ರಾಹುಲ್ ಬಿಜೆಪಿಯ ಸ್ಟಾರ್ ಪ್ರಚಾರಕ; ರೋಡ್ ಶೋಗೆ ಯತ್ನಾಳ್ ಲೇವಡಿ

By Ravi Janekal  |  First Published Apr 23, 2023, 3:23 PM IST

ರಾಹುಲ್ ಗಾಂಧಿ ಅವರೇ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಿದ್ದು ಅವರು ಪ್ರಚಾರ ಮಾಡಿದಷ್ಟು ಬಿಜೆಪಿ ಪಕ್ಷಕ್ಕೆ ಲಾಭವಾಗುತ್ತದೆ, ಅವರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದರೆ ನಾನು ಸುಮಾರು 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ರಾಹುಲ್ ಗಾಂಧಿ ರೋಡ್ ಶೋಗೆ ಲೇವಡಿ ಮಾಡಿದ್ದಾರೆ. 


-ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಏ.23) : ರಾಹುಲ್ ಗಾಂಧಿ ಅವರೇ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಿದ್ದು ಅವರು ಪ್ರಚಾರ ಮಾಡಿದಷ್ಟು ಬಿಜೆಪಿ ಪಕ್ಷಕ್ಕೆ ಲಾಭವಾಗುತ್ತದೆ, ಅವರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದರೆ ನಾನು ಸುಮಾರು 50 ಸಾವಿರಕ್ಕೂ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ರಾಹುಲ್ ಗಾಂಧಿ ರೋಡ್ ಶೋಗೆ ಲೇವಡಿ ಮಾಡಿದ್ದಾರೆ. 

Latest Videos

undefined

ನಗರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ(Rahul gandhi) ಹಾಗೂ ಸಿದ್ದರಾಮಯ್ಯ(Siddaramaiah) ಅವರು ಬಿಜೆಪಿಯ ಸ್ಟಾರ್ ಪ್ರಚಾರ(bjp star campaigner)ಕರಿದ್ದಹಾಗೆ, ಅವರು ಹೋದಲ್ಲೆಲ್ಲ ಕಾಂಗ್ರೆಸ್ ನೆಲಕಚ್ಚಿ, ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಲೇವಡಿ ಮಾಡಿದರು, ಓ ಹಿಂದೆ ರಾಹುಲ್ ಗಾಂಧಿ ಬಸವಣ್ಣನವರ ವಚನವನ್ನೇ ಸರಿಯಾಗಿ ಹೇಳಿಲ್ಲ, ಅವರು ಹೇಗೆ ಲಿಂಗಾಯತರ ಪರವಾಗಿ ಮತಯಾಚನೆ ಮಾಡ್ತಾರೆ ಎಂದು ಹರಿಹಾಯ್ದರು.

ಬಿಜೆಪಿ ಭದ್ರಕೋಟೆ ಹಾವೇರಿಗೆ ರಾಹುಲ್‌ ಎಂಟ್ರಿ: ಕಾರ್ಯಕರ್ತರಲ್ಲಿ ಹೆಚ್ಚಿದ ಉತ್ಸಾಹ!

ಸಿದ್ದರಾಮಯ್ಯ ಲಿಂಗಾಯತರ ಕ್ಷಮೆ ಕೇಳಲಿ...!

ಸಿದ್ದರಾಮಯ್ಯ ಅವರು ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಅಂತಾ ಹೇಳಿದ್ದಾರೆ. ಹಾಗಾದರೆ ಕಾಂಗ್ರೆಸ್ ನಲ್ಲಿರುವ ಲಿಂಗಾಯತ ಸಿಎಂ ಗಳು ಭ್ರಷ್ಟರಾ ಎಂದು ಪ್ರಶ್ನಿಸಿದರು. ಕೂಡಲೇ ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯದ ಬೆಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಲಿಂಗಾಯತ ಧರ್ಮ ಒಡೆಯಲು ಹೋಗಿ ಪಕ್ಷವನ್ನು ಹೀನಾಯ ಸ್ಥಿತಿಗೆ ತಂದಿದ್ದರು, ಅದನ್ನು ಮರೆತಿದ್ದಾರೆ ಎಂದು ಚಾಟಿ ಬೀಸಿದರು.

ಲಿಂಗಾಯತ ಡ್ಯಾಂ ಚಿಪ್ ಅಲುಗಾಡಿಸೋಕೆ ಆಗಲ್ಲ ; ಡಿಕೆಶಿಗೆ ಯತ್ನಾಳ್ ಟಾಂಗ್..!

ನಿನ್ನೆ ಡಿ.ಕೆ.ಶಿವಕುಮಾರ್(Dk Shivakumar) ಅವರು ಲಿಂಗಾಯತ ಡ್ಯಾಂ(Lingayat dam) ಅನ್ನು ಒಡೆಯುತ್ತೇವೆ ಎಂದಿದ್ದಾರೆ. ಡ್ಯಾಮ್ ಒಡೆಯುವದಲ್ಲ, ಅದರ ಒಂದು ಚಿಪ್ಪನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ನಿಮ್ಮ ಹಣೆ ಬರಹಕ್ಕೆ ಮೇಕೆದಾಟು ಯೋಜನೆ ಮಾಡಿಕೊಳ್ಳಲಾಗಿಲ್ಲ ಎಂದು ತಿರುಗೇಟು ನೀಡಿದರು.

ನಾಳೆ ಕೂಡಲಸಂಗಮಕ್ಕೆ ರಾಹುಲ್‌ ಗಾಂಧಿ ಭೇಟಿ

ಕಾಂಗ್ರೆಸ್ ಪಕ್ಷಕ್ಕೆ ಕೊನೆಯ ಮೊಳೆ ಮೇ. 10..!

ಇನ್ನು ಮೇ 10ರಂದು, ಮತದಾನ ನಡೆಯಲಿದ್ದು, ಅಂದು ರಾಜ್ಯದ ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಉಳಿದಿರುವ ಒಂದೇ ಒಂದು ಕೊನೆಯ ಮೊಳೆ ಹೊಡಿತಾರೆ.  ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ಸಿಎಂ ಆಗಲು ಬಿಡುವುದಿಲ್ಲ,  ಎಂ. ಬಿ. ಪಾಟೀಲ್ ಅವರನ್ನು ಸಿಎಂ ಆಗಲು ಎಲ್ಲಿ ಬಿಡ್ತಾರೆ. ಡಿಕೆಶಿ, ಸಿದ್ರಾಮಯ್ಯ ಅವರು ಎಂಬಿಪಿ ಸಿಎಂ ಆಗಲು ಬಿಡ್ತಾರಾ ಎಂದು ಪ್ರಶ್ನಿಸಿದರು.

click me!