ಏ.1ಕ್ಕೆ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್, ಹೆಚ್‌ಡಿ ಕುಮಾರಸ್ವಾಮಿ ಘೋಷಣೆ!

By Suvarna NewsFirst Published Mar 31, 2023, 8:16 PM IST
Highlights

ಕರ್ನಾಟಕ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದೆ. ಇದೀಗ ಅಭ್ಯರ್ಥಿಗಳ ಕುತೂಹಲಕ್ಕೆ ಉತ್ತರ ನೀಡಲು ಮೂರು ಪಕ್ಷಗಳು ಪ್ರಯತ್ನಿಸುತ್ತಿದೆ.ನಾಳೆ ಏಪ್ರಿಲ್ 1 ರಂದು ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಿದೆ. ಈ ಕುರಿತು ಹೆಚ್‌ಡಿ ಕುಮಾರಸ್ವಾಮಿ ಮಹತ್ವದ ಘೋಷಣೆ ಮಾಡಿದ್ದಾರೆ.

ಬೆಂಗಳೂರು(ಮಾ.31): ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಭರಾಟೆ ಜೋರಾಗಿದೆ. ಅಭ್ಯರ್ಥಿಗಳ ರೋಡ್ ಶೋ, ಸಮಾವೇಶದ ಅಬ್ಬರ ಹೆಚ್ಚಿದೆ. ಇದೀಗ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ನಾಳೆ(ಏ.01) ರಂದು ಜೆಡಿಎಸ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಾಳೆಯಿಂದ ಚಾಮರಾಜನಗರ, ಮೈಸೂರು, ಬಳ್ಳಾರಿ , ಹುಬ್ಬಳ್ಳಿ, ಧಾರವಾಡದಲ್ಲಿ 12 ನೇ ತಾರೀಖಿನ ವರೆಗೂ ಪ್ರಚಾರ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಏಪ್ರಿಲ್ 13 ರಿಂದ 20 ರ ವರೆಗೆ ಅಭ್ಯರ್ಥಿಗಳ ಜೊತೆ ನಾಮಪತ್ರ ಸಲ್ಲಿಕೆಗೊ ತೆರಳುತ್ತೇನೆ. 21 ರಿಂದ 24 ವರೆಗೂ ರಾಮನಗರ, ಚನ್ನಪಟ್ಟಣದಲ್ಲಿ ಕನಕಪುರ,ಪ್ರಚಾರ ಮಾಡುತ್ತೇನೆ. 25 ರಿಂದ ಮಾರ್ಚ್‌ 8 ವರೆಗೂ ರಾಜ್ಯದ ಎಲ್ಲಾ ‌ಕ್ಷೇತ್ರದಲ್ಲಿ  ಪ್ರಚಾರ ಮಾಡುತ್ತೇನೆ. ಈ ಮೂಲಕ ಜೆಡಿಎಸ್ ಪರ ಅಭೂತಪೂರ್ವ ಬೆಂಬಲ ಸಿಗುವಂತೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ: ಬರಮಾಡಿಕೊಂಡ ಎಚ್‌ಡಿಕೆ

ರಾಜ್ಯದ ಚುನಾವಣಾ ಫಲಿತಾಂಶ ಕುರಿತು ಬಿಡುಗಡೆಯಾಗಿರುವ ಸಮೀಕ್ಷಾ ವರದಿಗೆ ತಲೆಕೆಡಿಸಿಕೊಂಡಿಲ್ಲ. ಈ ಬಾರಿ ಜೆಡಿಎಸ್ ಪರ ಜನರು ಒಲವು ವ್ಯಕ್ತಪಡಿಸಿದ್ದಾರೆ. ನಮ್ಮ ಗುರಿ ತಲುಪಲು ಬೇಕಾದ ಕೆಲಸ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಸವನಗುಡಿ ಕ್ಷೇತ್ರದಲ್ಲಿಬಂಡೆ ಮಹಾಕಾಳಿ ದೇವಿಗೆ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸಿದರು.  

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿವೈ ವಿಜಯೇಂದ್ರ ಸ್ಪರ್ಧ ಮಾಡಲಿದ್ದಾರೆ ಅನ್ನೋ ಮಾತುಗಳು ಜೋರಾಗುತ್ತಿದೆ. ಈ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ವರುಣಾದಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಅನ್ನೋದು ಅವರ ಪಕ್ಷದ ವಿಚಾರ. ಎಲ್ಲಾ ಕ್ಷೇತ್ರದಂತೆ ವರುಣಾದಲ್ಲೂ ಪ್ರಚಾರ ಮಾಡುತ್ತೇನೆ. ಸ್ಥಳೀಯ ನಾಯಕರ ಜೊತೆ ಚರ್ಚಿಸಿ ತಂತ್ರಗಾರಿಕೆ, ಪ್ರಚಾರ ಮಾಡಲಿದ್ದೇವೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಬೆಂಗಳೂರು: ಜೆಡಿಎಸ್‌ ಶಾಸಕ ಮಂಜುನಾಥ್‌ ಫೋಟೋ ಇದ್ದ 800 ಬಾಕ್ಸ್‌ ಕುಕ್ಕರ್‌ ಜಪ್ತಿ

ಎಟಿ ರಾಮಸ್ವಾಮಿ ಜೆಡಿಎಸ್ ತೊರೆದ ವಿಚಾರ ಕುರಿತು ಹೆಚ್‌ಡಿಕೆ ಮಹತ್ವದ ವಿಚಾರ ತಿಳಿಸಿದ್ದಾರೆ. ಎಟಿ ರಾಮಸ್ವಾಮಿ ಅವರನ್ನು ಜೆಡಿಎಸ್ ಹೊರಹಾಕಿಲ್ಲ. ಪಕ್ಷದಿಂದ ಎಲ್ಲಾ ಸವಲತ್ತು ಪಡೆದು ಇದೀಗ ವೈಯುಕ್ತಿಕ ಲಾಭಕ್ಕಾಗಿ ಪಕ್ಷಾಂತರ ಮಾಡಿದ್ದಾರೆ. ಪಕ್ಷ ಬಿಡುವಾಗ ಎಲ್ಲರೂ ಇದೇ ಮಾತು ಹೇಳುತ್ತಾರೆ. ಗುಬ್ಬಿ ಶ್ರೀನಿವಾಸ ಕೂಡ ಇದೇ ಮಾತನ್ನು ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಏನಾಗಿದೆ ಅನ್ನೋದು ತಿಳಿದಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಮೇ.10ಕ್ಕೆ ಚುನಾವಣೆ ನಡೆಯಲಿದೆ. ಮೇ.13ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.

click me!