ರಾಜೀವ್‌ ಗಾಂಧಿ ದೇಶದ ಭವಿಷ್ಯವನ್ನು ರೂಪಿಸಿದ ಮಹಾನ್‌ ನಾಯಕ: ಶಾಸಕ ತಮ್ಮಯ್ಯ

By Kannadaprabha News  |  First Published Aug 21, 2023, 4:36 PM IST

ದೇಶದ ಯುವ ಜನರ ಕಲ್ಪನೆ ಹಾಗೂ ಭರವಸೆಗಳನ್ನು ಮನಗಂಡ ಮಾಜಿ ಪ್ರಧಾನಿ ದಿ. ರಾಜೀವ್‌ ಗಾಂಧಿ ದೇಶದ ಭವಿಷ್ಯವನ್ನು ರೂಪಿಸಿದ ಮಹಾನ್‌ ನಾಯಕ. ಉಳುವವರಿಗೆ ಭೂಮಿ ಕೊಡಿಸಿ ಮಹಾನ್‌ ಸಾಧನೆ ಮಾಡಿದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.


ಚಿಕ್ಕಮಗಳೂರು (ಆ.21): ದೇಶದ ಯುವ ಜನರ ಕಲ್ಪನೆ ಹಾಗೂ ಭರವಸೆಗಳನ್ನು ಮನಗಂಡ ಮಾಜಿ ಪ್ರಧಾನಿ ದಿ. ರಾಜೀವ್‌ ಗಾಂಧಿ ದೇಶದ ಭವಿಷ್ಯವನ್ನು ರೂಪಿಸಿದ ಮಹಾನ್‌ ನಾಯಕ. ಉಳುವವರಿಗೆ ಭೂಮಿ ಕೊಡಿಸಿ ಮಹಾನ್‌ ಸಾಧನೆ ಮಾಡಿದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಈ ಮಹಾನ್‌ ನಾಯಕರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳು ಇಂದು ಶಾಶ್ವತವಾಗಿ ನೆಲೆಯೂರಿವೆ. ರಾಜೀವ್‌ಗಾಂಧಿ ಹಾಗೂ ಡಿ.ದೇವರಾಜ ಅರಸು ಜನ್ಮ ದಿನವಾದ ಇಂದು ರಾಜ್ಯ ಮತ್ತು ದೇಶಕ್ಕೆ ಅವರು ಕೊಟ್ಟಿರುವ ಕೊಡುಗೆಯನ್ನು ನೆನಪು ಮಾಡಿಕೊಳ್ಳಬೇಕು ಮತ್ತು ಆ ದಾರಿಯಲ್ಲಿ ನಡೆಯೋಣ ಎಂದು ಕರೆ ನೀಡಿದರು.

Tap to resize

Latest Videos

undefined

ದೇಶದಲ್ಲೇ ರಾಜ್ಯ ಶೀಘ್ರ ನಂ.1 ಆಗಲಿದೆ: ಗೃಹ ಸಚಿವ ಪರಮೇಶ್ವರ್‌

ಜಿಪಂ ಮಾಜಿ ಅಧ್ಯಕ್ಷ ಎ.ಎನ್‌.ಮಹೇಶ್‌ ಮಾತನಾಡಿ, ರಾಜೀವ್‌ ಗಾಂಧಿಯವರ ಪಂಚಾಯತ್‌ ರಾಜ್‌ ವ್ಯವಸ್ಥೆ ಮತ್ತು ಮೀಸಲಾತಿಗಳಿಂದ ಬಹುತೇಕರಿಗೆ ಅಧಿಕಾರ ದೊರೆಯು ವಂತಾಗಿದೆ. ತಾಂತ್ರಿಕ ಜಗತ್ತಿನಲ್ಲಿ ಪ್ರಪಂಚಕ್ಕೆ ಸವಾಲ್‌ ಎಂಬಂತೆ ನಮ್ಮ ದೇಶ ರೂಪಿಸಿದ ರಾಜೀವ್‌ಗಾಂಧಿ ಅವರನ್ನು ಈ ದೇಶದ ಜನ ಮರೆಯಬಾರದು. ಹಾಗೆಯೇ ದೇವರಾಜ ಅರಸು ಜನಪರವಾದ ದಿಟ್ಟಆಡಳಿತವನ್ನು ನೀಡುವ ಜೊತೆಗೆ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ದ ಮಹಾನ್‌ ನಾಯಕ ಎಂದು ಹೇಳಿದರು.

ಆಯನೂರು ಮಂಜು​ನಾಥ್‌ ಜೆಡಿಎಸ್‌ ಪಕ್ಷ​ದಲ್ಲಿದ್ದೇ ಧಮ್‌ ತೋರಲಿ!

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಹಾಗೂ ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಡಿ.ಸಿ.ಪುಟ್ಟೇಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಂ.ಎಲ್‌.ಮೂರ್ತಿ, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ.ಮಂಜೇಗೌಡ, ರಾಜ್ಯ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಮುಖಂಡರಾದ ಮಹಮದ್‌ ಅಕ್ಬರ್‌, ಪ್ರಸಾದ್‌ ಅಮಿನ್‌, ಹಿರೇಮಗಳೂರು ರಾಮಚಂದ್ರ, ಪ್ರಕಾಶ್‌ ರೈ, ನಾಗೇಶ್‌, ನಾಗಭೂಷಣ್‌, ನಾಗೇಶ್‌ರಾಜ್‌ ಅರಸ್‌, ಮಧು, ಭರತ್‌, ರಾಘವೇಂದ್ರ, ಉಮೇಶ್‌ ಉಪಸ್ಥಿತರಿದ್ದರು.

click me!