿಕ ಯಾರಾಗ್ತಾರೆ 10 ಲಕ್ಷದ ವಿನ್ನರ್? ಎಂಬ ಕುತೂಹಲ ಹೆಚ್ಚಿದೆ.

ಬಿಜೆಪಿ 125 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ: ಕೋಟ ಶ್ರೀನಿವಾಸ ಪೂಜಾರಿ

ಕೆಲವು ಅಭ್ಯರ್ಥಿಗಳು ಪಡೆಯುವ ಮತಗಳನ್ನೂ ನಿಖರವಾಗಿ ಹೇಳಬೇಕು. ಜ್ಯೋತಿಷಿಗಳಿಗೆ ಈ ಪಂಥದಲ್ಲಿ ಮೊದಲ ಪ್ರಾಶಸ್ತ್ಯ ನೀಡಿದ್ದೆ. ಜ್ಯೋತಿಷ್ಯಿಗಳು ಮದುವೆ ಸೇರಿದಂತೆ ಇತರ ಬಗ್ಗೆ ಭವಿಷ್ಯ ಹೇಳುತ್ತಾರೆ. ಈ ಚುನಾವಣೆ ಬಗ್ಗೆ ನಿಖರ ಫಲಿತಾಂಶ ಹೇಳಲಿ ಎಂದು ನರೇಂದ್ರ ನಾಯಕ್  ಹೇಳಿದ್ದಾರೆ.

click me!