ತಪಸ್ಸು ಎಂದ್ರೆ ದೇಹದಲ್ಲಿ ಶಾಖ ಉತ್ಪತ್ತಿಯಾಗೋದು ಎನ್ನುತ್ತಲೇ ಏಕಲವ್ಯನ ಕಥೆ ಹೇಳಿ ಸದನದಲ್ಲಿ ರಾಹುಲ್‌ ಕೋಲಾಹಲ!

By Suchethana D  |  First Published Dec 15, 2024, 5:13 PM IST

ತಪಸ್ಸು ಎಂದ್ರೆ ದೇಹದಲ್ಲಿ ಶಾಖ ಉತ್ಪತ್ತಿಯಾಗೋದು ಎನ್ನುತ್ತಲೇ ಏಕಲವ್ಯನ ಕಥೆ ಹೇಳಿ ಸದನದಲ್ಲಿ ರಾಹುಲ್‌ ಕೋಲಾಹಲ ಸೃಷ್ಟಿಸಿದರು. ಆಗಿದ್ದೇನು ನೋಡಿ...
 


ಕೆಲವು ರಾಜಕೀಯ ಮುಖಂಡರು ಕಾರ್ಯಕ್ರಮಗಳಲ್ಲಿ ಅನವಶ್ಯಕ ಉದಾಹರಣೆಗಳನ್ನು ಕೊಟ್ಟು ನಗೆಪಾಟಲಿಗೆ ಈಡಾಗುವುದು ಇದೆ. ಪಕ್ಷಾತೀತವಾಗಿ ಕೆಲವು ನಾಯಕರು ಮೇಲಿಂದ ಮೇಲೆ ಟ್ರೋಲ್‌ಗೆ ಒಳಗಾಗುತ್ತಲೇ ಇರುತ್ತಾರೆ. ಇದೀಗ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರು ಸದನದಲ್ಲಿ ಆಡಿದ ಮಾತುಗಳು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಇವರು ಆಡಿದ ಮಾತುಗಳಿಗೆ  ಆಡಿತಾರೂಢ ಬಿಜೆಪಿ ಸೇರಿದಂತೆ ಸದನಲ್ಲಿದ್ದ ಕೆಲವರು ಬಿದ್ದೂ ಬಿದ್ದೂ ನಕ್ಕಿದ್ದರಿಂದ ಈ ವಿಡಿಯೋ ಜಾಲತಾಣದಲ್ಲಿ ಮತ್ತಷ್ಟು ಸದ್ದು ಮಾಡುತ್ತಿದೆ. ಅಷ್ಟಕ್ಕೂ ರಾಹುಲ್‌ ಗಾಂಧಿಯವರು ಹೇಳಿದ್ದೇನೆಂದರೆ,  ತಪಸ್ಸು ಎಂದ್ರೆ ದೇಹದಲ್ಲಿ ಶಾಖ ಉತ್ಪತ್ತಿಯಾಗೋದು ಎಂದು! ಅದೇ ರೀತಿ, ಏಕಲವ್ಯನ ಉದಾಹರಣೆಯನ್ನೂ ನೀಡಿದ ರಾಹುಲ್‌, ದ್ರೋಣಾಚಾರ್ಯರು ಏಕಲವ್ಯನ ಬೆರಳನ್ನು ಕಟ್‌ ಮಾಡಿದರು ಎನ್ನುವ ಮೂಲಕವೂ ನಗೆಪಾಟಲಿಗೆ ಈಡಾಗಿದ್ದಾರೆ.  

ಅಂದಹಾಗೆ, ರಾಹುಲ್‌ ಗಾಂಧಿಯವರು ಹೀಗೆ ಹೇಳಲು ಕಾರಣವೂ ಇದೆ. ಅದೇನೆಂದರೆ, ನರೇಂದ್ರ ಮೋದಿಯವರ ಸರ್ಕಾರ ಯಾವುದೇ ಜನೋಪಯೋಗಿ ಕೆಲಸ ಮಾಡುತ್ತಿಲ್ಲ. ಯುವಕರ ಸೌಲಭ್ಯಗಳಿಗೆ ಕತ್ತರಿ ಹಾಕುತ್ತಿದೆ ಎಂದು ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ನೀಡಿದ್ದ ದ್ರೋಣಾಚಾರ್ಯ ಮತ್ತು ಏಕಲವ್ಯನ ಉದಾಹರಣೆಯನ್ನು ದ್ರೋಣಾಚಾರ್ಯ ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿದಂತೆ,  ಮೋದಿ ಸರ್ಕಾರ ದೇಶದ ಯುವಕರ ಹೆಬ್ಬೆರಳು ಕತ್ತರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಅದರ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ದ್ರೋಣಾಚಾರ್ಯ ಏಕಲವ್ಯನ ಹೆಬ್ಬೆರಳನ್ನು ಕತ್ತರಿಸಿಲ್ಲ, ಬದಲಿಗೆ ಗುರು ದಕ್ಷಿಣೆಯಾಗಿ ಏಕಲವ್ಯನೇ ಗುರುಗಳಿಗೆ ನೀಡಿದ್ದು, ಮಹಾಭಾರತವನ್ನು ಬದಲಿಸಬೇಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Tap to resize

Latest Videos

450 ವರ್ಷಗಳ ಹಿಂದೆಯೇ ಮೋದಿ ಭವಿಷ್ಯ ನುಡಿದಿದ್ದ ನಾಸ್ಟ್ರಾಡಾಮಸ್‌ 2025ರ ಬಗ್ಗೆ ಶಾಕಿಂಗ್‌ ಭವಿಷ್ಯ!

ಆದರೆ, ಇದಕ್ಕಿಂತಲೂ ಮುಖ್ಯವಾಗಿ, ಸದನದಲ್ಲಿಯೇ ಅವರ ಮಾತುಗಳು ನಗೆಪಾಟಲಿಗೆ ಈಡಾದದ್ದು ತಪಸ್ಸಿನ ಬಗ್ಗೆ ಉಲ್ಲೇಖಿಸಿದಾಗ. ಇದೇ ಏಕಲವ್ಯನ ಉದಾಹರಣೆ ನೀಡಿದ ರಾಹುಲ್‌ ಗಾಂಧಿ,  ಮುಂಜಾನೆ ಬಿಲ್ಲು ಬಾಣ ಹಿಡಿದು ಅಭ್ಯಾಸ ಮಾಡುವ ಮೂಲಕ ಏಕಲವ್ಯ ಎಂಬ ಬಾಲಕ ತಪಸ್ಸು ಮಾಡುತ್ತಿದ್ದ. ಆತ ಹಿಡಿದಿದ್ದ ಧನುಸ್ಸಿನಲ್ಲಿ  ತಪಸ್ಸಿದೆ. ಅದೇ ರೀತಿ ಮನ್ರೇಗಾ ಯೋಜನೆಯಲ್ಲಿ  ತಪಸ್ಸಿದೆ. ತಪಸ್ಸೆಂದರೆ, ಶರೀರದಲ್ಲಿ ಶಾಖ ಉತ್ಪತ್ತಿಸುವುದಾಗಿದೆ, ಅರ್ಥಮಾಡಿಕೊಳ್ಳಿ ಎಂದು ಹೇಳಿದ ತಕ್ಷಣ ಅಲ್ಲಿದ್ದವರೆಲ್ಲಾ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಶರೀರದಲ್ಲಿ ಶಾಖ ಉತ್ಪತ್ತಿಯಾಗುವುದು ತಪ್ಪಿಸ್ಸಿನಿಂದ ಎನ್ನುವ ಜ್ಞಾನ ರಾಹುಲ್‌ ಗಾಂಧಿಯಂಥ ಪಂಡಿತರಿಗೆ ಮಾತ್ರ ತಿಳಿಯಲು ಸಾಧ್ಯ ಎಂದು ತಮಾಷೆ ಮಾಡಲಾಗಿದೆ. 

undefined

ಇದೇ ವೇಳೆ, ರಾಹುಲ್‌ ಗಾಂಧಿಯವರು ತಮ್ಮ ಎಂದಿನ ಸಂವಿಧಾನದ ವರಸೆಯನ್ನೂಇಲ್ಲಿಗೆ ತಂದಿದ್ದಾರೆ. ಬಿಜೆಪಿ ಸಂವಿಧಾನವನ್ನು ಉನ್ನತ ಎಂದು ಭಾವಿಸುವುದಿಲ್ಲ. ವೀರ್‍‌ ಸಾವರ್ಕರ್ ಅವರು ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ. ಅವರ ಪ್ರಕಾರ ಮನುಸ್ಮೃತಿ ಹಿಂದೂ ರಾಷ್ಟ್ರಕ್ಕೆ ವೇದಗಳ ನಂತರ ಹೆಚ್ಚು ಪೂಜಿಸಬಹುದಾದ ಗ್ರಂಥವಾಗಿದೆ ಮತ್ತು ಪ್ರಾಚೀನ ಕಾಲದ ಸಂಸ್ಕೃತಿ, ಪದ್ಧತಿಗಳು, ಚಿಂತನೆ ಮತ್ತು ಆಚರಣೆಗೆ ಆಧಾರವಾಗಿದೆ. ಈ ಪುಸ್ತಕ ಶತಮಾನಗಳಿಂದ ನಮ್ಮ ರಾಷ್ಟ್ರದ ಆಧ್ಯಾತ್ಮಿಕ ಮತ್ತು ದೈವಿಕ ಉನ್ನತಿಯನ್ನು ಕ್ರೋಡೀಕರಿಸಿದೆ. ಇಂಥವರನ್ನು ಪೂಜಿಸಲಾಗುತ್ತಿದೆ ಎಂದರು. 

ಮೃತ ವ್ಯಕ್ತಿ ಜೀವಂತ ಆಗುವುದ್ಯಾಕೆ? ದೇಹದಲ್ಲಿರೋ ಧನಂಜಯ ಯಾರು? ರಾಮಚಂದ್ರ ಗುರೂಜಿ ರಿವೀಲ್‌

click me!