21ನೇ ಶತಮಾನದ ಕೌರವರು ಹೇಳಿಕೆ, ಅನರ್ಹ ಸಂಸದ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಕೇಸ್!

By Suvarna NewsFirst Published Mar 31, 2023, 8:52 PM IST
Highlights

ರಾಹುಲ್ ಗಾಂಧಿ ನೀಡುವ ಹೇಳಿಕೆ ಸ್ವತಃ ರಾಹುಲ್ ಗಾಂಧಿಗೆ ಮುಳುವಾಗುತ್ತಿದ್ದರೆ, ಇತ್ತ ಕಾಂಗ್ರೆಸ್‌ಗೆ ಸಮರ್ಥಿಸಿಕೊಳ್ಳುವ ತಲೆನೋವು ಹೆಚ್ಚಾಗುತ್ತಿದೆ. ಮೋದಿ ಸಮುದಾಯ ಅವಮಾನಿಸಿ ಸೂರತ್ ಕೋರ್ಟ್ ಜೈಲು ಶಿಕ್ಷೆ ಪಡೆದ ರಾಹುಲ್ ಗಾಂಧಿಗೆ ವಿರುದ್ದ ಹರಿದ್ವಾರ ಕೋರ್ಟ್‌ನಲ್ಲಿ ಹೊಸ ಕ್ರಿಮಿನಲ್ ಡಿಫಮೇಶನ್ ಕೇಸ್ ದಾಖಲಾಗಿದೆ. 

ನವದೆಹಲಿ(ಮಾ.31): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಲೆನೋವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೋದಿ ಸಮುದಾಯ ವಿರುದ್ದ ಹೇಳಿಕೆ ನೀಡಿ ಸೂರತ್ ಕೋರ್ಟ್‌ನಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ತೀರ್ಪಿನಿಂದ ರಾಹುಲ್ ಗಾಂಧಿ ಸಂಸದ ಸ್ಥಾನದಿಂದಲೂ ಅನರ್ಹರಾಗಿದ್ದಾರೆ. ಇದ್ದ ಪಾಟ್ನಾದಲ್ಲೂ ಇದೇ ವಿಚಾರಕ್ಕೆ ಪ್ರಕರಣ ದಾಖಲಾಗಿದೆ. ಈ ತಲೆನೋವಿನ ಬೆನ್ನಲ್ಲೇ ಇದೀಗ ಹೊಸ ಕೇಸ್ ದಾಖಲಾಗಿದೆ. ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ವಿರುದ್ಧ ಹರಿದ್ವಾರ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು(RSS) 21ನೇ ಶತಮಾನದ ಕೌರವರು ಎಂಬ ಹೇಳಿಕೆ ವಿರುದ್ಧ ಕ್ರಿಮಿನಲ್ ಡಿಫಮೇಶನ್ ದಾಖಲಾಗಿದೆ.

ಹರಿದ್ವಾರದ ಆರ್‌ಎಸ್‌ಎಸ್ ಸ್ವಯಂ ಸೇವಕ ಕಮಲ್ ಬದೋರಿಯಾ ಅವರ ಪರ ವಕೀಲ ಅರುಣ್ ಬದೋರಿಯಾ ಹರಿದ್ವಾರ ಕೋರ್ಟ್‌ನಲ್ಲಿ ಕ್ರಿಮಿನಲ್ ಡಿಫಮೇಶ್ ದಾಖಲಿಸಿದ್ದಾರೆ. ಎಪ್ರಿಲ್ 12 ರಂದು ಹರಿದ್ವಾರ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎಂದು ವಕೀಲ ಅರುಣ್ ಬದೋರಿಯಾ ಹೇಳಿದ್ದಾರೆ. ಸೆಕ್ಷನ್ 499 ಹಾಗೂ ಸೆಕ್ಷನ್ 500 ಅಡಿ ಪ್ರಕರಣ ದಾಖಲಿಸಲಾಗಿದೆ. 

ಅನರ್ಹ ಬೆನ್ನಲ್ಲೇ ರಾಹುಲ್‌ಗೆ ಮತ್ತೊಂದು ಸಂಕಷ್ಟ, ಏ.2ಕ್ಕೆ ವಿಚಾರಣೆಗೆ ಹಾಜರಾಗಲು ಪಾಟ್ನಾ ಕೋರ್ಟ್ ಸೂಚನೆ!

ಜನವರಿಯಲ್ಲಿ  ಭಾರತ್ ಜೋಡೋ ಯಾತ್ರೆ ಕುರುಕ್ಷೇತ್ರದಲ್ಲಿ ಸಾಗಿತ್ತು. ಈ ವೇಳೆ ಆಯೋಜಿಸಿದ ಸಮಾವೇಶದಲ್ಲಿ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ವಿರುದ್ಧ ಹರಿಗಾಯ್ದಿದ್ದರು. ರಾಷ್ಟ್ರೀಯ ಸ್ವಂಯ ಸೇವಕ ಸಂಘದವರು 21ನೇ ಶತಮಾನದ ಕೌರವರು. ಖಾಕಿ ಚಡ್ಡಿ ಹಾಕಿ, ಕೈಯಲ್ಲಿ ಲಾಠಿ ಹಿಡಿದು ಶಾಖೆಗಳನ್ನು ಮಾಡುತ್ತಾರೆ. ಇವರ ಜೊತೆ 2 ರಿಂದ 3 ಶ್ರೀಮಂತರು  ಕೌರವವರ ಪರ ಸೇರಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಈ ಕುರಿತು ಆರ್‌ಎಸ್‌ಎಸ್ ಸ್ವಯಂ ಸೇವಕ ಕಮಲ್ ಬದೋರಿಯಾ ಜನವರಿ 11 ರಂದು ರಾಹುಲ್ ಗಾಂಧಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಆದರೆ ರಾಹುಲ್ ಗಾಂಧಿ ಈ ನೋಟಿಸ್‌ಗೆ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಕಮಲ್ ಬದೋರಿಯಾ ಇದೀಗ ಕ್ರಿಮಿನಲ್ ಡಿಫಮೇಶ್ ಕೇಸ್ ದಾಖಲಿಸಿದ್ದಾರೆ. 

ರಾಹುಲ್‌ಗೆ ಮತ್ತೆ ಸಂಕಷ್ಟ: ಲಂಡನ್‌ನಲ್ಲಿ ದೂರು ದಾಖಲಿಸುವ ಬೆದರಿಕೆಯೊಡ್ಡಿದ ಲಲಿತ್ ಮೋದಿ

ಮೋದಿ ಸಮುದಾಯ ನಿಂದಿಸಿ ಅನರ್ಹರಾಗಿರುವ ರಾಹುಲ್ ಗಾಂಧಿ
2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕರ್ನಾಟಕದ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ‘ಎಲ್ಲ ಕಳ್ಳರ ಉಪನಾಮ (ಅಡ್ಡಹೆಸರು) ಮೋದಿ ಎಂದೇ ಏಕೆ ಆಗಿರುತ್ತದೆ?’ ಎಂದು ಪ್ರಶ್ನಿಸಿದ್ದರು. ಇದನ್ನು ಪ್ರಶ್ನಿಸಿ ಅಂದಿನ ಗುಜರಾತ್‌ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಸೂರತ್‌ ಕೋರ್ಚ್‌ನಲ್ಲಿ ಮಾನಹಾನಿ ದಾವೆ ದಾಖಲಿಸಿದ್ದರು. ಗುರುವಾರ ಈ ಕುರಿತ ತೀರ್ಪು ನೀಡಿದ್ದ ಕೋರ್ಚ್‌, ರಾಹುಲ್‌ಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.  ಜನಪ್ರತಿನಿಧಿ ಕಾಯ್ದೆ ಅನ್ವಯ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲುಶಿಕ್ಷೆಯಾದರೆ ಶಾಸನಸಭೆಯಿಂದ ಅನರ್ಹಗೊಳಿಸಲಾಗುತ್ತದೆ.

click me!