ಸಿಎಂ ವಿರುದ್ಧ ಪಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿದೆ. ಇದರ ನಡುವೆ ಸಿಎಂ ಕುರ್ಚಿಯ ಆಕಾಂಕ್ಷಿಕಗಳು ಕೂಡ ಈ ಅವಕಾಶವನ್ನು ಬಳಸಿಕೊಂಡಿದ್ದಾರೆ. ಇಂಥ ಸ್ಥಿತಿ ಸೃಷ್ಟಿ ಆಗಬಾರದು ಎನ್ನುವ ನಿಟ್ಟಿನಲ್ಲಿ ಅಲರ್ಟ್ ಆಗಿದೆ.
ಬೆಂಗಳೂರು (ಆ.21): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಈ ಅವಕಾಶ ಬಳಸಿಕೊಂಡು ಸಿಎಂ ಕುರ್ಚಿ ಮೇಲೆ ಆಕಾಂಕ್ಷಿಗಳು ಕಣ್ಣು ನೆಟ್ಟಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಸಿಎಂ ಕುರ್ಚಿಗಾಗಿ ಮತ್ತೊಂದು ಗುಂಪು ಕಾದಿದೆಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇಂತಹ ರಾಜಕೀಯ ಸನ್ನಿವೇಶ ಸೃಷ್ಟಿ ಆಗಬಾರದು ಎಂದು ಅಲರ್ಟ್ ಇಡಲಾಗಿದೆ. ಅಲರ್ಟ್ ಆಗಿ ಸಿಎಂ ಪರವಾಗಿ ಬ್ಯಾಟಿಂಗ್ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರಿಂದ ಹೈಕಮಾಂಡ್ ಮುಂದೆ ವಿಚಾರ ತಿಳಿಸಲು ಪ್ರಸ್ತಾಪಿಸಲಾಗಿದೆ. ಪ್ರಾಸಿಕ್ಯೂಷನ್ ವಿಚಾರ ಸದ್ಯ ಕೋರ್ಟ್ ಅಂಗಳದಲ್ಲಿದೆ. ಒಂದು ವೇಳೆ ಕೋರ್ಟ್‌ನಲ್ಲಿ ಹಿನ್ನಡೆಯಾದರೆ ಕೇಸ್ ದಾಖಲಾಗಲಿದೆ. ಈ ಸನ್ನಿವೇಶ ಬಳಸಿಕೊಂಡು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರು ಕಸರತ್ತು ಶುರು ಮಾಡುವ ಲೆಕ್ಕಾಚಾರವಿದೆ. ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ಸಿಎಂ ಪರವಾಗಿ ಅಖಾಡಕ್ಕಿಳಿಯಲು ತಯಾರಿ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್ ಬಲವಾಗಿ ನಿಲ್ಲಬೇಕು ಎಂಬ ಒತ್ತಾಯ ಕೂಡ ಕೇಳಿ ಬಂದಿದೆ. ಈಗಾಗಲೇ ಸಚಿವ ಜಾರಕಿಹೊಳಿ ಇದರ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇನ್ನು ಸಿಎಂ ಅವರ ಆಪ್ತ ಸಚಿವರ ಆಗ್ರಹದ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಸಿಎಂ ಬೆನ್ನಿಗೆ ಬಲವಾಗಿ ನಿಲ್ಲಬೇಕು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ನೇರವಾಗಿ ಸಿಎಂ ಟಾರ್ಗೆಟ್ ಮಾಡಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲದೆ ಇದ್ದರೂ ರಾಜೀನಾಮೆ ಕೇಳುತ್ತಿದ್ದಾರೆ. ರಾಜಕೀಯ ಕ್ಷಿಪ್ರ ಬೆಳವಣಿಗೆ ನಡೆದರೆ ಹೈಕಮಾಂಡ್ ಸ್ಟ್ರಾಂಗ್ ಆಗಿ ಸಿಎಂ ಪರವಾಗಿ ನಿಲ್ಲಬೇಕು. ಯಾಕೆಂದರೆ ಕರ್ನಾಟಕದಲ್ಲಿ ಪಕ್ಷದ ಭವಿಷ್ಯದ ದೃಷ್ಟಿಯಿಂದ ಸಿದ್ದರಾಮಯ್ಯ ಅನಿವಾರ್ಯ. ಸಿಎಂ ಬೆನ್ನಿಗೆ ನಿಲ್ಲಲಿಲ್ಲ ಎಂದರೆ ಕರ್ನಾಟಕ ಸರ್ಕಾರ ಪತನಗೊಳಿಸುವ ಯತ್ನ ಚುರುಕುಗೊಳ್ಳಲಿವೆ. ಕರ್ನಾಟಕ ಸರ್ಕಾರ ಪತನಗೊಂಡರೆ, ಮುಂದೆ ತೆಲಂಗಾಣ ಸರ್ಕಾರವನ್ನ ಟಾರ್ಗೆಟ್ ಮಾಡುತ್ತಾರೆ. ಹೀಗಾಗಿ ಕೋರ್ಟ್ ಪ್ರಾಸಿಕ್ಯೂಷನ್ ವಿಚಾರ ಕ್ಲಿಯರ್ ಆಗಿ, ಕೇಸ್ ದಾಖಲು ಆದರೂ ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಮುಂದುವರೆಸಬೇಕು ಎನ್ನುವ ಆಗ್ರಹಗಳಿವೆ.
Muda Scam: ವೈಟ್ನರ್ ಹಾಕಿ ದಾಖಲೆ ತಿರುಚಿದ ಮುಡಾ ಅಧಿಕಾರಿಗಳು?
ಹಾಗೇನಾದರೂ ಕೇಸ್ ದಾಖಲಿಸಿ ತನಿಖೆ ಶುರು ಮಾಡಿದರೂ, ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಬೇಕು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಈ ವಿಚಾರದಲ್ಲಿ ಬಿಜೆಪಿ ಟಾರ್ಗೆಟ್ ಮಾಡಬಹುದು. ಕರ್ನಾಟಕದಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಬಹುದು ಅಂತಹ ಸನ್ನಿವೇಶ ಎದುರಾದರೆ ಕೇಂದ್ರ ಸಚಿವರ ವಿರುದ್ಧ ದಾಖಲು ಆಗಿರುವ ಕೇಸ್ ಗಳ ವಿವರ ಉಲ್ಲೇಖಿಸಿ ತಿರುಗೇಟು ಕೊಡಲು ಸಿದ್ಧತೆ ಮಾಡಿಕೊಳ್ಳಬೇಕು. ಹಾಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ ವಿರುದ್ಧ ಕೇಸ್ ದಾಖಲಾಗಿವೆ. ಕೇಸ್ ದಾಖಲು ಆದ ತಕ್ಷಣ ಇವರೆಲ್ಲಾ ರಾಜೀನಾಮೆ ಕೊಟ್ಟಿದ್ದಾರಾ ಎಂದು ಕೌಂಟರ್ ಕೊಡಬೇಕು ಎಂದು ಹೈಕಮಾಂಡ್ ಗೆ ಮನವರಿಕೆ ಮಾಡಲು ತಯಾರಿ ಮಾಡಿದ್ದಾರೆ.
ಬ್ಯಾಂಕ್ ಹಗರಣದ ಬಗ್ಗೆ ಸಿಬಿಐ ತನಿಖೆ, ಸಿದ್ಧರಾಮಯ್ಯ ಹೇಳಿದ ಸುಳ್ಳು ಆರ್‌ಟಿಐ ಮಾಹಿತಿಯಿಂದ ಬಯಲು!