ಪಾಕಿಸ್ತಾನ ಹೆಡೆಮುರಿ ಕಟ್ಟಬಹುದು, ದೇಶದ್ರೋಹಿ ಕೈ ನಾಯಕರ ಹರಕು ಬಾಯಿ ಮುಚ್ಚಿಸಲಾಗಲ್ಲ; ಆರ್.ಅಶೋಕ

Published : Apr 25, 2025, 09:03 PM ISTUpdated : Apr 25, 2025, 09:07 PM IST
ಪಾಕಿಸ್ತಾನ ಹೆಡೆಮುರಿ ಕಟ್ಟಬಹುದು, ದೇಶದ್ರೋಹಿ ಕೈ ನಾಯಕರ ಹರಕು ಬಾಯಿ ಮುಚ್ಚಿಸಲಾಗಲ್ಲ; ಆರ್.ಅಶೋಕ

ಸಾರಾಂಶ

ಕಾಂಗ್ರೆಸ್ ನಾಯಕರ ಉಗ್ರರ ಪರ ಹೇಳಿಕೆಗಳನ್ನು ಆರ್. ಅಶೋಕ್ ಖಂಡಿಸಿದ್ದಾರೆ. ಲಕ್ಷ್ಮಣ್ ಅವರ ಸರ್ಜಿಕಲ್ ಸ್ಟ್ರೈಕ್ ಹೀಗಳಿಕೆ ಹಾಗೂ ಉಗ್ರರ ದಾಳಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡ ಘಟನೆಗಳನ್ನು ಉಲ್ಲೇಖಿಸಿ, ಅವರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹಿಸಿದ್ದಾರೆ. ಪಾಕಿಸ್ತಾನಕ್ಕಿಂತ ದೇಶದ್ರೋಹಿಗಳ ವಿರುದ್ಧ ಹೋರಾಟ ಕಠಿಣ ಎಂದಿದ್ದಾರೆ.

ಬೆಂಗಳೂರು (ಏ.25): ಉಗ್ರರಿಗೆ ನೆಲೆ ಕೊಡುತ್ತಿರುವ ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಬಹುದು. ಆದರೆ, ದೇಶದ್ರೋಹಿ ಕಾಂಗ್ರೆಸ್ ನಾಯಕರ ಹರಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, 'ನಾಲ್ಕು ಮರಕ್ಕೆ ಗುಂಡು ಹಾರಿಸಿ, ಸರ್ಜಿಕಲ್ ಸ್ಟ್ರೈಕ್ ಅಂತಾ ಬಿಜೆಬಿ ಬಿಂಬಿಸಿತ್ತು ಎಂಬ ಹೇಳಿಕೆಗೆ ತಿರುಗೇಟು ನೀಡುವ ಪೋಸ್ಟ್ ಅನ್ನು ಬರೆದುಕೊಂಡಿದ್ದಾರೆ. 

ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
'ಪಾಪಿ ಪಾಕಿಸ್ತಾನದ ಹೆಡೆಮುರಿ ಕಟ್ಟಬಹುದು ಆದರೆ, ದೇಶದ್ರೋಹಿ ಕಾಂಗ್ರೆಸ್ ನಾಯಕರ ಹರಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಐಡಿ ಕಾರ್ಡ್ ನೋಡಿ, ಧರ್ಮದ ಹೆಸರು ಕೇಳಿ, ಕಲ್ಮಾ ಹೇಳಿಸಿ, ಪ್ಯಾಂಟು ಬಿಚ್ಚಿ ಪರೀಕ್ಷಿಸಿ ಮತಾಂಧ ಉಗ್ರರು ತಮ್ಮ ಕಣ್ಣೆದುರಿಗೇ ಪಾಯಿಂಟ್ ಬ್ಲ್ಯಾಂಕ್ ನಲ್ಲಿ ತಲೆಗೆ ಗುಂಡಿಕ್ಕಿ ತಮ್ಮ ಪತಿಯನ್ನು, ತಂದೆಯನ್ನು ಕೊಂದ ಕಣ್ಣೀರಿನ ಕಥೆ ಹೇಳುತ್ತಿರುವ ಸಂತ್ರಸ್ತ ಮಹಿಳೆಯರು, ಮಕ್ಕಳ ಆಕ್ರಂದನ ನಿಮಗೆ ಕೇಳುತ್ತಿಲ್ಲವೇ ಎಂ.ಲಕ್ಷಣ್ ಅವರೇ? 

ಇಡೀ ದೇಶವೇ ಕಣ್ಣೀರಿಡುತ್ತಿರುವ ಇಂತಹ ಸಂದರ್ಭದಲ್ಲೂ ನಿಮ್ಮ ಓಲೈಕೆ ರಾಜಕಾರಣ ಮುಂದುವರೆಸುತ್ತಿದ್ದೀರಲ್ಲ ನಿಮ್ಮ ನಾಚಿಕೆಗೇಡುತನಕ್ಕೆ ಏನು ಹೇಳೋಣ. ಗಡಿಯಲ್ಲಿ ಸೇನಾಪಡೆಗಳು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಪ್ರತೀಕಾರಕ್ಕಾಗಿ ಸಜ್ಜಾಗುತ್ತಿದ್ದರೆ ಇಲ್ಲಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವ್ಯಂಗ್ಯ ಮಡುತ್ತಿದ್ದೀರಲ್ಲ ನಿಮ್ಮ ಭಂಡ ಬಾಳಿಗೆ ಏನು ಹೇಳೋಣ. ಧರ್ಮದ ಹೆಸರು ಕೇಳಿ ಕೊಲ್ಲುವ ಉಗ್ರರಿಗೂ, ಸೇನಾಪಡೆಗಳ ಕಾರ್ಯಾಚರಣೆಗೆ ಸಾಕ್ಷಿ ಕೇಳುವ ನಿಮಗೂ ಯಾವುದೇ ವ್ಯತ್ಯಾಸವಿಲ್ಲ.

ಇದನ್ನೂ ಓದಿ: ಪಹಲ್ಗಾಮ್‌ ಬಗ್ಗೆ 'ಮಾನವೀಯತೆಯೇ ಮೊದಲ ಧರ್ಮ' ಎಂದ ಪ್ರಿಯಾಂಕ್‌ ಖರ್ಗೆ, ನಿಮಗಿಂತ ಓವೈಸಿಯೇ ಬೆಸ್ಟ್‌!

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವುಮಾರ್ ಅವರೇ, ನಿಮ್ಮ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತಾದರೂ ದೇಶಭಕ್ತಿ ಇದ್ದರೆ, ಎಳ್ಳಷ್ಟಾದರೂ ರಾಷ್ಟ್ರಪ್ರೇಮ ಇದ್ದರೆ ಈ ಕೊಡಲೇ ಲಕ್ಷಣ್ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿ' ಎಂದು ಸವಾಲು ಹಾಕಿದ್ದಾರೆ.

ಘಟನೆಯ ಹಿನ್ನೆಲೆಯೇನು?
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಹಿಂದೂ ಪ್ರವಾಸಿಗರ ಮೇಲಿನ ಉಗ್ರರ ಗುಂಡಿನ ದಾಳಿಯಿಂದ 26 ಜನರು ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲಿಯೇ ಇಡೀ ದೇಶದ ಜನರೇ ಉಗ್ರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸ್ಥಳದಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆಯರು, ಅಪ್ಪನನ್ನು ಕಳೆದುಕೊಂಡ ಮಕ್ಕಳು ನೀವು ಯಾವ ಧರ್ಮದವರು ಎಂದು ಕೇಳಿ, ಅವರ ಬಟ್ಟೆಯನ್ನು ಬಿಚ್ಚಿ ಧರ್ಮವನ್ನು ಗುರುತಿಸಿಕೊಂಡು ಬಂದೂಕಿನಿಂದ ಶೂಟ್ ಮಾಡಿ ಭೀಕರವಾಗಿ ಸಾಯಿಸಿದ್ದಾರೆ. ಆದರೆ, ನಾಲ್ವರು ಉಗ್ರರ ಪೈಕಿ ಒಬ್ಬ ಉಗ್ರನ ಗುಂಡಿನ ದಾಳಿಯ ಸ್ಥಳದಲ್ಲಿದ್ದ ಮಹಿಳೆ ಧರ್ಮವನ್ನು ಕೇಳಿಲ್ಲ, ಕೈಗೆ ಸಿಕ್ಕಿದವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆರ್ಟಿಕಲ್ 370 ರದ್ದತಿ-ಪಹಲ್ಗಾಮ್ ಉಗ್ರರ ದಾಳಿ ಕುರಿತ ಹೇಳಿಕೆ: ಬೇಷರತ್ ಕ್ಷಮೆಯಾಚಿಸಿದ ಕಾಂಗ್ರೆಸ್ ಶಾಸಕ!

ಜೊತೆಗೆ, ಬೆಂಗಳೂರಿನ ಭರತ್ ಭೂಷಣ್ ಅವರಿಗೂ ಧರ್ಮ ಯಾವುದೆಂದು ಕೇಳದೇ ಶೂಟ್ ಮಾಡಿದ್ದಾಗಿ ತಿಳಿಸಿದ್ದಾರೆ. ಇವರ ಮಾತನ್ನು ಆಧಾರವಾಗಿ ಇಟ್ಟುಕೊಂಡು ಕಾಂಗ್ರೆಸ್ ನಾಯಕರು (ಸಚಿವ ಪ್ರಿಯಾಂಕ್ ಖರ್ಗೆ, ಮಾಗಡಿ ಶಾಸಕ ಬಾಲಕೃಷ್ಣ ಹಾಗೂ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್) ಯಾರ ಧರ್ಮವನ್ನೂ ಕೇಳಿಲ್ಲ. ಉಗ್ರರ ದಾಳಿಯಲ್ಲಿ ಹಿಂದೂ-ಮುಸ್ಲಿಂ ಧರ್ಮ ದ್ವೇಷ ಹರಡಬೇಡಿ ಎನ್ನುತ್ತಿದ್ದಾರೆ. (ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಯಾವ ಧರ್ಮದವರು ಎಂದು ಕೇಳಿ ಗುಂಡು ಹಾರಿಸಿದ್ದಾರೆ ಎಂದು ಮತ್ತೊಬ್ಬ ಉಗ್ರನ ಬಗ್ಗೆ ಹೇಳಿದ್ದಾರೆ. ಇನ್ನು ಗುಜರಾತ್ ಬಾಲಕನೊಬ್ಬ ನನ್ನಪ್ಪನಿಗೆ ಕುರಾನ್ ಹೇಳುವಂತೆ ಕೇಳಿ ಹೇಳದಿದ್ದಾಗ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾನೆ.) ಆದರೆ, ಕಾಂಗ್ರೆಸ್ ನಾಯಕರು ಒಂದಿಬ್ಬರ ಮಾತನ್ನು ಆಧಾರವಾಗಿ ಇಟ್ಟುಕೊಂಡು ಉಗ್ರರ ಧರ್ಮದ ಪರವಾಗಿ ಮಾತನಾಡುವುದು ಎಷ್ಟು ಸರಿ ಎಂಬ ಆಕ್ರೋಶ ದೇಶದ ಜನತೆಯಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಎಂ. ಲಕ್ಷ್ಮಣ್ ಈ ಹಿಂದೆ ಭಾರತದಿಂದ ಮಾಡಲಾಗಿದ್ದ ಸರ್ಜಿಕಲ್ ಸ್ಟ್ರೈಕ್ ಸುಳ್ಳು. ಒಂದು ಮರಕ್ಕೆ 4 ಗುಂಡು ಹಾರಿಸಿ ಅದನ್ನು ಸರ್ಜಿಕಲ್ ಸ್ಟ್ರೈಕ್ ಎಂದು ಬಿಜೆಪಿ  ಬಿಂಬಿಸಿಕೊಂಡಿದೆ ಎಂದು ಕೇಂದ್ರ ಸರ್ಕಾರದ ಸೈನಿಕ ದಾಳಿಯನ್ನು ಹೀಗಳೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!