ಕೇಂದ್ರ ಸಚಿವೆ, ಬಿಜೆಪಿಯ ಸ್ಟಾರ್ ಪ್ರಚಾರಕಿ ಸ್ಮೃತಿ ಇರಾನಿ ಅವರನ್ನು ಅಮೇಥಿಯಲ್ಲಿ ಭಾರಿ ಮತಗಳ ಅಂತರದಿಂದ ಸೋಲಿಸಿರುವ ಕಾಂಗ್ರೆಸ್ ನಾಯಕ, ಗಾಂಧಿ ಮನೆತನಕ್ಕೆ ನಿಷ್ಠಾವಂತನಾಗಿರುವ ಕಿಶೋರಿ ಲಾಲ್ ಶರ್ಮಾ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ.
ನವದೆಹಲಿ: ಕೇಂದ್ರ ಸಚಿವೆ, ಬಿಜೆಪಿಯ ಸ್ಟಾರ್ ಪ್ರಚಾರಕಿ ಸ್ಮೃತಿ ಇರಾನಿ ಅವರನ್ನು ಅಮೇಥಿಯಲ್ಲಿ ಭಾರಿ ಮತಗಳ ಅಂತರದಿಂದ ಸೋಲಿಸಿರುವ ಕಾಂಗ್ರೆಸ್ ನಾಯಕ, ಗಾಂಧಿ ಮನೆತನಕ್ಕೆ ನಿಷ್ಠಾವಂತನಾಗಿರುವ ಕಿಶೋರಿ ಲಾಲ್ ಶರ್ಮಾ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಈ ಭಾರಿ ಅಂತರದ ಅಚ್ಚರಿಯ ಗೆಲುವಿನಿಂದ ಭಾರಿ ಖುಷಿಗೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವದ್ರಾ ಅವರು ಕಿಶೋರಿ ಲಾಲ್ ಶರ್ಮಾ ಅವರಿಗೆ ಅವರ ಭರ್ಜರಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದಲ್ಲೇ ಅತೀಹೆಚ್ಚು ಜನರ ಗಮನವನ್ನು ಸೆಳೆದ ಕ್ಷೇತ್ರ ಎಂದರೆ ಅದು ಅಮೇಥಿ. ಇಲ್ಲಿ ಚುನಾವಣಾ ಸಮೀಕ್ಷೆಗಳೆಲ್ಲವೂ ಸ್ಮತಿ ಇರಾನಿ ಅವವರ ಗೆಲುವನ್ನೇ ಸೂಚಿಸಿದ್ದವು. ಆದರೆ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ನಿರೀಕ್ಷಿಸದ ಅಂತರದಿಂದ ಇಲ್ಲಿ ಗೆದ್ದು ಬಂದು ಅಚ್ಚರಿ ಮೂಡಿಸಿದ್ದಾರೆ. ಮತ ಎಣಿಕೆಯ 7 ಗಂಟೆಗಳ ಅವಧಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಇಲ್ಲಿ ಕಿಶೋರಿ ಗೆಲುವು ಸಾಧಿಸಿದ್ದು, ಇದು ಸ್ವತಃ ಕಾಂಗ್ರೆಸ್ ನಾಯಕರಿಗೂ ಅಚ್ಚರಿ ಮೂಡಿಸಿದೆ. ಬಿಜೆಪಿಯ ಘಟಾನುಘಟಿ ನಾಯಿ ಸ್ಮೃತಿ ಇರಾನಿಗೆ ಈ ಕ್ಷೇತ್ರದಲ್ಲಿ ಕಿಶೋರಿ ಲಾಲ್ ಶರ್ಮಾ, ನೀರು ಕುಡಿಸಿರೋದ್ರಿಂದ ಈಗ ಅವರು ಕಾಂಗ್ರೆಸ್‌ನ ಸ್ಟಾರ್ ವಿನ್ನರ್ ಎನಿಸಿದ್ದಾರೆ.
ಬಿಜೆಪಿಯ ಸ್ಟಾರ್ ನಾಯಕಿ ಸ್ಮೃತಿ ಇರಾನಿಗೆ ಹೀನಾಯ ಸೋಲು; ಗೆದ್ದ ಕಾಂಗ್ರೆಸ್
ಈ ಹಿನ್ನೆಲೆಯಲ್ಲಿ ಸ್ವತಃ ಪ್ರಿಯಾಂಕಾ ಗಾಂಧಿ ವದ್ರಾ ಅವರು ಅವರೊಂದಿಗೆ ತೆಗೆಸಿಕೊಂಡಿರುವ ಹಳೆಯ ಫೋಟೋವೊಂದನ್ನು ಶೇರ್ ಮಾಡುತ್ತಾ ಕಿಶೋರಿ ಲಾಲ್ ಶರ್ಮಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ, ಕಿಶೋರಿ ಭಯ್ಯಾ, ನನಗೆ ಯಾವುದೇ ಸಂಶಯವಿರಲಿಲ್ಲ, ನನಗೆ ಆರಂಭದಿಂದಲೂ ನೀವು ಗೆದ್ದೆ ಗೆಲ್ಲುವಿರಿ ಎಂಬ ವಿಶ್ವಾಸವಿತ್ತು. ನಿಮ್ಮ ಗೆಲುವಿಗೆ ಹಾಗೂ ಅಮೇಥಿಯ ನನ್ನ ಸೋದರ ಸೋದರಿಯೆರಿಗೆ ಅಭಿನಂದನೆಗಳು ಎಂದು ಪ್ರಿಯಾಂಕಾ ವದ್ರಾ ಬರೆದುಕೊಂಡಿದ್ದಾರೆ.
ಕಳೆದ ಬಾರಿ ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ ಸ್ಮೃತಿ ಇರಾನಿ ಬಳಿಕ ಕೇಂದ್ರ ಸಚಿವೆಯಾಗಿದ್ದರು. ಆದರೆ ಚುನಾವಣೆಗೆ ಕಿಶೋರಿ ಶರ್ಮಾ ಅವರು ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಾಗ ಅವರೊಬ್ಬ ಸ್ಪರ್ಧೆ ನೀಡದ ಸಾಮಾನ್ಯ ಅಭ್ಯರ್ಥಿ ಎಂದೇ ಭಾವಿಸಲಾಗಿತ್ತು. ಇದಕ್ಕೆ ತಕ್ಕಂತೆ ಸಮೀಕ್ಷೆಗಳು ಕೂಡ ಸ್ಮೃತಿ ಇರಾನಿ ಗೆಲುವನ್ನೇ ಸಾರಿ ಹೇಳಿದ್ದವು. ಆದರೆ ಅವರ ಭಾರಿ ಅಂತರದ ಗೆಲುವು ಈಗ ಬಿಜೆಪಿಗೆ ಶಾಕ್ ನಿಡಿದೆ. ಕಿಶೋರಿ ಶರ್ಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದಾಗ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ಗಾಂಧಿ ಕುಡಿಗಳು ಹೆದರುತ್ತಿವೆ. ಅದಕ್ಕಾಗಿಯೇ ಕಿಶೋರಿ ಶರ್ಮಾ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಆದರೆ ಈಗ ಕಿಶೋರಿ ಶರ್ಮಾ ಗೆದ್ದು ಬೀಗಿದ್ದಾರೆ. ಇನ್ನು ತಮ್ಮ ಈ ಭರ್ಜರಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಕಿಶೋರಿ ಲಾಲ್ ಶರ್ಮಾ, ತಾನು ದಶಕಗಳಿಂದ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಸಂಸದರ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. ಹಾಗೂ ಆ ಪ್ರದೇಶದ ಜನರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದೇನೆ ಎಂದು ಹೇಳಿದ್ದಾರೆ.
Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?