ತ್ಯಾಗರ್ತಿ ( ಅ.29): ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಹುಟ್ಟುಸಾವಿನ ನಡುವೆ ಸಾಕ್ಷಿಗುಡ್ಡವನ್ನು ನಿರ್ಮಿಸುವುದು ಅಗತ್ಯ. ಅಂತಹ ಸಾಕ್ಷಿಗುಡ್ಡ ನಿರ್ಮಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತ ಎಂ. ಎಲ್.ರಮೇಶ್ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.ಬಚ್ಚಾ
ರಾಹುಲ್ ಗಾಂಧಿ ಪ್ರಧಾನಿ ಟೀಕೆ ಮಾಡ್ತಾನೆ, ಕಾಂಗ್ರೆಸ್ ವಿರುದ್ಧ ಗುಡುಗಿದ ಬಿಎಸ್‌ವೈ !
ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುತ್ತದಿಂಬ ಗ್ರಾಮದ ರಮೇಶ್ ಇತ್ತೀಚೆಗೆ ಹಿರಿಯೂರಿನಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಹಿಂತಿರುಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರ ಮನೆಗೆ ಶುಕ್ರವಾರ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ರಮೇಶ್ ಕುಟುಂಬಕ್ಕೆ ಸಾಂತ್ವನ ಹೇಳಿ, ಅವರ ಕುಟುಂಬಕ್ಕೆ 10 ಲಕ್ಷ ರು. ಚೆಕ್ ವಿತರಿಸಿ ಮಾತನಾಡಿದರು. ರಮೇಶ್ ಅವರದ್ದು ಸಾವಲ್ಲ, ಅದು ದೇಶ ಸೇವೆಗೆ ಸಮರ್ಪಣೆಯಾದ ಜೀವ. ಪ್ರಮುಖ ಐದು ಅಂಶಗಳನ್ನು ಇರಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಹುತ್ತದಿಂಬ ಕಾಂಗ್ರೆಸ್ ಬೂತ್ ಅಧ್ಯಕ್ಷ ರಮೇಶ್ ಪಾಲ್ಗೊಂಡು ದೇಶಸೇವೆ ಮಾಡಿದ್ದಾರೆ. ಅಂತಹ ತ್ಯಾಗಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳುವುದು ಆದ್ಯಕರ್ತವ್ಯ. ಮೃತ ರಮೇಶ್ ಕುಟುಂಬದ ಜೊತೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದರು.
ನನಗೆ ಅತೀವ ಸಂತೋಷ:
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಪಾದಯಾತ್ರೆಯಲ್ಲಿ ಪಾಲ್ಗೊಂಡು ಅಪಘಾತದಲ್ಲಿ ಮೃತಪಟ್ಟರಮೇಶ್ ಮನೆಗೆ ಕೆಪಿಸಿಸಿ ಅಧ್ಯಕ್ಷರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ನನಗೆ ಅತೀವ ಸಂತೋಷ ತಂದಿದೆ. ಸಂಕಷ್ಟದ ಸಮಯದಲ್ಲಿಯೂ ಪಕ್ಷ ನಿಮ್ಮ ಜೊತೆ ಇದೆ ಎನ್ನುವ ಸಂದೇಶವನ್ನು ಡಿ.ಕೆ.ಶಿವಕುಮಾರ್ ನೀಡಿದ್ದಾರೆ. ಪಕ್ಷ ಓರ್ವ ನಿಷ್ಠಾವಂತ ಕಾರ್ಯಕರ್ತನ ಕಳೆದುಕೊಂಡಿದೆ ಎಂದು ಹೇಳಿದರು.
ಸಾಂತ್ವಾನದ ಜೊತೆಗೆ ಪರಿಹಾರ:
ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಮೇಶ್ ಅಪಘಾತದಲ್ಲಿ ಮೃತಪಟ್ಟಿದ್ದು ಅತ್ಯಂತ ನೋವಿನ ಸಂಗತಿ. ರಮೇಶ್ ಮೃತಪಟ್ಟದಿನ ನಾನು, ಡಾ.ರಾಜನಂದಿನಿ ಸೇರಿ ಅನೇಕ ಪ್ರಮುಖರು ಸ್ಥಳದಲ್ಲಿದ್ದು ಅಗತ್ಯ ಕ್ರಮ ಕೈಗೊಂಡಿದ್ದೇವೆ. ವಿಷಯವನ್ನು ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದಾಗ ಆರಂಭದಲ್ಲಿ 5 ಲಕ್ಷ ರು. ಪರಿಹಾರ ನೀಡುತ್ತೇವೆ ಎಂದು ಹೇಳಿದ್ದರು. ನಂತರ 10 ಲಕ್ಷ ನೀಡುವುದಾಗಿ ತಿಳಿಸಿ, ಇದೀಗ ಕುಟುಂಬಕ್ಕೆ ಸಾಂತ್ವಾನದ ಜೊತೆಗೆ ಪರಿಹಾರ ನೀಡಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಪ್ರಧಾನ ಕಾರ್ಯದರ್ಶಿ ಡಾ.ರಾಜನಂದಿನಿ, ಕಲಗೋಡು ರತ್ನಾಕರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕೆಪಿಸಿಸಿ ಹಿಂದುಳಿದ ವರ್ಗ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ, ಬಿ.ಆರ್.ಜಯಂತ್, ರತ್ನಾಕರ ಹೊನಗೋಡು, ಅನಿತಾ ಕುಮಾರಿ, ಜಯಮ್ಮ ರಮೇಶ್ ಇನ್ನಿತರರಿದ್ದರು.
ಜನರ ಸಂಕಲ್ಪದಿಂದ ಕಾಂಗ್ರೆಸ್‌ಗೆ ಅಧಿಕಾರ: ಡಿ.ಕೆ.ಶಿವಕುಮಾರ್
ಜನರ ಹೃದಯ ಗೆಲ್ಲುವ ಪ್ರಯತ್ನ
ಈ ಭಾಗದ ಅನೇಕ ಸಮಸ್ಯೆಗಳನ್ನು ಪ್ರಮುಖರು ನನ್ನ ಗಮನಕ್ಕೆ ತಂದಿದ್ದಾರೆ. ಅರಣ್ಯಭೂಮಿ ಹಕ್ಕು, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸುವ ಸಮಯ ಇದಲ್ಲ. ಮುಂದಿನ ದಿನಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಮಹತ್ತರ ಬದಲಾವಣೆ ಅಗತ್ಯವಿದೆ. ನಮ್ಮ ಹೋರಾಟದ ಮೂಲಕ ಮುಂದಿನ ದಿನಗಳಲ್ಲಿ ಜನರ ಹೃದಯ ಗೆಲ್ಲುವ ಪ್ರಯತ್ನ ನಡೆಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.