31000 ಮತಗಟ್ಟೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಲೀಡ್‌: ಬಿ.ಎಲ್‌.ಸಂತೋಷ್‌

By Govindaraj S  |  First Published May 12, 2023, 5:40 PM IST

ರಾಜ್ಯದ 31 ಸಾವಿರ ಮತಗಟ್ಟೆಗಳಲ್ಲಿ ಸ್ಪಷ್ಟವಾಗಿ ಬಿಜೆಪಿಗೆ ಲೀಡ್‌ ಬರಲಿದ್ದು, ರಾಜ್ಯದಲ್ಲಿ ಬಿಜೆಪಿ ಪ್ರಖ್ಯಾತ ಸಮೀಕ್ಷೆಗಳ ಊಹೆಗೂ ಮೀರಿದ ಸಾಧನೆ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಬೆಂಗಳೂರು (ಮೇ.12): ರಾಜ್ಯದ 31 ಸಾವಿರ ಮತಗಟ್ಟೆಗಳಲ್ಲಿ ಸ್ಪಷ್ಟವಾಗಿ ಬಿಜೆಪಿಗೆ ಲೀಡ್‌ ಬರಲಿದ್ದು, ರಾಜ್ಯದಲ್ಲಿ ಬಿಜೆಪಿ ಪ್ರಖ್ಯಾತ ಸಮೀಕ್ಷೆಗಳ ಊಹೆಗೂ ಮೀರಿದ ಸಾಧನೆ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಗುರುವಾರ ಟ್ವೀಟ್‌ ಮಾಡಿರುವ ಸಂತೋಷ್‌ ಅವರು, ಲಂಕೆಯಲ್ಲಿ ಶ್ರೀರಾಮನಿಗಾಗಿ ವಾನರ ಸೇನೆ ಯುದ್ಧ ಗೆದ್ದಂತೆ ಬಿಜೆಪಿಗಾಗಿ ಬೂತ್‌ ಮಟ್ಟಗಳಲ್ಲಿ ಬೂತ್‌ ಸಮಿತಿ ಕಾರ್ಯಕರ್ತರು ಹಾಗೂ ಪೇಜ್‌ ಪ್ರಮುಖರು ಜಯ ಸಾಧಿಸಲಿದ್ದಾರೆ ಎಂದಿದ್ದಾರೆ. 

‘ಈ ಗೌರವಾನ್ವಿತ ಪ್ರಖ್ಯಾತ ಸಮೀಕ್ಷೆಗಳ ಯಾರೊಬ್ಬರೂ 2014ರಲ್ಲಿ 282 ಅಥವಾ 2019ರಲ್ಲಿ 303 ಹಾಗೂ 2022ರಲ್ಲಿ 156 ಬರುತ್ತವೆ ಎಂದು ಭವಿಷ್ಯ ಹೇಳಿರಲಿಲ್ಲ. ಹಾಗೆಯೇ 2018ರಲ್ಲಿ 104 ಸ್ಥಾನಗಳು ಬರುತ್ತವೆ ಎಂದು ಸಹ ಊಹಿಸಿರಲಿಲ್ಲ. 2018ರಲ್ಲಿ 24 ಸಾವಿರ ಬೂತ್‌ಗಳಲ್ಲಿ ಬಿಜೆಪಿ ಲೀಡ್‌ ಪಡೆದಿತ್ತು. ಈ ಬಾರಿ 31 ಸಾವಿರ ಬೂತ್‌ಗಳಲ್ಲಿ ಪಕ್ಷ ಭಾರಿ ಮುನ್ನಡೆ ಸಾಧಿಸಲಿದೆ. ಹಾಗಾದರೆ ಸಂಖ್ಯೆ ನೀವೇ ಊಹಿಸಿ’ ಎಂದಿದ್ದಾರೆ.

Tap to resize

Latest Videos

ಯಡಿಯೂರಪ್ಪ ಪತ್ರ ಬರೆ​ದಿ​ದ್ದು ನೀತಿ ಸಂಹಿತೆ ಉಲ್ಲಂಘನೆ: ಆಯನೂರು ಮಂಜುನಾಥ್‌

ಕಾಂಗ್ರೆಸ್‌ ತನ್ನ ಜಾಲದಲ್ಲಿ ತಾನೇ ಸಿಲುಕಿದೆ: ‘ಪ್ರಾರಂಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಚಾರ ಕಾರ್ಯ ಅಬ್ಬರದಲ್ಲಿತ್ತು. ಆದರೆ ಬಿಜೆಪಿಯ ಪ್ರಚಾರ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಆರಂಭವಾಗಿ ಮುನ್ನಡೆಯುತ್ತಿದ್ದು ಬಹುಮತ ಗಳಿಸುವ ಹಾದಿಯಲ್ಲಿದೆ’ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದ್ದಾರೆ. ಟ್ವೀಟರ್‌ ಸ್ಪೇಸ್‌ನಲ್ಲಿ ಶುಕ್ರವಾರ ಮಾತನಾಡಿದ ಅವರು, ‘ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಪ್ರಸ್ತಾಪಿಸಿ ಕಾಂಗ್ರೆಸ್‌ ಸ್ವತ ತಾನೇ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಸುವಲ್ಲಿ ವಿಪಕ್ಷಗಳು ಯಶಸ್ವಿಯಾಗಿಲ್ಲ. 

Karnataka Election 2023: ಮತ​ದಾ​ನ​ದಲ್ಲಿ ರಾಮ​ನ​ಗರಕ್ಕೆ ರಾಜ್ಯ​ದ​ಲ್ಲಿಯೇ 2ನೇ ಸ್ಥಾನ

ನಮಗೆ ಹಾನಿಯಾಗುವ ಯಾವುದೇ ಆಡಳಿತ ವಿರೋಧಿ ಅಲೆ ಇಲ್ಲ. ಬಿಜೆಪಿ ಪ್ರಣಾಳಿಕೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ’ ಎಂದರು. ಅಲ್ಲದೇ ಈ ವೇಳೆ ವಂದೇ ಭಾರತ್‌, ಕೋವಿಡ್‌ ನೀತಿಯಂತ ಬಿಜೆಪಿ ಸರ್ಕಾರದ ಸಾಧನೆಗಳನ್ನು ಶ್ಲಾಘಿಸಿ ಬಜರಂಗದಳವನ್ನು ‘ರಾಷ್ಟ್ರ ನಿರ್ಮಾಣ ಶಕ್ತಿ’ ಎಂದು ಬಣ್ಣಿಸಿದರು. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.

click me!