ಶಾಸಕಿ ಅನಿತಾ ಕುಮಾರಸ್ವಾಮಿ ಬಾಯಿಂದ ಇದೆಂಥಾ ಮಾತು..!

By Suvarna News  |  First Published Nov 24, 2020, 2:48 PM IST

ಸ್ಥಳೀಯರು ಶಾಸಕಿ ಅನಿತಾ ಕುಮಾರಸ್ವಾಮಿ ಕೆಲಸಗಳಿ ಅಸಮಾಧನಗೊಂಡಿದ್ದು, ಈ ಬಗ್ಗೆ ರಾಮನಗರಕ್ಕಿಂದು ಆಗಮಸಿದ ಶಾಸಕಿ ಮಾಧ್ಯಮಗಳ ಮೇಲೆ ಬೇಸರಗೊಂಡಿದ್ದಾರೆ. 


ರಾಮನಗರ, (ನ.24): ನಾನು ರಾಜಕಾರಣ ಮಾಡಲು ಬಂದಿಲ್ಲ, ಸಮಾಜ ಸೇವೆ ಮಾಡಲು ಬಂದಿದ್ದೇನೆ ಎಂದು ರಾಮನಗರ ಜೆಡಿಎಸ್​ ಶಾಸಕಿ ಅನಿತಾ ಕುಮಾರಸ್ವಾಮಿ  ಹೇಳಿದ್ದಾರೆ.

ಮಂಗಳವಾರ ರಾಮನಗರದ ರಾಜೀವ್ ಗಾಂಧಿಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜಕಾರಣದ ಸಮಯದಲ್ಲಿ ರಾಜಕೀಯ ಆದರೆ ಬಡವರ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಕೊರೋನಾ ಸಂದರ್ಭದಲ್ಲಿ ನಾನು, ಪತಿ ಕುಮಾರಸ್ವಾಮಿ, ಮಗ ನಿಖಿಲ್ ಜೊತೆಗೆ ಸೊಸೆಯೂ ಬಂದಿದ್ದರು ಎಂದರು.

Tap to resize

Latest Videos

undefined

ಬೇಸರವಾಗೋದು ಬೇಡ : ನಾನು ನನ್ನ ಮಗ, ಕುಮಾರಸ್ವಾಮಿ ಇದ್ದೇವೆ

ಇನ್ನು ಬಡವರಿಗೆ ಫುಡ್​ಕಿಟ್ ಜೊತೆಗೆ ಹೆಲ್ತ್ ಕಿಟ್ ಕೊಟ್ಟಿದ್ದೇವೆ. ರಾಮನಗರದ ಎಂಪಿಎಮ್​ಸಿ, ರೇಷ್ಮೆ ಮಾರ್ಕೆಟ್​ನಲ್ಲಿ ಸ್ಯಾನಿಟೈಜರ್ ಟನಲ್ ಹಾಕಿಸಿದ್ದೆವು. ಇಷ್ಟೆಲ್ಲಾ ಕೆಲಸ ಬೇರೆ ಯಾವ ತಾಲೂಕಿನಲ್ಲಿ ಆಗಿದೆ ಹೇಳಿ(?) ಸುಮ್ಮನೆ ನಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಬೇಡಿ. ನಾನು ಒಬ್ಬ ಮಹಿಳೆ ಇದ್ದೇನೆ. ನನಗೂ ಸಹಕಾರ ಕೊಡಿ ಎಂದು ಮಾಧ್ಯಮದವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರೆಲ್ಲರೂ ನಮ್ಮ ಮನೆಯವರು, ಯಾರು ಕೂಡ ಪಕ್ಷ ಬಿಡುವುದಿಲ್ಲ, ವಿಶ್ವಾಸವಿದೆ ಎಂದು ಹೇಳಿದರು.

click me!