ರಾಷ್ಟ್ರಪತಿ ಚುನಾವಣೆ: 10 ರಾಜ್ಯಗಳ 110 ಶಾಸಕರಿಂದ ಕ್ರಾಸ್‌ ವೋಟಿಂಗ್!

Published : Jul 22, 2022, 10:42 AM ISTUpdated : Jul 22, 2022, 10:57 AM IST
ರಾಷ್ಟ್ರಪತಿ ಚುನಾವಣೆ: 10 ರಾಜ್ಯಗಳ 110 ಶಾಸಕರಿಂದ ಕ್ರಾಸ್‌ ವೋಟಿಂಗ್!

ಸಾರಾಂಶ

ದ್ರೌಪದಿ ಮುರ್ಮು ಗೆಲುವು ನಿಶ್ಚಿತವಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಶಾಸಕರು ಅಡ್ಡ ಮತದಾನ ಮಾಡಿ ಗೆಲುವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿಗಳಿಗೂ ಜಾರ್ಖಂಡ್‌ ರಾಜ್ಯದಲ್ಲಿಯೂ ಬಂಡಾಯ ತಡೆಯಲು ಸಾಧ್ಯವಾಗಲಿಲ್ಲ.

ನವದೆಹಲಿ (ಜುಲೈ 22): ದೇಶದ ಮುಂದಿನ ರಾಷ್ಟ್ರಪತಿ ಯಾರು? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರು ಎದುರಾಳಿ ಯಶವಂತ್‌ ಸಿನ್ಹಾ ಅವರ ವಿರುದ್ಧ ಜಯ ಸಾಧಿಸುತ್ತಾರೆ ಎನ್ನುವ ಊಹಾಪೋಹಗಳು ಮೊದಲೇ ಇತ್ತು. ಆದರೆ, ಮತದಾನದ ವೇಳೆ ನಡೆದ ಅಡ್ಡ ಮತದಾನ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿತು. ಕಾಂಗ್ರೆಸ್ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳ ಶಾಸಕರು ಕೂಡ ದ್ರೌಪದಿ ಮುರ್ಮು ಪರವಾಗಿ ಮತ ಚಲಾವಣೆ ಮಾಡಿದರು. ದೇಶದ ಬಹುತೇಕ ವಿರೋಧ ಪಕ್ಷದ ಶಾಸಕರು ಮುರ್ಮು ಅವರನ್ನು ಬೆಂಬಲಿಸಿ ತೀವ್ರವಾಗಿ ಮತ ಚಲಾಯಿಸಿದರು. ಹಾಗಿದ್ದರೆ, ಯಾವ ರಾಜ್ಯಗಳಲ್ಲಿ ಹೆಚ್ಚಿನ ಕ್ರಾಸ್ ವೋಟಿಂಗ್‌ ನಡೆದಿದೆ ಎನ್ನುವುದರ ವಿವರ ಇಲ್ಲಿದೆ. ಮುರ್ಮು ಗೆಲುವು ನಿಶ್ಚಿತವಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಶಾಸಕರು ಅಡ್ಡ ಮತದಾನ ಮಾಡಿ ಗೆಲುವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಅಸ್ಸಾಂನಲ್ಲಿ ಗರಿಷ್ಠ ಅಡ್ಡ ಮತದಾನ ನಡೆದಿದೆ. 126 ಸದಸ್ಯ ಬಲದ ಈ ವಿಧಾನಸಭೆಯಲ್ಲಿ ಎನ್‌ಡಿಎ ಶಾಸಕರ ಬಲ 79 ಆಗಿದ್ದು, ಮುರ್ಮು ಬೆಂಬಲಕ್ಕೆ 104 ಮತಗಳು ಚಲಾವಣೆಯಾಗಿವೆ. ಇದಲ್ಲದೇ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಅಡ್ಡ ಮತದಾನ ನಡೆದಿದೆ.

ಯಾವ ರಾಜ್ಯಗಳಲ್ಲಿ ನಡೆದಿದೆ ಕ್ರಾಸ್‌ ವೋಟಿಂಗ್‌:  ಅಸ್ಸಾಂ ರಾಜ್ಯದಲ್ಲಿ ಗರಿಷ್ಠ 22 ಕ್ರಾಸ್‌ ವೋಟಿಂಗ್‌ ನಡೆದಿದ್ದರೆ, ಮಧ್ಯಪ್ರದೇಶದಲ್ಲಿ 19, ಮಹಾರಾಷ್ಟ್ರದಲ್ಲಿ 16, ಉತ್ತರ ಪ್ರದೇಶದಲ್ಲಿ 12, ಗುಜರಾತ್‌, ಜಾರ್ಖಂಡ್‌ನಲ್ಲಿ ತಲಾ 10, ಈಶಾನ್ಯ ರಾಜ್ಯವೊಂದರಿಂದ 6, ಛತ್ತೀಸ್‌ಗಢದಿಂದ 6, ರಾಜಸ್ಥಾನದಿಂದ 5 ಹಾಗೂ ಗೋವಾ ರಾಜ್ಯದಿಂದ 4 ಶಾಸಕರು ಕ್ರಾಸ್‌ ವೋಟಿಂಗ್‌ ಮಾಡಿದ್ದಾರೆ.

ಯಶವಂತ್‌ ಸಿನ್ಹಾ ಅವರ ದುರಂತ ಪ್ರೇಮ್‌ ಕಹಾನಿ, ಬಿಹಾರಿ ಸಿನ್ಹಾಗೆ ಬಂಗಾಳಿ ಬಾಲೆ ಹೇಳಿದ್ದಿಷ್ಟು..!

17 ಸಂಸದರಿಂದಲೂ ಅಡ್ಡ ಮತದಾನ:
ಶಾಸಕರು ಮಾತ್ರವಲ್ಲ, ಸಂಸದರು ಕೂಡ ಮುರ್ಮು ಅವರನ್ನು ಬೆಂಬಲಿಸಿ ದೊಡ್ಡ ಪ್ರಮಾಣದಲ್ಲಿ ಅಡ್ಡ ಮತದಾನ ಮಾಡಿದರು. ವಿರೋಧ ಪಕ್ಷಗಳ 17 ಸಂಸದರು ಯಶವಂತ್ ಸಿನ್ಹಾ ಬದಲಿಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಮತ ಚಲಾಯಿಸಿದರು. ಬಹುಸಂಖ್ಯೆಯ ಸಂಸದರ ಅಡ್ಡ ಮತದಾನದಿಂದಾಗಿ ಮುರ್ಮ್ ಮತ ಮೌಲ್ಯ 12000ಕ್ಕೆ ಏರಿಕೆಯಾಗಿದೆ. ಎನ್‌ಡಿಎ ಅಭ್ಯರ್ಥಿಯನ್ನು ಶಿವಸೇನೆ, ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್, ಬಿಎಸ್‌ಪಿ, ಅಕಾಲಿದಳ, ಜೆಡಿಎಸ್ ಸೇರಿದಂತೆ ಕೆಲವು ಸ್ವತಂತ್ರ ಸಂಸದರು ಬೆಂಬಲಿಸಿರುವುದು ಗಮನಾರ್ಹ. ಸಂಸತ್ತಿನ ಉಭಯ ಸದನಗಳೊಂದಿಗೆ ಈ ಎಲ್ಲಾ ಪಕ್ಷಗಳು ಮತ್ತು ಎನ್‌ಡಿಎ ಸಂಸದರ ಸಂಖ್ಯೆ 529. ಈ ಪೈಕಿ ಬಿಜೆಪಿ, ಶಿವಸೇನೆ ಮತ್ತು ಬಿಎಸ್‌ಪಿಯ ತಲಾ ಇಬ್ಬರು ಸಂಸದರು ಮತ ಚಲಾಯಿಸಲಿಲ್ಲ. ಅದರಂತೆ ಎನ್‌ಡಿಎ ಅಭ್ಯರ್ಥಿಗೆ 523 ಸಂಸದರ ಬೆಂಬಲವಿದ್ದರೆ, 540 ಸಂಸದರ ಬೆಂಬಲ ಸಿಕ್ಕಿದೆ.

340 ರೂಮ್ಸ್..2.5 KM ಉದ್ದದ ಕಾರಿಡಾರ್, ರಾಷ್ಟ್ರಪತಿ ಮನೆ ಹೀಗಿದೆ

ಮೊದಲ ಸುತ್ತಿನಲ್ಲೇ ಯಶವಂತ್ ಔಟ್: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಮೊದಲ ಸುತ್ತಿನ ಮತ ಎಣಿಕೆಯಲ್ಲಿಯೇ ರೇಸ್‌ನಿಂದ ಹೊರಬಿದ್ದಿದ್ದರು. ಮೊದಲ ಸುತ್ತಿನಲ್ಲಿ ಮುರ್ಮು ಅವರ ಮತ ಮೌಲ್ಯ 3.78 ಲಕ್ಷ. ಆದರೆ, ಸಿನ್ಹಾ 1.45 ಲಕ್ಷದಲ್ಲಿಯೇ ನಿಂತಿದ್ದರು. ನಿಂತರು. ಇದಾದ ಬಳಿಕ ಮೂರನೇ ಸುತ್ತಿನವರೆಗೂ ಗೆಲುವಿನ ಅಂತರ ಹೆಚ್ಚಾಯಿತು. ಸಿನ್ಹಾ ನಾಲ್ಕನೇ ಸುತ್ತಿನಲ್ಲಿ ಪುನರಾಗಮನ ಮಾಡಿದರಾದರೂ, ಅದಾಗಲೇ ಮುರ್ಮು ದೊಡ್ಡ ಅಂತರದ ಮುನ್ನಡೆ ಕಂಡುಕೊಂಡಿದ್ದರು. ಅಂಕಿಅಂಶಗಳ ಪ್ರಕಾರ, ಮುರ್ಮು 6,76,803 ಮತಗಳನ್ನು ಪಡೆದರೆ, ಸಿನ್ಹಾ 3,80,177 ಮತಗಳನ್ನು ಪಡೆದರು. ಈ ಮೂಲಕ ದ್ರೌಪದಿ ಮುರ್ಮು ದೇಶದ ನೂತನ ರಾಷ್ಟ್ರಪತಿಯಾಗಲಿದ್ದಾರೆ.

ಕೇರಳದಿಂದಲೂ ಕ್ರಾಸ್‌ ವೋಟಿಂಗ್‌: ಇಡೀ ವಿರೋಧ ಪಕ್ಷದ ಪಾಳಯಕ್ಕೆ ಅಚ್ಚರಿಯಾಗಿದ್ದು ಕೇರಳದಲ್ಲಿ ಆಗಿರುವ ಕ್ರಾಸ್‌ ವೋಟಿಂಗ್‌. ಕೇರಳದ ಎಲ್ಲಾ 140 ಸದಸ್ಯರ ವಿಧಾನಸಭೆಯ ಮತ ಪಡೆಯಬೇಕಿದ್ದ ಯಶವಂತ್‌ ಸಿನ್ಹಾ, 139 ಶಾಸಕರ ಮತಗಳನ್ನಷ್ಟೇ ಪಡೆದರು. ಆ ಮೂಲಕ ಒಬ್ಬ ಶಾಸಕ ಅಡ್ಡಮತದಾನ ಮಾಡಿದ್ದು ಖಚಿತವಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 4025 ಶಾಸಕರು ಮತ್ತು 771 ಸಂಸದರು ಮತ ಚಲಾಯಿಸಬೇಕಿತ್ತು. ಇದರಲ್ಲಿ 99 ರಷ್ಟು ಮತದಾನವಾಗಿದೆ. ಕೇರಳ ಸೇರಿದಂತೆ ಹನ್ನೆರಡು ರಾಜ್ಯಗಳ ಎಲ್ಲ ಶಾಸಕರೂ ಮತದಾನ ಮಾಡಿದರು. ಇನ್ನು ಕೇರಳದಲ್ಲಿ ಆಗಿರುವ ಕ್ರಾಸ್‌ ವೋಟಿಂಗ್‌, ಪಾಸಿಟಿವ್ ಎಂದು ಬಿಜೆಪಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!