ಕಾಂಗ್ರೆಸ್‌ಗೆ ಮತ್ತೆ ಸ್ವಾಗತ, ಆದ್ರೆ ಷರತ್ತು ಅನ್ವಯ!, ಏನ್ಮಾಡ್ತಾರೆ ಪೈಲಟ್?

By Suvarna NewsFirst Published Aug 4, 2020, 12:25 PM IST
Highlights

ಪೈಲಟ್‌ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧ ಆದ್ರೆ ಷರತ್ತು ಅನ್ವಯ| ಕಾಂಗ್ರೆಸ್‌ ಕಂಡೀಷನ್ ಒಪ್ಕೋತಾರಾ ಪೈಲಟ್| ಭಾರೀ ಕುತೂಹಲ ಮೂಡಿಸಿದೆ ರಾಜಸ್ಥಾನ ರಾಜಕೀಯ

ಜೈಪುರ(ಆ.04): ಕೆಲ ದಿನಗಳ ಹಿಂದೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ರೆಬೆಲ್ ಅಭ್ಯರ್ಥಿಗಳ ಬಳಿ ಪಕ್ಷದ ಹೈಕಮಾಂಡ್‌ ಬಳಿ ಕ್ಷಮೆ ಯಾಚಿಸಿದ್ರೆ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸುವುದಾಗಿ ಹೇಳಿದ್ದರು. ಹೀಗಿರುವಾಗೇ ಇತ್ತ ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ಕೂಡಾ ಸಚಿನ್ ಪೈಲಟ್‌ ಬಳಿ ತಮ್ಮ ನಿರ್ಧಾರ ಸ್ಪಷ್ಟಪಡಿಸುವಂತೆ ಹೇಳಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಪೈಲಟ್‌ಗೆ ತನ್ನ ಪಕ್ಷದ ಬಾಗಿಲು ಸಂಪೂರ್ಣವಾಗಿ ಮುಚ್ಚಲು ತಯಾರಿಲ್ಲ ಎಂಬುವುದು ಸ್ಪಷ್ಟವಾಗಿದೆ. ಯಾಕೆಂದರೆ ಪಕ್ಷದಲ್ಲಿ ಪೈಲಟ್‌ ಇಲ್ಲದಿದ್ದರೆ ಅದು ಜಾತಿ ಸಮೀಕರಣದಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಹೊಡೆತ ನೀಡುತ್ತದೆ. 

ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ: ಕಾಂಗ್ರೆಸ್ ಧರಣಿ, ಗವರ್ನರ್ ಗರಂ!

ಇನ್ನು ಕಾಂಗ್ರೆಸ್‌ ಈಗಾಗಲೇ ರಾಜಸ್ಥಾನದಲ್ಲಿ ಗೆಹ್ಲೋಟ್‌ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ, ಹಾಗೂ ಆಗಸ್ಟ್ 14ರಂದು ನಡೆಯುವ ಅಧಿವೆಶನದಲ್ಲಿ ಬಹುಮತ ಸಾಬೀತು ಮಾಡುತ್ತಾರೆಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಸುರ್ಜೇವಾಲಾ 'ಸಚಿನ್ ಪೈಲಟ್ ಅಗತ್ಯವಾಗಿ ಮಾತುಕತೆ ನಡೆಸಬೇಕು. ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಆಗಲೇ ಅವರು ಮರಳಿ ಪಕ್ಷಕ್ಕೆ ಸೇರ್ಪಡೆಗೊಳಿಸುವ ಕುರಿತು ಏನಾದರೂ ಯೋಚಿಸಬಹುದು' ಎಂದಿದ್ದಾರೆ.

Fact Check: ಬಿಜೆಪಿ ಸೇರಿದ್ರಾ ಸಚಿನ್‌ ಪೈಲಟ್‌.?

ಇನ್ನು ರೆಬೆಲ್‌ಗಳ ವಿಇರುದ್ಧ ಕಿಡಿ ಕಾರಿರುವ ಅಶೋಕ್ ಗೆಹ್ಲೋಟ್ ಮತ್ತೆ ಅವರನ್ನೇ ಏಕೆ ಪಕ್ಷಕ್ಕೆ ಶಾಮೀಲುಗೊಳಿಸಲು ತಯಾರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುರ್ಜೇವಾಲಾ ಅಶೋಕ್ ಗೆಹಹ್ಲೋಟ್ ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಿರುವಾಗ ಸರ್ಕಾರ ಉರುಳಿಸುವ ಕುತಂತ್ರ ನಡೆಯುವಾಗ ಅವರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಇಂತಹ ಸಂದರ್ಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಹೀಗಾಗಿ ಅವುಗಳನ್ನು ನಿರ್ಲಕ್ಷಿಸುವುದೇ  ಉತ್ತಮ ಎಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಸಚಿನ್ ಪೈಲಟ್ ಕಾಂಗ್ರೆಸ್‌ ಷರತ್ತಿನಂತೆ ಕ್ಷಮೆ ಕೇಳಿ ಪಕ್ಷಕ್ಕೆ ಮರಳಿ ಬರುತ್ತಾರಾ? ಅಥವಾ ಈ ಹೈಡ್ರಾಮಾ ಮುಂದುವರೆಯುತ್ತಾ? ಕಾದು ನೋಡಬೇಕಷ್ಟೇ
 

click me!