
ತುಮಕೂರು, (ಮಾ.19): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ಮಹಾನಾಯಕನ ವಿಚಾರ ಈವರೆಗೆ ಡಿ.ಕೆ. ಶಿವಕುಮಾರ್ ಸುತ್ತ ತಿರುಗುತ್ತಿತ್ತು. ಇದೀಗ ಮಾಜಿ ಶಾಸಕರೊಬ್ಬರು ಎಚ್.ಡಿ ಕುಮಾರಸ್ವಾಮಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಹೌದು... ಸಿಡಿ ಹಿಂದಿನ ಮಹಾನಾಯಕ ಎಚ್.ಡಿ. ಕುಮಾರಸ್ವಾಮಿಯವರೇ ಇರಬೇಕು ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪಿಸಿದ್ದಾರೆ.
ಸೀಡಿ ಸಂಚುಕೋರರ ಹಿಂದಿದ್ದಾನೆ ಕಿಂಗ್‌ಪಿನ್ CD 'ಶಿವ', ಯಾರಿವನು..?
ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಸಿಡಿ ವಿಚಾರವಾಗಿ ಕುಮಾರಸ್ವಾಮಿಗೆ ಗೊತ್ತಿದೆ ಎಂದ ಮೇಲೆ ಎಸ್‌ಐಟಿ ಮೊದಲು ಅವರ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು.
ಆ ಮಹಾನಾಯಕ ಯಾರು ಬೇಕಾದರೂ ಆಗಿರಬಹುದು. ಆರ್. ಅಶೋಕ್, ವಿಜಯೇಂದ್ರ ಅಥವಾ ಕುಮಾರಸ್ವಾಮಿ. ಹೀಗೆ ಯಾರು ಬೇಕಾದಾರೂ ಆಗಿರಬಹುದು. ಕುಮಾರಸ್ವಾಮಿಯವರಿಗೆ ಎಲ್ಲವೂ ಗೊತ್ತು ಎನ್ನಲಾಗುತ್ತಿದೆ. ಹಾಗಿದ್ದ ಮೇಲೆ ಎಸ್‌ಐಟಿ ಮೊದಲು ಕುಮಾರಸ್ವಾಮಿ ಹೇಳಿಕೆ ಪಡೆದು ವಿಚಾರಿಸಲಿ. ಸತ್ಯ ಹೊರಬರಲು ಸಹಕರಿಸಲಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.