ಮೋದಿಯವರ ಸುಳ್ಳಾಟ ಬಯಲಿಗೆಳೆಯಲು ರಾಹುಲ್‌ಗೆ ಒಳ್ಳೆಯ ಅವಕಾಶವಿದೆ: ಸಚಿವ ಸಂತೋಷ್ ಲಾಡ್

By Govindaraj S  |  First Published Jun 26, 2024, 5:10 PM IST

ರಾಹುಲ್ ಗಾಂಧಿ ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಪ್ರಧಾನಿ ಮೋದಿಯವರ ಸುಳ್ಳಾಟ ಬಯಲಿಗೆ ಎಳೆಯಲು ಇದೀಗ ಒಳ್ಳೆಯ ಅವಕಾಶವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. 


ಧಾರವಾಡ (ಜೂ.26): ರಾಹುಲ್ ಗಾಂಧಿ ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಪ್ರಧಾನಿ ಮೋದಿಯವರ ಸುಳ್ಳಾಟ ಬಯಲಿಗೆ ಎಳೆಯಲು ಇದೀಗ ಒಳ್ಳೆಯ ಅವಕಾಶವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಲೋಕಸಭೆ ವಿಪಕ್ಷ ನಾಯಕರಾಗಿ ರಾಹುಲ್ ಗಾಂಧಿ ಆಯ್ಕೆ ವಿಚಾರದ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದು ಖುಷಿ ಇದೆ. ಇಂಡಿಯಾ ಒಕ್ಕೂಟಕ್ಕೆ ಧನ್ಯವಾದ ಹೇಳುವೆ. 

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಲು ಸಮರ್ಥರಿದ್ದಾರೆ. ಹದಿನೈದು ವರ್ಷ ಸುದ್ದಿಗೋಷ್ಠಿ ಮಾಡದೇ ದೇಶ ನಡೆಸಿದ್ದಾರೆ. ಇನ್ನು ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿ ನಡೆಸಲು ಆಗಲ್ವಾ ಎಂದು ಪ್ರಶ್ನಿಸಿದರು. ವಯನಾಡ್‌ನಲ್ಲಿ ಪ್ರಿಯಂಕಾ ಗಾಂಧಿ ಸ್ಪರ್ಧಿಸಿ, ಗೆಲ್ಲುತ್ತಾರೆ. ಅವರು ಸಂಸತ್‌ಗೆ ಬಂದರೆ ನಮಗೆ ಮತ್ತಷ್ಟು ಶಕ್ತಿ ಬರುತ್ತದೆ ಎಂದರು. ಡಿಕೆಶಿ ಸಿಎಂ ಆಗಲಿ ಎಂದು ಚನ್ನಗಿರಿ ಶಾಸಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. 

Tap to resize

Latest Videos

ಜನತಾ ದರ್ಶನ ಅಂತ್ಯ: ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನ ಅಂತ್ಯವಾಗಿದ್ದು, ಸಂತೋಷ ಲಾಡ್ ನೇತೃತ್ವದಲ್ಲಿ ಜನತಾ ದರ್ಶನ ನಡೆದಿತ್ತು. ಬಳಿಕ ಮಾತನಾಡಿದ ಲಾಡ್, ಜನತಾ ದರ್ಶನದಲ್ಲಿ 166 ಅರ್ಜಿ ಬಂದಿವೆ. ಹೆಚ್ಚಾಗಿ ರಸ್ತೆಗಳ ಸಮಸ್ಯೆಯೇ ಬಂದಿವೆ. ಅಕ್ಕಪಕ್ಕದ ರಸ್ತೆಗಳ ವ್ಯಾಜ್ಯಗಳ ಅರ್ಜಿ ಹೆಚ್ಚಾಗಿ ಬಂದಿವೆ. ಮೊದಲು ಅನ್ಯೋನ್ಯವಾಗಿದ್ದವರು ಈಗ ಜಗಳಾಡಿದ್ದಾರೆ. ಸರ್ವೆ ಇಲಾಖೆ ಸಂಬಂಧಿಸಿ 29 ಅರ್ಜಿ, ಕಂದಾಯ ಇಲಾಖೆ 15,  ಉಪನೋಂದಣಿ ಸಂಬಂಧಿಸಿ ಐದಾದು ಸೇರಿ 166 ಅರ್ಜಿ ಬಂದಿವೆ. ನಮ್ಮ ಮಾರ್ಗಸೂಚಿ ಪ್ರಕಾರ ತಿಂಗಳೊಳಗೆ ಇತ್ಯರ್ಥ ಮಾಡುತ್ತೇವೆ ಎಂದರು.

ಬೆಲೆ ಏರಿಕೆ ಕಾಂಗ್ರೆಸ್‌ ಸರ್ಕಾರದ 6ನೇ ಗ್ಯಾರಂಟಿ: ಸಿ.ಟಿ.ರವಿ

ಕಾನೂನಾತ್ಮಕ ಆಗಲಿರೋದನ್ನು ಪರಿಹಾರ ಮಾಡುತ್ತೇವೆ. ಕಾನೂನಾತ್ಮಕ ಆಗದೇ ಇರೋದನ್ನು ಹಿಂಬರಹ ಕೊಡುತ್ತೇವೆ. ಹಿಂದಿನ ಜನಸ್ಪಂದನದ ಅರ್ಜಿಗಳು ಈಗಾಗಲೇ ಇತ್ಯರ್ಥ ಆಗಿವೆ. ಸ್ಥಳದಲ್ಲೇ ಎರಡ್ಮೂರು ಅರ್ಜಿ ಮಾತ್ರ ಇತ್ಯರ್ಥ ಆಗಿವೆ.ನ್ಯಾಯಾಲಯದಲ್ಲಿ ವ್ಯಾಜ್ಯ ಇರೋದನ್ನು ಹಿಂಬರಹ ಕೊಟ್ಟಿದ್ದೇವೆ ಎಂದು ಸಂತೋಷ್ ಲಾಡ್ ತಿಳಿಸಿದರು.

click me!