ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲಿಯೇ, ಪ್ರಕರಣದ ಕುರಿತಾದ ಒಂದೊಂದೇ ಆರೋಪಗಳು ಹೊರಬರಲು ಶುರುವಾಗಿದೆ.
ಬೆಂಗಳೂರು (ಆ.21): ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಇದರ ಬೆನ್ನಲ್ಲಿಯೇ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಆದರೆ, ಮುಡಾದಲ್ಲಿ ಹಗರಣ ನಡೆದಿರೋದು ನಿಜ ಎನ್ನುವ ರೀತಿಯಲ್ಲಿ ಸ್ವತಃ ಅಧಿಕಾರಿಗಳೇ ವರ್ತನೆ ಮಾಡುತ್ತಿರುವುದು ಬಯಲಾಗಿದೆ. ಮುಡಾ ವಾಪಸ್ ಪಡೆದ ನಿವೇಶನ ಕ್ಕೆ ಬದಲಾಗಿ ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಸಿಎಂ ಪತ್ನಿಯೇ ಪತ್ರ ಬರೆದಿದ್ದರು ಎನ್ನಲಾಗಿತ್ತು. ಈಗ ಈ ದಾಖಲೆಗಳನ್ನೇ ತಿರುಚಿರುವ ಆರೋಪ ಬಂದಿದೆ. ಸಿಎಂ ಪತ್ನಿ ಮುಡಾಗೆ ಬರೆದ ಪತ್ರವನ್ನೇ ಅಧಿಕಾರಿಗಳು ತಿರುಚಿ ಸಾಕ್ಷ್ಯನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಪತ್ರದಲ್ಲಿ ವಿಜಯನಗರ ಬಡಾವಣೆಯಲ್ಲಿ ಬದಲಿ ನಿವೇಶನ ನೀಡುವಂತೆ ಕೋರಲಾಗಿತ್ತು. ಇದೀಗ ಹಗರಣ ಬೆಳಕಿಗೆ ಬಂದ ಬಳಿಕ ಪತ್ರದಲ್ಲಿ ಈ ವಿಚಾರವನ್ನೇ ಅಳಿಸಲಾಗಿದೆ. ವೈಟ್ನರ್ ಹಾಕಿ, ವಿಜಯನಗರದಲ್ಲಿ ಸೈಟ್ ಕೊಡಿ ಎನ್ನುವ ವಿಚಾರವನ್ನೇ ಅಳಿಸಿ ಹಾಕಲಾಗಿದೆ. ಇದರಲ್ಲಿ ವಿಜಯನಗರ ಬಡಾವಣೆಯಲ್ಲಿ ನಿವೇಶನ ನೀಡುವಂತೆ ಕೋರಲಾಗಿತ್ತು ಈ ಸಾಲಿನ ಮೇಲೆ ಅಧಿಕಾರಿಗಳು ವೈಟ್ನರ್ ಹಾಕಿ ಅಳಿಸಿದ್ದಾರೆ.
ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಸಿಎಂ ಪತ್ನಿ ಪತ್ರ ಬರೆದಿದ್ದರು. ಯಾವ ಸ್ಥಳದಲ್ಲಿ ಎಂದು ಬರೆದ ಜಾಗಕ್ಕೆ ಅಧಿಕಾರಿಗಳು ವೈಟ್‌ನರ್ ಹಾಕಿದ್ದರು. ವಿಜಯನಗರದ 2 ಮತ್ತು ಮೂರನೇ ಹಂತದಲ್ಲೇ ನಿವೇಶನ ಕೊಡುವಂತೆ ಸಿಎಂ ಪತ್ನಿ ಕೇಳಿದ್ದರಾ ಅನ್ನುವ ಅನುಮಾನ ಬಂದಿದೆ. ಸಿಎಂ ಪತ್ನಿ ಬರೆದ ಪತ್ರದ ಮೇಲೆಯೆ ಅನುಮಾನ ಶುರುವಾಗಿದ್ದು, ವಿಜನಗರದಲ್ಲಿಯೇ ಸೈಟ್ ಬೇಕು ಎಂದು ಸಿಎಂ ಪತ್ನಿಯೇ ಪಟ್ಟು ಹಿಡಿದಿದ್ದರಾ ಎನ್ನುವ ಅನುಮಾನ ಬಂದಿದೆ.
ಏನಿದು ಮುಡಾ ಹಗರಣ? ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಗಾಳಕ್ಕೆ ಸಿಕ್ಕಿಬಿದ್ದಿದ್ದು ಹೇಗೆ?
ವಿದ್ಯಾರ್ಥಿಗಳ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ ಪರ ಶೋಷಿತ ಸಮುದಾಯದ ವಿಧ್ಯಾರ್ಥಿಗಳು ಬೀದಿಗೆ ಇಳಿಯಲಿದ್ದಾರೆ. ರಾಜ್ಯಪಾಲರ ವಿರುದ್ಧ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳಿಂದ ಪಂಜಿನ ಮೆರವಣಿಗೆ ನಡೆಸಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಮೌರ್ಯ ಸರ್ಕಲ್‌ನಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ. ಬೆಂಗಳೂರು ವಿಶ್ವವಿದ್ಯಾಲಯದ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಬೆಂಗಳೂರಿಗೆ ವಿದ್ಯಾರ್ಥಿಗಳು ಬರಲಿದ್ದಾರೆ. ಪಂಜಿನ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಭಾಗಿ ಸಾಧ್ಯತೆ ಇದೆ. 500 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಬಹುದು ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಖಂಡಿಸಿ ಪ್ರತಿಭಟನೆ ನಡೆಯಲಿದೆ.
Muda Scam: ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ, ರಾಜ್ಯಪಾಲರು ಕೇಂದ್ರದ ಕೈಗೊಂಬೆ: ಸಿಎಂ ಪರ ಎಂಬಿ ಪಾಟೀಲ್ ಬ್ಯಾಟಿಂಗ್!