Mysuru: ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆಗೆ ಸಿದ್ಧತೆ

By Sathish Kumar KH  |  First Published Dec 11, 2022, 6:24 PM IST

ಸಿದ್ಧರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದಲ್ಲಿ ಅವರ ವಿರುದ್ಧ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ ಸೂಚಿಸಿದಲ್ಲಿ ಸ್ಪರ್ಧಿಸಲು ಸಿದ್ಧವಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.


ಮೈಸೂರು (ಡಿ.11) : ಬಿಜೆಪಿಯಿಂದ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಲು ಹೋರಾಟ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದಲ್ಲಿ ಅವರ ವಿರುದ್ಧ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ ಸೂಚಿಸಿದಲ್ಲಿ ಸ್ಪರ್ಧಿಸಲು ಸಿದ್ಧವಿದ್ದೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಮೈಸೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದರು.  ಈ ವೇಳೆ ಸಿದ್ದರಾಮಯ್ಯನವರ ವಿರುದ್ಧ ವರುಣ ಕ್ಷೇತ್ರದಲ್ಲಿ‌ ಸ್ಪರ್ಧೆ ಮಾಡುತ್ತೀರಾ ಎಂದು ಪ್ರಶ್ನೆ ಕೇಳಿದಾಗ ಪಕ್ಷ ನನಗೆ ಯಾವುದೇ ಸವಾಲು ಕೊಟ್ಟರು ಅದನ್ನ ನಾನು ನಿಭಾಯಿಸುತ್ತೇನೆ. ಪಕ್ಷದ ತೀರ್ಮಾನವೇ ಅಂತಿಮವಾಗಿದೆ. ಎಲ್ಲಾ ಸವಾಲುಗಳನ್ನು ನಾನು ಎದರಿಸುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವರುಣ ಕ್ಷೇತ್ರದ ಸ್ಪರ್ಧೆಯ ಆಸೆ ವ್ಯಕ್ತಪಡಿಸಿದರು. 

Latest Videos

undefined

ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಹೋರಾಟ: ನನಗೆ ವರುಣ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆ ಮಾಡುತ್ತಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಲು ಹೋರಾಟ ಮಾಡುತ್ತಿದ್ದೇವೆ. ಹೀಗಾಗಿ ಇಲ್ಲಿಯ ಸಂಘಟನೆ ಹೆಚ್ಚು ಮಾಡಿದ್ದೇವೆ. ಮೋದಿ ಎಂಬುದು ಬರಿ ಅಲೇ ಅಲ್ಲ, ಅದೊಂದು ಸುನಾಮಿ. ಕಾಂಗ್ರೆಸ್ ನವರಿಗೆ ಇದು ಇನ್ನು ಅರ್ಥವಾಗಿಲ್ಲ. ಕಾಂಗ್ರೆಸ್ ಭ್ರಮೆಯಲ್ಲಿದೆ. ಭ್ರಮೆಯಲ್ಲಿರುವ ಕಾರಣ ಗುಜರಾತ್ ಫಲಿತಾಂಶದ ಪರಿಣಾಮ ಕರ್ನಾಟಕದಲ್ಲಿ ಆಗಲ್ಲ ಎಂದು ಹೇಳುತ್ತಿದೆ. ಚುನಾವಣೆ ನಂತರ ಕಾಂಗ್ರೆಸ್ ಗೆ ಉತ್ತರ‌ ಸಿಗಲಿದೆ ಎಂದು ಹೇಳಿದರು.

ಯಡಿಯೂರಪ್ಪರಂತೆ ಅಭಿವೃದ್ಧಿ ರಥ ಮುನ್ನಡೆಸಲು ಬದ್ಧ; ವಿಜಯೇಂದ್ರ

ಹಳೆ ಮೈಸೂರೆಂದರೆ ಪಂಚಪ್ರಾಣ: ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳೇ ಮೈಸೂರು ಅಂದರೆ ನನಗೆ ಪಂಚ ಪ್ರಾಣ. ನಾನು ರಾಜಕಾರಣಕ್ಕೆ ಬರುತ್ತೇನೆ ಎಂದು ನಾನು ಯಾವುತ್ತು ಅಂದು ಕೊಂಡರಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ವರುಣ ಕ್ಷೇತ್ರದಿಂದ ಇಡೀ ರಾಜ್ಯಕ್ಕೆ ವಿಜಯೇಂದ್ರ ಪರಿಚಯ ಮಾಡಿಕೊಟ್ಟಿದ್ದೀರಿ. ಇದನ್ನ ನಾನು ಎಂದಿಗೂ ಮರೆಯುವುದಿಲ್ಲ. ಯಡಿಯೂರಪ್ಪನವರು ಸದ್ಯ ಯಾವ ಅಧಿಕಾರದಲ್ಲೂ ಇಲ್ಲ. ಆದರೂ ಯಡಿಯೂರಪ್ಪನವರಿಗೆ ಶಾಶ್ವತವಾದ ಪ್ರೀತಿ ಕೊಟ್ಟಿದ್ದೀರ. ಮುಂದಿನ ದಿನಗಳಲ್ಲಿ ಎಲ್ಲಾ ಸಮಾಜವನ್ನ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮೋದಿ ಅವರೂ ಸುತ್ತೂರು ಮಠದ ಭಕ್ತರು: ಪ್ರಧಾನಮಂತ್ರಿಗಳು ಸಹ ಸುತ್ತೂರು ಮಠದ ಪರಮ‌ ಭಕ್ತರು. ನಮ್ಮ ಯುವಕರಿಗೆ ಜವಾಬ್ದಾರಿ ಹೆಚ್ಚಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿನಲ್ಲಿ ಸಮಾಜಕ್ಕೆ ನಿವೇಶನದ ಬೇಡಿಕೆ ಇತ್ತು. ನಾನು ಹಠ ಮಾಡಿ ನಿವೇಶನ ಕೊಡಿಸಿದೆ. ನಮ್ಮ ಸಮಾಜ ಮತ್ತು ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ನಮ್ಮಲ್ಲಿ ಒಗಟ್ಟಿನ ಕೊರತೆ ಇದೆ. ಮಾಧ್ಯಮದವರು ಇದ್ದಾರೆ ಆದರೂ ನಾನು ಹಿಂಜರೆಯುವುದಿಲ್ಲ. ನಮ್ಮ ಯುವಕರು ಹೆಚ್ಚು ಸಂಘಟನೆ ಆಗಬೇಕು. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಏನೇ ವ್ಯತ್ಯಸವಿದ್ದರೂ ನಿವೇಶನದಲ್ಲಿ ಆಧುನಿಕ ಮಂಟಪವನ್ನ ಸ್ಥಾಪನೆ ಮಾಡಿ ಎಂದು ಹೇಳಿದರು.

ವಿಜಯೇಂದ್ರನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ: ಬಿ.ಎಸ್‌.ಯಡಿಯೂರಪ್ಪ

ರೈತರ ಧ್ವನಿಯಾಗಿದ್ದ ಯಡಿಯೂರಪ್ಪ: ರಾಜ್ಯದಲ್ಲಿ ಯಡಿಯೂರಪ್ಪನವರು ಬಡವರ, ಹಿಂದುಳಿದ ಹಾಗೂ ರೈತರಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ. ಸಿಎಂ ಆಗುವ ಗುರಿಯನ್ನಟ್ಟುಕೊಂಡು ಕೆಲಸ ಮಾಡಲಿಲ್ಲ. ರೈತರ ಕಣ್ಣೀರು ಒರೆಸುವ ದೃಷ್ಟಿಯಿಂದ‌ ಹೋರಾಟ ಮಾಡಿದರು. ಸೈನಿಕರು ಹಾಗೂ ರೈತರು ಎರೆಡು ಕಣ್ಣುಗಳಿದಂತೆ ಎಂದು ತಿಳಿದು ಬಜೆಟ್ ಮಂಡಿಸಿದ್ದರು. ಈ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಯುವಕರ ಭಾಗವಹಿಸಬೇಕಾಗಿತ್ತು. ಇನ್ನು ಯಡಿಯೂರಪ್ಪನವರ ಮಗ ಅನ್ನುವ ಕಾರಣಕ್ಕೆ ನನನ್ನ ಪ್ರೀತಿಯಿಂದ ಕಾಣುತ್ತಾರೆ. ನನಗೆ ಯಾವುದೇ ಸ್ಥಾನ ಮಾನ ಇಲ್ಲ. ಆದರೂ ಇಡೀ ರಾಜ್ಯದಲ್ಲಿ ಗೌರವವನ್ನ ಕೊಟ್ಟು ಕಾಣುತ್ತಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ದಕ್ಕೆಯಾಗದಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

click me!