ರಾಜ್ಯ ಸಚಿವ ಸಂಪುಟದಲ್ಲಿ ಹಂಚಿಕೆಯಾದ ಕೆಲವು ಖಾತೆಗಳನ್ನ ಮರುಹಂಚಿಕೆ ಮಾಡಿ ಗುರುವಾರ ಸರ್ಕಾರ ಆದೇಶ ಹೊರಡಿಸಿತ್ತು. ಆದ್ರೆ, ಹಂಚಿಕೆಯಾದ ಖಾತೆಯಲ್ಲಿ ಮರು ಹಂಚಿಕೆ ಮಾಡಲಾಗಿದ್ದು, ಕೆಲ ಸಚಿವರ ಖಾತೆಗಳು ಹೀಗಿವೆ
ಬೆಂಗಳೂರು, (ಜ.22): ಮತ್ತೆ ಕೆಲ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ರಾಜ್ಯ ಸಚಿವ ಸಂಪುಟದಲ್ಲಿ ಹಂಚಿಕೆಯಾದ ಕೆಲವು ಖಾತೆಗಳನ್ನ ಮರುಹಂಚಿಕೆ ಮಾಡಲಾಗಿತ್ತು. ಇದ್ದದ್ದನ್ನ ಕಸಿದುಕೊಂಡು, ಬದಲಿ ಖಾತೆ ಕೊಟ್ಟಿದ್ದಕ್ಕೆ ಕೆಲ ಸಚಿವರುಗಳು ಅಸಾಧಾನಗೊಂಡಿದ್ದರು.
undefined
ಅಲ್ಲದೇ ಖಾತೆ ಹಂಚಿಕೆ ಮಾಡಿದ ಬಳಿಕ ನಡೆದ ಸಚಿವ ಸಂಪುಟ ಸಭೆಗೆ ಹಲವರು ಬರಲೇ ಇಲ್ಲ. ಇದು ಸಚಿವ ಸಂಪುಟ ಸದಸ್ಯರಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಸಾಬೀತಾಯ್ತು.
ಈ ಖಾತೆ ನಾನೇನು ಮಾಡಲಿ? ಬೇಡವೇ ಬೇಡ ಎಂದ ಸಚಿವ
ಅದರಲ್ಲೂ ಮಾಧುಸ್ವಾಮಿ, ಸುಧಾಕರ್, ಎಂಟಿಬಿ ನಾಗರಾಜ್, ಗೋಪಾಲಯ್ಯ, ನಾರಾಯಣಗೌಡ ಅವರು ತಮ್ಮ ಖಾತೆ ಬಗ್ಗೆ ಕ್ಯಾತೆ ತೆಗೆದಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಇಂದು (ಶುಕ್ರವಾರ) ಖಾತೆ ಬದಲಾವಣೆ ಮಾಡಿದ್ದಾರೆ. ಈ ಮೂಲಕ ಅಸಮಾಧಾನಿತ ಸಚಿವರುಗಳನ್ನು ಸಮಧಾನಪಡಿಸಲು ಮುಂದಾಗಿದ್ದಾರೆ. ಗುರುವಾರ ಹಂಚಿಕೆಯಾದ ಖಾತೆಯಲ್ಲಿ ಮರು ಹಂಚಿಕೆ ಮಾಡಿದ ಕೆಲ ಸಚಿವರ ಖಾತೆಗಳು ಹೀಗಿವೆ...
* ಕೆ.ಗೋಪಾಲಯ್ಯ- ಅಬಕಾರಿ.
* ಎಂಟಿಬಿ ನಾಗರಾಜ್- ಪೌರಾಡಳಿತ, ಸಕ್ಕರೆ.
* ಆರ್.ಶಂಕರ್- ತೋಟಗಾರಿಕೆ
* ಡಾ.ಕೆ.ಸಿ.ನಾರಾಯಣಗೌಡ - ಈಗಿರುವ ಕ್ರೀಡೆ, ಯುಜನ ಜೊತೆಗೆ ಹೆಚ್ಚುವರಿಯಾಗಿ ಯೋಜನೆ ಸಾಂಖಿಕ ಅಂಕಿ ಅಂಶ.
* ಮಾಧುಸ್ವಾಮಿ- ವೈದ್ಯಕೀಯ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬದಲಿಗೆ ವಕ್ಫ್ ಹಾಗೂ ಹಜ್
* ಅರವಿಂದ್ ಲಿಂಬಾವಳಿ - ಅರಣ್ಯ, ಕನ್ನಡ ಮತ್ತು ಸಂಸ್ಕೃತಿ
ಎಂಬಿಟಿ ನಾಗರಾಜ್ ಅವರಿಗೆ ಮೊದಲ ಅಬಕಾರಿ ಖಾತೆ ನೀಡಲಾಗಿತ್ತು. ಇದೀಗ ಅವರಿಗೆ ಪೌರಾಡಳಿ ಮತ್ತು ಸಕ್ಕರೆ ಖಾತೆ ನೀಡಲಾಗಿದೆ. ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಜೊತಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಲಾಗಿತ್ತು. ಆದ್ರೆ, ಇದಕ್ಕೆ ಅವರು ಅಸಮಧಾನ ವ್ಯಕ್ತಪಡಿಸಿದ್ರಿಂದ ವೈದ್ಯಕೀಯ ಜೊತೆಗೆ ವಕ್ಫ್ ಹಾಗೂ ಹಜ್ ಖಾತೆ ನೀಡಲಾಗಿದೆ.
ಇನ್ನು ಯುವಜನ ಮತ್ತು ಕ್ರೀಡೆ ಕೊಟ್ಟಿರುವುದಕ್ಕೆ ಬೇಸರಗೊಂಡಿದ್ದ ನಾರಾಯಣಗೌಡ ಅವರಿಗೆ ಹೆಚ್ಚುವರಿಯಾಗಿ ಸಾಂಖಿಕ ಅಂಕಿ ಅಂಶ ಖಾತೆ ಕೊಡಲಾಗಿದೆ.