ಖರ್ಗೆ ಸಾಹೇಬ್ರು ರಾಜಕೀಯ ಹುದ್ದೆಗೆ ಕಣ್ಣೀರು ಹಾಕಿದೋರಲ್ಲ: ಸಚಿವ ಪ್ರಿಯಾಂಕ್‌

Published : Jul 30, 2025, 09:59 PM IST
Priyank Kharge

ಸಾರಾಂಶ

ಖರ್ಗೆ ಸಾಹೇಬರು ಯಾವತ್ತೂ ರಾಜಕೀಯ ಹುದ್ದೆಗಾಗಿ ಹಿಂದೆ ಕಣ್ಣಿರು ಹಾಕಿಲ್ಲ, ಮುಂದೆ ಹಾಕೋದೂ ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತ್ಯುತ್ತರ ನೀಡಿದ್ದಾರೆ.

ಕಲಬುರಗಿ (ಜು.30): ಖರ್ಗೆ ಸಾಹೇಬರು ಯಾವತ್ತೂ ರಾಜಕೀಯ ಹುದ್ದೆಗಾಗಿ ಹಿಂದೆ ಕಣ್ಣಿರು ಹಾಕಿಲ್ಲ, ಮುಂದೆ ಹಾಕೋದೂ ಇಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತ್ಯುತ್ತರ ನೀಡಿದ್ದಾರೆ. ಪಕ್ಷ ಕಟ್ಟಿದವರು ತಾವಾದರೂ ಸಿಎಂ ಆದವರು ಎಸ್ಸೆಂ ಕೃಷ್ಣ ಎಂದು ಖರ್ಗೆಯವರು ಈಚೆಗೆ ನೀಡಿರುವ ಹೇಳಿಕೆಯ ಹಿಂದೆ ಅಸಹಾಯಕತೆ ಅಡಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದರು.

ಇದೇ ಹೇಳಿಕೆ ಬಗ್ಗೆ ಪ್ರಿಯಾಂಕ್‌ ಖರ್ಗೆ ಮಾತನಾಡಿದ್ದು, ವಿಜಯೇಂದ್ರ ಅವರು, ಅಪ್ಪಾಜಿಯನ್ನು ಕಣ್ಣೀರಿಳಿಸಿ ಕೆಳಗಿಳಿಸಿದ್ರಲ್ಲ ಅದರ ಬಗ್ಗೆ ಮಾತಾಡಲಿ, ವಿಜಯೇಂದ್ರ ಅವರು ಇತಿಹಾಸ ನೋಡಲಿ, ಅವರ ಅಪ್ಪಾಜಿ ಸಿಎಂ ಆದಾಗೆಲ್ಲಾ ಕಣ್ಣೀರು ಹಾಕಿದ್ರು ಎಂದು ಮಾತಲ್ಲೇ ಸಚಿವ ಖರ್ಗೆ ತಿವಿದಿದ್ದಾರೆ. ಕುಮಾರಸ್ವಾಮಿ ಅವರು ಅನ್ಯಾಯ ಮಾಡಿದ್ರು ಅಂತ ಕಣ್ಣಿರು ಹಾಕಿದ್ರು, ಈ ಬಾರಿ ಕೂಡ ಬೊಮ್ಮಾಯಿಯವರನ್ನ ಸಿಎಂ ಮಾಡಬೇಕಾದಾಗ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಣ್ಣಿರು ಹಾಕಿ ಇಳಿಸಿದ್ರಲ್ಲ, ಇದೆಲ್ಲವೂ ವಿಜಯೇಂದ್ರ ಮೊದಲು ತಿಳಿದುಕೊಂಡು ಮಾತನಾಡಲಿ ಎಂದು ಪ್ರಿಯಾಂಕ್‌ ಸಲಹೆ ನೀಡಿದರು.

ಮುಖ್ಯಮಂತ್ರಿಗಳು ಶಾಸಕರ ಸಭೆಗೆ ಡಿಸಿಎಂಗೆ ಅಹ್ವಾನ ನೀಡದೆ ಇರುವ ವಿಚಾರವಾಗಿ ಹೇಳಿಕೆ ನೀಡಿರುವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿಗಳು ಶಾಸಕರನ್ನ ಕರೆದು ಮಾತಾಡಿದ್ರು, ಡಿಸಿಎಂ ಅವರಿಗೂ ಎಲ್ಲಾ ವಿಚಾರದಲ್ಲೂ ಅಹ್ವಾನ ಇರುತ್ತೆ, ಇವರಿಗೇನು ಕೇಶವ ಕೃಪಾದಲ್ಲಿ ಮೀಟಿಂಗ್ ಮಾಡಬೇಕಾ ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದರು. ರಾಜ್ಯದಲ್ಲಿ ದಲಿತ ಸಿಎಂ ಕೂಗು ವಿಚಾರವಾಗಿಯೂ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಖರ್ಗೆ ಸಾಹೇಬರನ್ನ ಪಾರ್ಲಿಮೆಂಟ್ ಎಲೆಕ್ಷನ್ ನಡೆದಾಗ ಪಿಎಂ ಮಾಡ್ತಿರಿ, ರಾಜ್ಯದಲ್ಲಿ ಏನಾದ್ರು ಆದ್ರೆ ಮುಖ್ಯಮಂತ್ರಿ ಮಾಡ್ತಿರಿ, ಅಂತಹದ್ದು ಯಾವುದು ಇಲ್ಲಾ ಅಂತಾ ಖರ್ಗೆ ಸಾಹೇಬರೇ ಹೇಳಿದ್ದಾರೆ. ಗೊಂದಲ ಯಾಕೆ ಸೃಷ್ಟಿ ಮಾಡ್ತಿದ್ದಾರೆ ? ಎಂದು ಪ್ರಶ್ನಿಸಿದರು. ಖರ್ಗೆ ಸಾಹೇಬರು ಏನಾದ್ರು ಹೇಳಿದ್ದಾರಾ? ಅವರು ಏನ್ ಹೇಳಿದ್ದಾರೆ ಪೂರ್ತಿ ಕೇಳಿ ಎಂದು ವಿರೋಧ ಪಕ್ಷಗಳಿಗೆ ಖರ್ಗೆ ಸಲಹೆ ನೀಡಿದರು.

ಅಶೋಕ ಬಾಲೀಶ ಹೇಳಿಕೆ: ಧರ್ಮಸ್ಥಳದಲ್ಲಿ ನಿಗೂಢ ಶವಗಳ ಹೂತಿಟ್ಟಿರುವ ಸಂಬಂಧ ಎಸ್ಐಟಿ ತನಿಖೆ ಸಾಗಿದೆ. ಎಸ್‌ಐಟಿ ತಂಡಕ್ಕೆ ನಿನ್ನೆ ಹದಿಮೂರು ಸ್ಥಳ ತೋರಿಸಿ ಮಾರ್ಕ್ ಮಾಡಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿದೆ. ಯಾರೆ ಎಷ್ಟೇ ಪ್ರಭಾವಿಗಳಿದ್ರು ಕ್ರಮ ಕೈಗೊಳ್ಳುತ್ತೇವೆ ಎಂದರು. ಆರ್. ಅಶೋಕ್ ಅವರು ಹೋಮ್‌ ಮಿನಿಸ್ಟರ್ ಇದ್ದವರು ಅವರಿಗೆ ಕಾನೂನು ಗೊತ್ತಿಲ್ಲವಾ? ಆರ್. ಅಶೋಕ್ ಜವಾಬ್ಧಾರಿ ವಿರೋಧ ಪಕ್ಷದ ನಾಯಕರಾಗಿ ಮಾತಾಡಬೇಕು ಬಾಲೀಶತನದ ಹೇಳಿಕೆ ಕೊಡೋದನ್ನ ಬಿಡಬೇಕು ಎಂದು ಖರ್ಗೆ ಕುಟುಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!