ಪುರೋಹಿತರು ಪ್ರಾರ್ಥನೆ ಸಲ್ಲಿಸಿ, ಅವರಿಗೆ ಫಲಪುಷ್ಪಗಳನ್ನು ನೀಡಿದರು. ನಂತರ ಮೀನುಗಾರ ನಾಯಕರು ರಾಹುಲ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಉಡುಪಿ(ಏ.29): ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಗುರುವಾರ ಕಾಪು ತಾಲೂಕಿನ ಉಚ್ಚಿಲಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೀನು ಮುಟ್ಟಿದ್ದರಿಂದ ಸ್ಥಳೀಯ ದೇವಸ್ಥಾನಕ್ಕೆ ಹೋಗುವುದಕ್ಕೆ ಹಿಂಜರಿದ ಘಟನೆ ನಡೆದಿದೆ.
ಮೀನುಗಾರರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿಗೆ ಮೀನುಗಾರ ಮಹಿಳೆಯೊಬ್ಬರು ಅಂಜಲ್ ಜಾತಿಯ ಮೀನನ್ನು ಉಡುಗೊರೆಯಾಗಿ ನೀಡಿದ್ದರು. ಅದನ್ನು ಕೈಯಲ್ಲಿ ಹಿಡಿದು ರಾಹುಲ್ ಫೋಟೋಗೆ ಪೋಸ್ ನೀಡಿದ್ದರು.
ಸಭೆ ನಂತರ ಅವರನ್ನು ಸ್ಥಳೀಯ ಮೊಗವೀರರ ಮಹಾಲಕ್ಷ್ಮೀ ದೇವಾಲಯಕ್ಕೆ ಕರೆದುಕೊಂಡು ಹೋಗಲಾಯಿತು. ಆಗ ರಾಹುಲ್ ಮೀನು ಮುಟ್ಟಿದ್ದರಿಂದ ಕೈತೊಳೆಯಲು ನೀರು ಕೇಳಿದರು. ಆದರೆ ಮೀನುಗಾರ ನಾಯಕರು ಅವರ ಮನವೊಲಿಸಿ ದೇವಾಲಯದೊಳಗೆ ಕರೆದುಕೊಂಡು ಹೋದರು. ಪುರೋಹಿತರು ಪ್ರಾರ್ಥನೆ ಸಲ್ಲಿಸಿ, ಅವರಿಗೆ ಫಲಪುಷ್ಪಗಳನ್ನು ನೀಡಿದರು. ನಂತರ ಮೀನುಗಾರ ನಾಯಕರು ರಾಹುಲ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
undefined
ಸತ್ಯಮಾರ್ಗದಲ್ಲಿ ಸಾಗಲು ಬಸವಣ್ಣ ಹೇಳಿಕೊಟ್ಟಿದ್ದಾರೆ: ರಾಹುಲ್ ಗಾಂಧಿ
ಈ ಹಿಂದೆ ಸಿದ್ದರಾಮಯ್ಯ ಮಾಂಸ ತಿಂದು ದೇವಾಲಯಕ್ಕೆ ತೆರಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೀನು ಮುಟ್ಟಿದ್ದರಿಂದ ರಾಹುಲ್ ಗಾಂಧಿ ದೇವಾಲಯದೊಳಗೆ ಹೋಗಿಲ್ಲ ಎಂಬುದು ಭಾರೀ ಪ್ರಚಾರ ಪಡೆಯುತ್ತಿದೆ.