ರಾಹುಲ್‌ ಗಾಂಧಿ ಭಾರತ್ ಜೋಡೋ ಅಲ್ಲ; ಭಾರತ್‌ ತೋಡೋ ಯಾತ್ರೆ ಅಷ್ಟೇ; ಎಂ.ಪಿ.ರೇಣುಕಾಚಾರ್ಯ

By Kannadaprabha News  |  First Published Oct 3, 2022, 10:15 AM IST

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವುದು ಭಾರತ್‌ ಜೋಡೋ ಅಲ್ಲ, ಭಾರತ್‌ ತೋಡೋ ಯಾತ್ರೆ ಅಷ್ಟೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.


ದಾವಣಗೆರೆ (ಅ.3) : ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವುದು ಭಾರತ್‌ ಜೋಡೋ ಅಲ್ಲ, ಭಾರತ್‌ ತೋಡೋ ಯಾತ್ರೆ ಅಷ್ಟೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಡಿಕೆಶಿ ಕಣ್ಣೀರಿಗೆ ಸಿ.ಟಿ.ರವಿ ವ್ಯಂಗ್ಯ

Latest Videos

undefined

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ ಹಮ್ಮಿಕೊಂಡಿರುವುದು ಭಾರತ್‌ ತೋಡೋ ಯಾತ್ರೆ. ಇದರಲ್ಲಿ ಫನ್ನಿ ಬಾಯ್‌ ಆಗಿ ರಾಹುಲ್‌ ಗಾಂಧಿ ಹೆಜ್ಜೆ ಹಾಕುತ್ತಿದ್ದಾರೆ. ನರೇಂದ್ರ ಮೋದಿಯಂತಹ ದೈತ್ಯ ಬಂಡೆ ವಿರುದ್ಧ ಹೋಗ್ತಾರಲ್ಲ ರಾಹುಲ್‌ ಗಾಂಧಿ ಅದು ಚೈಲ್ಡಿಶ್‌ ಆಗಿರತ್ತೆ ಎಂದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜನರು ಗೋ ಬ್ಯಾಕ್‌ ಅಂತಾ ಕಾಂಗ್ರೆಸ್ಸಿನ ಯಾತ್ರೆಯನ್ನು ಓಡಿಸುತ್ತಿದ್ದಾರೆ. ಭಾರತ್‌ ಜೋಡೋ ಯಾತ್ರೆಗೆ ಜನರೇ ಬರುತ್ತಿಲ್ಲ. ಹಣ ಕೊಟ್ಟು, ಜನರನ್ನು ಕರೆ ತರುವ ಕೆಲಸವನ್ನು ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ. ಗೋ ಬ್ಯಾಕ್‌ ರಾಹುಲ್‌ ಗಾಂಧಿ ಎಂಬುದಾಗಿ ಜನರೇ ಹೇಳುತ್ತಿದ್ದಾರೆ. ರಾಹುಲ್‌ ಗಾಂಧಿಗೆ ರಾಜಕೀಯ ಪ್ರಬುದ್ಧತೆಯೇ ಇಲ್ಲ. ದೇಶವನ್ನು ಓಟಿಗಾಗಿ, ತಮ್ಮ ಸ್ವಾರ್ಥಕ್ಕಾಗಿ ಛಿದ್ರ ಮಾಡಿದವರು ಕಾಂಗ್ರೆಸ್‌ನವರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಬಲಿಪಶು!

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷ ಒಡೆದ ಮನೆಯಾಗಿದೆ. ಎಐಸಿಸಿ ಅಧ್ಯಕ್ಷರಾಗಲು ಕಾಂಗ್ರೆಸ್ಸಿನಲ್ಲೇ ಯಾರೊಬ್ಬರೂ ಸಿದ್ಧರಿಲ್ಲ. ರಾಹುಲ್‌ ಗಾಂಧಿ ಏನಾದರೂ ಅಧ್ಯಕ್ಷರಾದರೆ ಕಾಂಗ್ರೆಸ್‌ ಧೂಳೀಪಟವಾಗುತ್ತದೆಂಬ ಅರಿವು ಸ್ವಪಕ್ಷೀಯರಲ್ಲೇ ಇದೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷರಾಗಿ ಮಾಡ್ತುತಿದ್ದಾರೆ. ಈ ವಿಚಾರಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಬಲಿಪಶು ಮಾಡಲಾಗಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಗಾಂಧೀಜಿ ಇದ್ದ ಕಾಂಗ್ರೆಸ್‌ ಪಕ್ಷ ದೇಶಭಕ್ತ ಆಗಿತ್ತು. ಈಗಿರುವುದು ನಕಲಿ ಕಾಂಗ್ರೆಸ್‌ ಪಕ್ಷವೆಂದು ಲೇವಡಿ ಮಾಡಿದರು. ಭಾರತ್‌ ಜೋಡೋ ಯಾತ್ರೆಯು ಐಷಾರಾಮಿ ಯಾತ್ರೆಯಾಗಿದೆ. ಅದಕ್ಕೆ ದಿನಕ್ಕೆ ಕೋಟ್ಯಾಂತರ ರು.ಗಳನ್ನು ವ್ಯಯಿಸುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಎಲ್ಲಿದ್ದರು? ದಾವಣಗೆರೆಯಲ್ಲಿ ಈಚೆಗೆ ನಡೆದ ಸಿದ್ದರಾಮೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಲವಂತದ ಅಪ್ಪುಗೆ ಮಾಡಿದ್ದ ರು. ಇಲ್ಲಿಂದ ಬೆಂಗಳೂರಿಗೆ ಹೋದ ನಂತರ ಸಿದ್ದು-ಡಿಕೆಶಿ ನಾನೊಂದು ತೀರ, ನೀನೊಂದು ತೀರವಾಗಿದ್ದಾರೆ ಎಂದು ಎಂ.ಪಿ.ರೇಣುಕಾಚಾರ್ಯ ಕುಟುಕಿದರು.

 

ರಾಹುಲ್ ಗಾಂಧಿಯನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ರಾಜ್ಯದಲ್ಲಿ 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಸೂರ್ಯ, ಚಂದ್ರರು ಇರುವುದು ಎಷ್ಟುಸತ್ಯವೋ ಮತ್ತೆ ನಾವೇ ಅಧಿಕಾರಕ್ಕೆ ಬರುವುದೂ ಅಷ್ಟೇ ಸತ್ಯ.

ಎಂ.ಪಿ.ರೇಣುಕಾಚಾರ್ಯ, ಹೊನ್ನಾಳಿ ಶಾಸಕ

click me!