ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೊರೋನಾ ಸೋಂಕು| ಸಿದ್ದರಾಯ್ಯಗೆ ಸಂಪರ್ಕಿಸಿದವರೆಲ್ಲರಿಗೂ ಕ್ವಾರಂಟೈನ್ ಆಗುವಂತೆ ಸೂಚನೆ| ದಿ. ರಾಕೇಶ್ ಪುತ್ರ ಧವನ್ ಜೊತೆಗೆ ಚೆಸ್ ಆಡಿದ್ದ ಸಿದ್ದರಾಮಯ್ಯ
ಬೆಂಗಳೂರು(ಆ.04): ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೊರೋನಾ ಸೋಂಕು ತಗುಲಿರುವುದು ದೇಢವಾಗಿದ್ದು, ಸದ್ಯ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.. ಈಗಿರುವಾಗ ಇತ್ತೀಚೆಗೆ ಅವರನ್ನು ಸಂಪರ್ಕಿಸಿದವರೆಲ್ಲರಿಗೂ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಮೊಮ್ಮಗ, ಧವನ್‌ಗೆ ಕ್ವಾರಂಟೀನ್ಗೆ ಒಳಗಾಗುವಂತೆ ದೊಡ್ಡಪ್ಪ ಡಾ.ಯತೀಂದ್ರ ಸೂಚಿಸಿದ್ದಾರೆ.
ಸಿಎಂ ಯಡಿಯೂರಪ್ಪ ಗುಣಮುಖರಾಗಲು ಆರೋಗ್ಯ ಸಚಿವ ದೇವರಲ್ಲಿ ಹರಕೆ
ಹೌದು ಅಗಸ್ಟ್ 2 ರಂದು ಸಿದ್ದರಾಮಯ್ಯ ಮೈಸೂರಿಗೆ ತೆರಳಿದ್ದರು. ಈ ವೇಳೆ ತಮ್ಮ ಮೊಮ್ಮಗ, ದಿ. ರಾಕೇಶ್ ಪುತ್ರ ಧವನ್ ಜೊತೆಗೆ ಚೆಸ್ ಆಡಿದ್ದರು. ಈಗ ಸಿದ್ದರಾಮಯ್ಯ ಅವರಿಗೆ ಸೋಂಕು ತಗುಲಿರೋದ್ರಿಂದ, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಧವನ್ ಕ್ವಾರಂಟೀನ್ಗೆ ಒಳಗಾಗುವಂತೆ ಸೂಚಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ತಗುಲಿದ ಕೊರೋನಾ ಸೋಂಕು!
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಯಡಿಯೂರಪ್ಪ ಇಬ್ಬರಿಗೂ ಒಂದು ದಿನದ ಅಂತರದಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಇಬ್ಬರೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಜಕೀಯ ಗಣ್ಯರೆಲ್ಲರೂ ಶೀಘ್ರ ಗುಣಮುಖರಾಗುವಂತೆ ಇಬ್ಬರಿಗೂ ಹಾರೈಸಿದ್ದಾರೆ.