
ಅತ್ತ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೇ ಭಾರಿ ಗುದ್ದಾಟಗಳು ನಡೆಯುತ್ತಿವೆ. ಇದರ ನಡುವೆಯೇ, ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್‌ನ ಗೀತೆ ಹಾಡಿಬಿಟ್ಟರು. ಇವರು ಹೀಗೆ ಹಾಡಿದ್ದರ ಬೆನ್ನಲ್ಲೇ, ಇನ್ನೋರ್ವ ಮುಖ್ಯಮಂತ್ರಿ ಆಕಾಂಕ್ಷಿಯೇ ಎಂದು ಬಿಂಬಿತವಾಗಿರು ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ವಿರುದ್ಧ ಸಮರವನ್ನೇ ಸಾರಿಬಿಟ್ಟಿದ್ದಾರೆ. ಪಥಸಂಚಲನ ಕುರಿತಾಗಿ ಇದಾಗಲೇ ಕೋರ್ಟ್ ಮೆಟ್ಟಿಲೂ ಏರಿ, ಕಾಂಗ್ರೆಸ್ ವಿರುದ್ಧ ಆದೇಶ ಹೊರಟಿದ್ದರೂ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹಟವನ್ನು ಬಿಟ್ಟಿಲ್ಲ.
ಇದರ ನಡುವೆಯೇ, ಅವರು ಒಂದು ಟ್ವೀಟ್ ಮಾಡಿ ಅದರಲ್ಲಿ ಎಡವಟ್ಟು ಮಾಡಿಬಿಟ್ಟಿದ್ದಾರೆ. ಇಂಥ ಸಂದರ್ಭಗಳಲ್ಲಿ ಮೈಯೆಲ್ಲಾ ಕಣ್ಣಾಗಿ ಇರಬೇಕು. ಆದರೆ ಪ್ರಿಯಾಂಕ್ ಖರ್ಗೆ ಅವರು ಏನೋ ಬರೆಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. RSS ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ, ಅದಕ್ಕೆ ಟಾಂಟ್ ಕೊಟ್ಟು ಪ್ರಿಯಾಂಕ್ ಖರ್ಗೆ (Priyank Kharge) ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ ನೂರು ವರ್ಷ, ಸ್ವಾತಂತ್ರ ಚಳವಳಿಗೆ ಅಗೌರವ ತೋರಿ 100 ವರ್ಷ ಎಂದು ಬರೆದಿದ್ದಾರೆ. ಇವೆಲ್ಲಾ ಏನೋ ಬರೆದುಬಿಟ್ಟರು. ಆದರೆ ಮುಂದೆ ಬರೆದಿದ್ದು ಮಾತ್ರ ಇನ್ನಿಲ್ಲದಂತೆ ಟ್ರೋಲ್‌ಗೆ ಒಳಗಾಗಿದೆ.
ಅಷ್ಟಕ್ಕೂ ಮೂರನೆಯ ವಾಕ್ಯ ಅವರು, ಭಾರತದ ಸಂವಿಧಾನಕ್ಕೆ ಅಗೌರವ ತೋರಿ ನೂರು ವರ್ಷ ಎಂದು ಬರೆದುಬಿಟ್ಟಿದ್ದಾರೆ. ಇದೇ ಎಡವಟ್ಟು ಆಗಿಬಿಟ್ಟಿದೆ. ಏಕೆಂದರೆ ನಮ್ಮ ಭಾರತದ ಸಂವಿಧಾನ ಜಾರಿಗೆ ಬಂದು ನೂರು ವರ್ಷ ಆಗಲೇ ಇಲ್ಲ! ಇದು ಜಾರಿಗೆ ಬಂದಿರುವುದು 26 ಜನವರಿ 1950ರಲ್ಲಿ. ಅಂದ್ರೆ ಈಗ 75 ವರ್ಷ. ಹಾಗಿದ್ರೆ ಸಂವಿಧಾನ ಬರುವ ಮೊದಲೇ RSS ಅದಕ್ಕೆ ಅವಮಾನ ಮಾಡಿಬಿಟ್ಟಿತ್ತಾ ಅಥವಾ ಸಂವಿಧಾನ ಬರುವುದು 25 ವರ್ಷ ಮೊದಲೇ ಆರ್‌ಎಸ್‌ಎಸ್‌ಗೆ ಗೊತ್ತಾಗಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.
ಮೊದಲು ತಿಳಿದುಕೊಂಡು ಮಾತನಾಡಿ ಒಟ್ಟಿನಲ್ಲಿ, ಆರ್‌ಎಸ್‌ಎಸ್ ಬ್ಯಾನ್ ಮಾಡುವ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದೇ ಟ್ವೀಟ್‌ನಲ್ಲಿ ಪ್ರಿಯಾಂಕ್ ಖಗೇ ಅವರು, ಇಡೀ ಬಿಜೆಪಿ ಪರಿಸರ ವ್ಯವಸ್ಥೆ ಎಷ್ಟೇ ಪ್ರಯತ್ನಿಸಿದರೂ, ಅವರು ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಇತಿಹಾಸವನ್ನು ಅಳಿಸಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಸಂವಿಧಾನ ಜಾರಿಗೆ ಬಂದಿರುವುದು ಯಾವಾಗ ಎಂದು ತಿಳಿದುಕೊಳ್ಳಿ ಮೊದಲು, ಆಮೇಲೆ ಮಾತನಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಸಂವಿಧಾನವನ್ನು ಕೈಯಲ್ಲಿ ಹಿಡಿದು ಓಡಾಡುವ ಕಾಂಗ್ರೆಸ್ ನಾಯಕರಿಗೆ ಅದು ಜಾರಿಗೆ ಬಂದಿರುವ ವರ್ಷವೇ ಗೊತ್ತಿಲ್ಲವೇ, ಎಂಥ ವಿಪರ್ಯಾಸ ಎಂದು ಕೆಲವರು ಹೇಳುತ್ತಿದ್ದರೆ, ಸಂವಿಧಾನದ ಪುಸ್ತಕದ ಒಂದೇ ಒಂದು ಪುಟದ ಮಾಹಿತಿಯನ್ನಾದೂ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.