
ಭೋಪಾಲ್: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದ ಕಾರಣ 10 ಪುಷಪ್ ಶಿಕ್ಷೆ ಎದುರಿಸಿದ ಘಟನೆ ಭಾನುವಾರ ನಡೆದಿದೆ.
ಮಧ್ಯ ಪ್ರದೇಶದಲ್ಲಿ ಪಕ್ಷದ ತರಬೇತಿ ಕಾರ್ಯಕ್ರಮವೊಂದು ಏರ್ಪಟ್ಟಿತ್ತು. ಇದಕ್ಕೆ ರಾಹುಲ್ ಗಾಂಧಿ ಅವರು ಕೊಂಚ ಸಮಯ ತಡವಾಗಿ ಆಗಮಿಸಿದರು. ಈ ವೇಳೆ ಕಾರ್ಯಕ್ರಮದ ಆಯೋಜಿಸಿದ್ದ ಪಕ್ಷದ ನಾಯಕರು, ನಿಯಮ ಮೀರಿದವರಿಗೆ ನಾವು ಶಿಕ್ಷೆ ನೀಡುವ ಕಾನೂನು ರೂಪಿಸಿದ್ದೇವೆ ಎಂಬುದನ್ನು ರಾಹುಲ್ ಗಮನಕ್ಕೆ ತಂದರು.
ಈ ವೇಳೆ ಶಿಕ್ಷೆ ಏನೆಂದು ಕೇಳಿದ ರಾಹುಲ್ ಅವರಿಗೆ ‘10 ಪುಷ್‌ಅಪ್ ಹೊಡೆಯಬೇಕು’ ಎಂದು ಮುಖ್ಯಸ್ಥರು ಹೇಳಿದರು. ಬಳಿಕ ಕೊಂಚ ಸಮಯವನ್ನು ವ್ಯರ್ಥ ಮಾಡದ ರಾಹುಲ್, ಕೂಡಲೇ ಪುಷ್ ಅಪ್ ಹೊಡೆದು ಎಲ್ಲರ ಮೆಚ್ಚುಗೆ ಗಳಿಸಿದರು. ಇವರೊಂದಿಗೆ ಜಿಲ್ಲಾಧ್ಯಕ್ಷರೂ ಸಹ ಪುಷ್ ಅಪ್ ಹೊಡೆಯಬೇಕಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.