ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಶ್ವತ್ಥ್ ನಾರಾಯಣ, ತೇಜಸ್ವಿ ಸೂರ್ಯ

Published : Oct 03, 2022, 08:08 AM IST
ಜೆಡಿಎಸ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಶ್ವತ್ಥ್ ನಾರಾಯಣ, ತೇಜಸ್ವಿ ಸೂರ್ಯ

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ರಾಮನಗರದಲ್ಲಿ ನೂರಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾವೇನಾದ್ರೂ ಅವರ ಕಾರ್ಯಕ್ರಮ ತಡೆದಿದ್ದೇವಾ? ಅಭಿವೃದ್ಧಿ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಏಕೆ ತಡೆಯಬೇಕಿತ್ತು - ಸಚಿವ ಅಶ್ವಥ್ ನಾರಾಯಣ್. ರಾಹುಲ್ ಗಾಂಧಿ ಭಾರತ್ ಜೋಡೋ‌ ಮಾಡುವುದಕ್ಕೂ ಮುನ್ನ ಕರ್ನಾಟಕದಲ್ಲಿ ಡಿಕೆಶಿ ಸಿದ್ದರಾಮಯ್ಯರನ್ನ ಜೋಡಿ ಮಾಡಿ  - ಸಂಸದ ತೇಜಸ್ವಿ ಸೂರ್ಯ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಅ.3) : ಗಾಂಧಿ ಜಯಂತಿ ಹಾಗೂ ಮೋದಿ@2022 ಅಭಿಯಾನದಡಿ ಕೋಲಾರ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಬೃಹತ್ ರಕ್ತದಾನ ಬೃಹತ್‌ ಶಿಬಿರ ಹಾಗೂ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ್ ನಾರಾಯಣ್, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದರು ಆಗಿರುವ ತೇಜಸ್ವಿ ಸೂರ್ಯ ಭಾಗವಹಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಚಿವ ಅಶ್ವತ್ಥ್  ನಾರಾಯಣ ಹಾಗೂ ತೇಜಸ್ವಿ ಸೂರ್ಯ ಮಾಧ್ಯಮಗಳ ಜೊತೆ ಮಾತನಾಡಿದರು.

ಸಚಿವ ಅಶ್ವತ್ಥ್‌ಗೆ ವಾಮಮಾರ್ಗದಲ್ಲಿ ಒಳ್ಳೆ ಅನುಭವ: ಕುಮಾರಸ್ವಾಮಿ

ರಾಮನಗರದಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ್, ಅಭಿವೃದ್ದಿ ಕಾರ್ಯಕ್ರಮಗಳ‌ನ್ನ ಯಾಕೆ ತಡೆಯಬೇಕು, ಕಾರ್ಯಕ್ರಮ ನಡೆಯಬಾರದು ಎನ್ನುವ ಉದ್ದೇಶ ಅವರದ್ದಾಗಿತ್ತು ಎಂದು ಎಚ್‌ಡಿ ಕುಮಾರಸ್ವಾಮಿಯವರ ವಿರುದ್ಧ ಕಿಡಿ ಕಾರಿದರು.

ಅವರು ಕೇಳಿದ ಅನುಧಾನ ಹಾಗೂ ಸಹಕಾರವನ್ನ ಸರ್ಕಾರದಿಂದ ನೀಡಿದ್ದೇವೆ. ನಮ್ಮ ಸರ್ಕಾರ ಯಾವುದೇ ತಾರತಮ್ಯ ಇಲ್ಲದೆ ಬಯಸಿದ್ದೆಲ್ಲವನ್ನೂ ನೀಡಿದ್ದೇವೆ ಅನುದಾನ ಸಹ ನೀಡಿದ್ದೇವೆ. ರಾಮನಗರಕ್ಕೆ ವಿಶೇಷ ರೂಪ ನೀಡಿರುವುದು ನಮ್ಮ ಸರ್ಕಾರ. ಕಾವೇರಿ ನೀರು ರಾಮನಗದಲ್ಲಿ ಮನೆ ಮನೆಗೂ ತಲುಪಿಸ್ತಿದ್ದೇನೆ. ಗದಗ ಜಿಲ್ಲೆ ಬಿಟ್ಟರೆ ರಾಜ್ಯದ ಎರಡನೇ ಜಿಲ್ಲೆ ರಾಮನಗರ. ಅಂತರಾಷ್ಟ್ರೀಯ ಮಾರುಕಟ್ಟೆ, ರೇಷ್ಮೆ ಮಾರುಕಟ್ಟೆ, ಫುಡ್ ಯುನಿಟ್, ರಾಜೀವ್ ಗಾಂಧಿ ವಿವಿ, ಇದೆಲ್ಲವನ್ನು ನಮ್ಮ ಸರ್ಕಾರ ಮಾಡಿದೆ. ರಾಜಕೀಯದಲ್ಲಿ ಚುನಾವಣೆನೇ ಬೇರೆ ಅಭಿವೃದ್ದಿಯೇ ಬೇರೆ ಎನ್ನುವದನ್ನ ಕುಮಾರಸ್ವಾಮಿ ಮೊದಲು ತಿಳಿದುಕೊಳ್ಳಬೇಕು ಎಂದರು. 


ಜನರ ವಿಶ್ವಾಸ ಗಳಿಸಲು ಪ್ರತಿಯೊಂದು ಪಕ್ಷಗಳು ರಾಜಕೀಯ ಮಾಡುತ್ತಿವೆ. ಈ ಕಾರ್ಯಕ್ರಮ ಮುಂಚೆಯೂ ಆಯೋಜಿಸಲಾಗಿತ್ತು. ಅವರು ಆಕ್ಷೇಪಣೆ ಮಾಡಿದ ಕಾರಣ ಎರಡನೇ ಬಾರಿಗೆ ಆಯೋಜಿಸಲಾಗಿದೆ, ಅವರೇ ಪತ್ರ ಬರೆದು, "ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ, ನಾನು ಪ್ರವಾಸದಲ್ಲಿದ್ದೇನೆ.' ಎಂದು ತಿಳಿಸಿದ್ದರು. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಕುಮಾರಸ್ವಾಮಿ ನೂರಾರು ಕಾರ್ಯಕ್ರಮ ಮಾಡಿದ್ದಾರೆ. ನಾವೇನಾದ್ರೂ ತಡೆದಿದ್ದೀವಾ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಚಿವ ಅಶ್ವತ್ಥ್ ನಾರಾಯಣ ಪ್ರಶ್ನೆ ಮಾಡಿದರು. 

ಎಚ್‌ಡಿಕೆ ಮತ್ತು ಅವರ ಪತ್ನಿ, ಕನಕಪುರದಲ್ಲಿ ಡಿಕೆಶಿ, ಮಾಗಡಿಯಲ್ಲಿ ಮಂಜು ಇಂಥ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಯಾವತ್ತಾದ್ರೂ ಮಾಡಬಾರದು ಎಂದು ಹೇಳಿದ್ದೀನಾ? ಎಷ್ಟು ಗೌರವ ಸ್ವಾತಂತ್ರ್ಯ ಮಾನ್ಯತೆ ಕೊಟ್ಟಿದ್ದೇವೆ, ಎಷ್ಟು ಸಹಿಸಿಕೊಂಡಿದ್ದೇವೆ ಎಷ್ಟು ಸಹಕಾರ ಕೊಟ್ಟಿದ್ದೇವೆ. ಆದರೂ ಹೀಗೆ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ನುಗ್ಗಿಸಿ ಅಡ್ಡಿಪಡಿಸುವುದು ಎಷ್ಟು ಸರಿ? ನಾವು ಕೊಟ್ಟ ಗೌರವ, ಸಹಕಾರ ಯಾರೂ ಕೊಡಲು ಸಾಧ್ಯವಿಲ್ಲ. ಅವರು ಅಧ್ಯಕ್ಷರಾಗಿ ಕಾರ್ಯಕ್ರಮದಲ್ಲಿ ಬಾಗವಹಿಸಬೇಕಿತ್ತು. ಅದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದಲ್ಲೇ ಎರಡನೇ ಅತಿ ಹೆಚ್ಚು ಮತಗಳಿಂದ ಗೆದ್ದಿರೋದು ನಾನು.
ಅಲ್ಲಿ ಕೆಲಸ ಮಾಡುವ ಮೂಲಕ ಅಭಿಮಾನದಿಂದ ಜನರ ವಿಶ್ವಾಸ ಗಳಿಸಿದ್ದೇನೆ. ರಾಮನಗರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳನ್ನ ಕುಮಾರಸ್ವಾಮಿ ತಡೆಯಬೇಕಾಗಿತ್ತು. ಆದರೆ ಅದನ್ನು ಕಾರ್ಯಕರ್ತರ ಮೂಲಕ ಮಾಡಿಸಿದ್ದಾರೆ. ಭ್ರಷ್ಟಾಚಾರಕ್ಕೆ ಬಿಜೆಪಿ ಸಿಂಹಸ್ವಪ್ನವಾಗಿದೆ.  ಭ್ರಷ್ಟಾಚಾರವನ್ನ ಪಕ್ಷಾತೀತವಾಗಿ ಸಮಾಜದಲ್ಲಿ ಸಂಪೂರ್ಣವಾಗಿ ತೊಲಗಿಸಬೇಕು. ನಮ್ನ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನಡೆಸ್ತಿದೆ ಎಂದರು.

ಪಕ್ಷದಲ್ಲೇ ಬಿರುಕು ಇಟ್ಟುಕೊಂಡು ದೇಶ ಜೋಡಿಸಲು ಹೊರಟಿರುವುದು ಹಾಸ್ಯಾಸ್ಪದ; ತೇಜಸ್ವಿ ಸೂರ್ಯ ವ್ಯಂಗ್ಯ

ಇನ್ನು ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ(Rahul Gandhi) ನಡೆಸುತ್ತಿರುವ ಭಾರತ್ ಜೋಡೋ(Bharat Jodo) ವಿಚಾರವಾಗಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ ಸಂಸದ ತೇಜಸ್ವಿ ಸೂರ್ಯ(tejasvi surya), ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್‌(D.K.Shivakumar) ಹಾಗೂ ಸಿದ್ದರಾಮಯ್ಯ(Siddaramaiah), ರಾಜಸ್ಥಾನ(Rajastana)ದಲ್ಲಿ ಅಶೋಕ್‌ ಗೆಹಲೋತ್‌(Ashok Gehlot) ಹಾಗೂ ಸಚಿನ್‌ ಪೈಲಟ್‌(Sachin pilot) ಅವರನ್ನು ಮೊದಲು ರಾಹುಲ್ ಗಾಂಧಿ ಅವರು ಜೋಡೊ ಮಾಡಲಿ. ಕಾಂಗ್ರೆಸ್(Congress) ಪಕ್ಷದಲ್ಲೇ ಬಿರುಕು ಇಟ್ಟುಕೊಂಡು ದೇಶ ಒಗ್ಗೂಡಿಸಲು ಹೊರಟಿರುವುದು ಹಾಸ್ಯಾಸ್ಪದ ಎಂದರು.

ಗೂಂಡಾಗಳಿಂದ ಗಲಭೆ ಎಬ್ಬಿಸಿದ ಕುಮಾರಸ್ವಾಮಿ: ಯೋಗೇಶ್ವರ್‌

ಕಾಂಗ್ರೆಸ್(Congress) ಪಕ್ಷದಲ್ಲಿ ಮೂರು ವರ್ಷ ಕಳೆದರೂ ಪಕ್ಷಕ್ಕೆ ಒಬ್ಬ ಅಧ್ಯಕ್ಷನನ್ನು ನೇಮಕ ಮಾಡಿಕೊಳ್ಳಲು ಆಗಲಿಲ್ಲ. ಇನ್ನು ಇವರು ದೇಶವನ್ನು ಅದು ಹೇಗೆ ಮುನ್ನಡೆಸುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಲವಂತದಿಂದ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಇಳಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಮಹಾಮೇಳಾವ್ ಅನುಮತಿ ನಿರಾಕರಣೆ - ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ