ಬಿಜೆಪಿ ಸಚಿವರು ಹಾಗೂ ಸಂಸದರಿಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ. ಹೀಗೆಲ್ಲಾ ಮಾಡಿದ್ರೆ ನಿಮ್ಮನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ
ಬೆಂಗಳೂರು (ನ.24): ಸಚಿವರು, ಸಂಸದರು, ಶಾಸಕರು, ರಾಜ್ಯ ಪದಾಧಿಕಾರಿಗಳಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪಕ್ಷದ ಸಂಘಟನಾ ಪ್ರವಾಸ ಕೈಗೊಳ್ಳದ ಸಚಿವರು, ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳಿಗೆ ಸಂತೋಷ್ ಎಚ್ಚರಿಕೆ ನೀಡಿದ್ದಾರೆ. ನೀವು ಎಷ್ಟೇ ಪ್ರಭಾವಿಗಳು, ಪ್ರಬುದ್ದರು ಇರಬಹುದು. ನಿಮ್ಮ ಪ್ರಬುದ್ಧತೆಯ ಬಗ್ಗೆ ನಮಗೆ ಗೌರವ ಇದೆ. ಆದರೆ ಪಕ್ಷದ ಕೆಲಸ, ಸಂಘಟನೆ ಕೆಲಸ ಮಾಡದೇ ಇದ್ದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಸಭೆಯಲ್ಲಿ ಹೇಳಿದ್ದಾರೆ.
undefined
ಪಂಚಾಯತ್ ಚುನಾವಣೆಗೆ ಬಿಜೆಪಿ ಪಂಚತಂತ್ರ
ಜನ ಲೈಬ್ರೆರಿಗೆ ಬರುತ್ತಾರೆ. ಜನ ನಿಮ್ಮ ಬಳಿ ಬರಲು ನೀವೇನು ಲೈಬ್ರರಿಯೇ..? ಪ್ರವಾಸ ಮಾಡದೇ, ಸಂಘಟನೆ ಮಾಡದೇ ಇದ್ದರೆ ನೀವು ಪ್ರಭಾವಿಗಳಾಗಿದ್ದು ಏನು ಪ್ರಯೋಜನ? ನೀವು ಪ್ರವಾಸ ಮಾಡಲೇಬೇಕು. ನೀವು ಪ್ರವಾಸ ಮಾಡದೇ ಇದ್ದರೆ ಕಾರ್ಯಕರ್ತರಿಗೆ ತಿಳಿಯುವುದಾದರೂ ಹೇಗೆ...? ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿದ್ದ ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ನಡೆದಿದ್ದ ಸಂಘಟನಾ ಸಭೆಯ ವೇಳೆಯಲ್ಲಿ ಬಿಜೆಪಿ ಮುಖಂಡರಿಗೆ ಖಡಕ್ ಎಚ್ಚರಿಕೆಯನ್ನು ಬಿ.ಎಲ್. ಸಂತೋಷ್ ನೀಡಿದ್ದಾರೆ.