Karnataka election 2023 ಅಭಿವೃದ್ದಿ ಮಾಡುವವರಿಗೆ ಮತ ನೀಡಿ: ಕಿಚ್ಚ ಸುದೀಪ್

Published : Apr 29, 2023, 10:42 AM IST
Karnataka   election 2023 ಅಭಿವೃದ್ದಿ ಮಾಡುವವರಿಗೆ ಮತ ನೀಡಿ: ಕಿಚ್ಚ ಸುದೀಪ್

ಸಾರಾಂಶ

ಕ್ಷೇತ್ರದಲ್ಲಿ ಅಭಿವೃದ್ಧಿಯ ಕನಸ್ಸುಳ್ಳವರಿಗೆ ನಿಮ್ಮ ಮತ ನೀಡಿ. ಬಿಜೆಪಿಯಿಂದ ಸ್ಪರ್ಧಿಸಿರುವ ಮಹೇಶ ಟೆಂಗಿನಕಾಯಿಗೆ ನಿಮ್ಮ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವಂತೆ ಚಲನಚಿತ್ರ ನಟ ಕಿಚ್ಚ ಸುದೀಪ್‌ ಮನವಿ ಮಾಡಿದರು.

ಹುಬ್ಬಳ್ಳಿ (ಏ.29) : ಕ್ಷೇತ್ರದಲ್ಲಿ ಅಭಿವೃದ್ಧಿಯ ಕನಸ್ಸುಳ್ಳವರಿಗೆ ನಿಮ್ಮ ಮತ ನೀಡಿ. ಬಿಜೆಪಿಯಿಂದ ಸ್ಪರ್ಧಿಸಿರುವ ಮಹೇಶ ಟೆಂಗಿನಕಾಯಿಗೆ ನಿಮ್ಮ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವಂತೆ ಚಲನಚಿತ್ರ ನಟ ಕಿಚ್ಚ ಸುದೀಪ್‌ ಮನವಿ ಮಾಡಿದರು.

ಅವರು ಶುಕ್ರವಾರ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ(Mahesh tenginakayi) ಪರ ಇಲ್ಲಿನ ದೇವಾಂಗಪೇಟೆಯಿಂದ ಬೆಂಗೇರಿ ವರೆಗೆ ಹಮ್ಮಿಕೊಂಡ ರೋಡ್‌ ಶೋದಲ್ಲಿ ಪಾಲ್ಗೊಂಡು ಮಾತನಾಡಿದರು.

ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬರಲಿದ್ದಾರೆ ಟಾಲಿವುಡ್ ಸ್ಟಾರ್,ಪವನ್ ಕಲ್ಯಾಣ್-ಸುದೀಪ್ ಜುಗಲ್ ಬಂಧಿ ಹೇಗಿರಲಿದೆ?

 

ಸಾಮಾನ್ಯ ಕಾರ್ಯಕರ್ತರಾಗಿರುವ ಮಹೇಶ್‌ ಟೆಂಗಿನಕಾಯಿಗೆ ಬಿಜೆಪಿಯಿಂದ ಸೆಂಟ್ರಲ್‌ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದು ಮತದಾರರು ನಿಮ್ಮವನೇ ಆದ ಮಹೇಶ್‌ಗೆ ಬೆಂಬಲಿಸುವ ಮೂಲಕ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ಶ್ರಮಿಸುವಂತೆ ಕರೆ ನೀಡಿದರು.

ನಾನು ಇಲ್ಲಿಗೆ ಜಾಸ್ತಿ ಬಂದಿಲ್ಲ. ಆದರೆ, ಬಂದ ವೇಳೆ ಇಲ್ಲಿನ ಜನತೆ ತೋರುವ ಪ್ರೀತಿಗೆ ಮತ್ತೆ ಮತ್ತೆ ಬರಬೇಕು ಅನ್ನಿಸುತ್ತದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋುಣಿ. 27 ವರ್ಷಗಳಿಂದ ನನ್ನ ಅಭಿನಯ ನೋಡಿ ನನ್ನು ಹರೆಸಿದ್ದೀರಿ. ಮುಂದೆಯೂ ನಿಮ್ಮ ಬೆಂಬಲ ಹೀಗೆಯೇ ಇರಲಿ ಎಂಬುದು ನನ್ನ ಮನವಿ. ಈಗ ಚುನಾವಣೆಯ ಪ್ರಚಾರಕ್ಕೆ ಬಂದಿರುವುದು ಕ್ಷಣಿಕ ಕಾಲಕ್ಕೆ. ಆದರೆ, ನನ್ನದು ಕೆಲಸ ಅಭಿನಯ. ಇನ್ನು ಕೆಲವೇ ದಿನಗಳಲ್ಲಿ ಮತ್ತೇ ಅಭಿನಯಕ್ಕೆ ಮರಳುವೆ. ಹಾಗಾಗಿ ನನ್ನ ವೃತ್ತಿಗೆ ಎಂದಿಗೂ ನಿಮ್ಮ ಬೆಂಬಲ ಇರಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಗುರುತಿಸಿ ಟಿಕೆಟ್‌ ನೀಡಿದ್ದು, ಕ್ಷೇತ್ರದ ಮತದಾರರು ಆಶೀರ್ವದಿಸಿ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಈ ವೇಳೆ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಸಂತೋಷ ಚವ್ಹಾಣ ಸೇರಿದಂತೆ ವಾರ್ಡ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅದ್ಧೂರಿ ರೋಡ್‌ ಶೋ:

ಹುಬ್ಬಳ್ಳಿಯ ದೇವಾಂಗಪೇಟೆಯಿಂದ ಆರಂಭವಾದ ರೋಡ್‌ ಶೋ ಬೆಂಗೇರಿಯ ವರೆಗೆ ಜರುಗಿತು. ಈ ವೇಳೆ ನೆಚ್ಚಿನ ನಟನನ್ನು ನೋಡಲು ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದರು. ಪ್ರಚಾರ ವಾಹನದ ಮೇಲೆ ನಿಂತಿದ್ದ ಕಿಚ್ಚನನ್ನು ನೋಡಿದ ಅಭಿಮಾನಿಗಳು ಹೂವಿನ ಮಳೆ ಸುರಿಸಿದರು. ಮಾರ್ಗದುದ್ದಕ್ಕೂ ಸುದೀಪ್‌ ಅಕ್ಕಪಕ್ಕದಲ್ಲಿ ನಿಂತಿದ ಅಭಿಮಾನಿಗಳಿಗೆ ಕೈ ಕುಲುಕುತ್ತ ನಡೆಯುತ್ತಿರುವುದು ಕಾರ್ಯಕರ್ತರಿಗೆ ಹಮ್ಮಸ್ಸು ಹೆಚ್ಚುವಂತೆ ಮಾಡಿತು. ಇನ್ನು ಗೋಪನಕೊಪ್ಪದ ಹತ್ತಿರ ಪಂದ ಪ್ರಚಾರ ವಾಹನಕ್ಕೆ ಅಭಿಮಾನಿಗಳು ಮುತ್ತಿಕ್ಕುತ್ತಿದಂತೆ ವಾಹನ ತೆರಳಲೂ ರಸ್ತೆ ಇಲ್ಲದಂತಾಯಿತು. ಈ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟು ವಾಹನ ತೆರಳಲು ದಾರಿ ಮಾಡಿಕೊಟ್ಟರು.

ಚಿತ್ರದುರ್ಗ, ದಾವಣಗೆರೆಯಲ್ಲಿ ಕಿಚ್ಚನ ಹವಾ: ಸುದೀಪ್‌ ನೋಡಲು ಜನಸಾಗರ

28ಎಚ್‌ಯುಬಿ30, 30ಎ

ಹುಬ್ಬಳ್ಳಿಯ ದೇವಾಂಗಪೇಟೆಯಲ್ಲಿ ಚಿತ್ರನಟ ಸಂದೀಪ್‌ ಬಿಜೆಪಿ ಅಭ್ಯರ್ಥಿ ಪರ ರೋಡ್‌ ಶೋ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ