ಕೆಪಿಸಿಸಿ ಕಚೇರಿಯಲ್ಲಿ ಡಿಶುಂ-ಡಿಶುಂ: ಬೀದಿಗೆ ಬಿತ್ತು ಕಾಂಗ್ರೆಸ್ ನಾಯಕರ ಮಾರಾಮಾರಿ

Published : Jan 22, 2021, 03:52 PM ISTUpdated : Jan 22, 2021, 04:00 PM IST
ಕೆಪಿಸಿಸಿ ಕಚೇರಿಯಲ್ಲಿ ಡಿಶುಂ-ಡಿಶುಂ: ಬೀದಿಗೆ ಬಿತ್ತು ಕಾಂಗ್ರೆಸ್ ನಾಯಕರ ಮಾರಾಮಾರಿ

ಸಾರಾಂಶ

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಡಿಶುಂ ಡಿಶುಂ ಆಗಿದ್ದು, ಉಭಯ ನಾಯಕರು ಕೈ ಕೈ ಮೀಲಾಯಿಸಿರುವ ಘಟನೆ ಇದೀಗ ಬಹಿರಂಗವಾಗಿದೆ.

ಬೆಂಗಳೂರು, (ಜ.22): ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಎಂಎಲ್​ಸಿ ನಾರಾಯಣಸ್ವಾಮಿ ಮತ್ತು ಕಾಂಗ್ರೆಸ್ ಯುವ ನಾಯಕ ಮನೋಹರ್ ನಡುವೆ ಗಲಾಟೆ ನಡೆದಿದ್ದು, ಉಭಯ ನಾಯಕರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.

ಕಾಂಗ್ರೆಸ್ ಎಂಎಲ್ಸಿ ನಾರಾಯಣಸ್ವಾಮಿ ಹಾಗೂ  ರಾಜಾಜಿನಗರ ಕಾಂಗ್ರೆಸ್ ಯುವ ನಾಯಕ ಮೋನಹರ್ ನಡುವೆ ಇಂದು (ಶುಕ್ರವಾರ) ಮಧ್ಯಾಹ್ನ ಡಿಶುಂ ಡಿಶುಂ ಆಗಿದೆ. ಕಾರ್ಯಾಧ್ಯಕ್ಷರುಗಳ ಸಮ್ಮುಖದಲ್ಲಿಯೇ ಈ ಗಲಾಟೆ ನಡೆದಿದೆ.

20 ನಿಮಿಷ ಕಾಲ ಮೇಲ್ಮನೆ ‘ರಣಾಂಗಣ’: ಕಂಡು ಕೇಳರಿಯದ ರೀತಿ ಸದಸ್ಯರ ತಳ್ಳಾಟ!
 
 ಹೊಡೆದಾಟದ ಬಳಿಕ ಕೆಪಿಸಿಸಿ ಸಿಬ್ಬಂದಿಗಳು ಇಬ್ಬರನ್ನೂ ಪ್ರತ್ಯೇಕ ರೂಮಿನಲ್ಲಿ ಕೂರಿಸಿ ಸಮಧಾನಪಡಿಸಿದ್ದಾರೆ. ಕೆಲ ಸಮಯದ ಬಳಿಕ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು ಕೆಪಿಸಿಸಿ ಕಚೇರಿಯಿಂದ ಹೊರನಡೆದರು.

ಘಟನೆ ಬಗ್ಗೆ ಕಾರ್ಯಾಧ್ಯಕ್ಷ ಪ್ರತಿಕ್ರಿಯೆ
ಇನ್ನು ಈ ಘಟನೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಯಾವುದೇ ಗಲಾಟೆ ನಡೆದಿಲ್ಲ. ಬೆಳಗ್ಗೆ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಅವರು ನಮ್ಮ ಸದಸ್ಯರನ್ನ ಸೆಳೆಯುವ ಕೆಲಸ ಮಾಡಿದ್ದರು. ಆ ವಿಚಾರವಾಗಿ ಜೋರುಜೋರು ಮಾತು ನಡೆಯಿತು. ಆದ್ರೆ, ಯಾರೂ ಯಾರ ಮೇಲೂ ಹಲ್ಲೆ ಮಾಡಿಲ್ಲ. ನಾವು ಬಾಗಿಲು ಹಾಕಿ ಪಕ್ಷದ ವಿಚಾರ ಚರ್ಚೆ ಮಾಡಿದ್ದೇವೆ. ಚರ್ಚೆಯನ್ನ ಹೊರತುಪಡಿಸಿ ಬೇರೆ ಏನು ಆಗಿಲ್ಲ ಎನ್ನುವ ಮೂಲಕ ಯಾವುದೇ ಗಲಾಟೆ ನಡೆದಿಲ್ಲ ಎನ್ನುವ ರೀತಿಯಲ್ಲಿ ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?
ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!