ಚುನಾವಣಾ ಸೋಲಿಗೆ ಸರ್ಜರಿ, ದೆಹಲಿ ಬೆಜಿಪಿ ರಾಜ್ಯಾಧ್ಯಕ್ಷ ರಾಜೀನಾಮೆ, ವೀರೇಂದ್ರ ಸಚ್‌ದೇವ್‌ಗೆ ಸಾರಥ್ಯ!

By Suvarna NewsFirst Published Dec 11, 2022, 3:57 PM IST
Highlights

ಗುಜರಾತ್ ಹೊರತುಪಡಿಸಿದರೆ ಇನ್ನುಳಿದ ಚುನಾವಣಾ ಫಲಿತಾಂಶಗಳು ಬಿಜೆಪಿ ಪೂರಕವಾಗಿಲ್ಲ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆ ಆರಂಭಗೊಂಡಿದೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸೋಲಿನ ಬೆನ್ನಲ್ಲೇ ಇದೀಗ ದೆಹಲಿ ಬಿಜೆಪಿಯಲ್ಲಿ ಸರ್ಜರಿ ಆರಂಭಗೊಂಡಿದೆ.

ನವದೆಹಲಿ(ಡಿ.11): ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಿಜೆಪಿ ಆತ್ಮಿವಿಶ್ವಾಸಕ್ಕೆ ತೀವ್ರ ಹೊಡೆತ ನೀಡಿದೆ. ಇಷ್ಟೇ ಅಲ್ಲ ಆಮ್ ಆದ್ಮಿ ಪಾರ್ಟಿಯನ್ನು ಕಡೆಗಣಿಸಿದ್ದ ಬಿಜೆಪಿಗೆ ತಕ್ಕಪಾಠ ಸಿಕ್ಕಿದೆ. ಕಳೆದ 15 ವರ್ಷದಿಂದ ದೆಹಲಿ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಇದೀಗ ಆಮ್ ಆದ್ಮಿ ಪಾರ್ಟಿಗೆ ಅಧಿಕಾರ ಬಿಟ್ಟುಕೊಟ್ಟಿದೆ. ಇದರ ಪರಿಣಾಮ ದೆಹಲಿ ಬಿಜೆಪಿಯಲ್ಲಿ ಕೆಲ ಬದಲಾವಣೆಗಳಾಗಿದೆ. ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ ಗುಪ್ತ ರಾಜೀನಾಮೆ ನೀಡಿದ್ದಾರೆ. ಸೋಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸದ್ಯ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ವಿರೇಂದ್ರ ಸಚ್‌ದೇವ್‌‌ರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಶೀಘ್ರದಲ್ಲೇ ಬಿಜೆಪಿ ಹೈಕಮಾಂಡ್ ನೂತನ ಅಧ್ಯಕ್ಷರನ್ನು ಘೋಷಿಸಲಿದೆ. 

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸೋಲಿನ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ. ಆದರೆ ಜನರ ಸೇವೆ ಮುಂದುವರಿಯಲಿದೆ. ಪಾಲಿಕೆಯಲ್ಲೂ ಆಮ್ ಆದ್ಮಿ ಪಾರ್ಟಿ ಭ್ರಷ್ಟಾಚಾರ, ಕಳ್ಳಾಟಗಳನ್ನು ಆರಂಭಿಸಿದರೆ ಹೋರಾಟದ ಎಚ್ಚರಿಕೆಯನ್ನು ಆದೇಶ್ ಗುಪ್ತಾ ನೀಡಿದ್ದಾರೆ. ದೆಹಲಿ ಪಾಲಿಕೆಯಲ್ಲಿ ಬಿಜೆಪಿ ಪಾರದರ್ಶಕ ಆಡಳಿತ ನಡೆಸಿದೆ. ಆದರೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಜನತೆಯ ತೀರ್ಪನ್ನು ಗೌರವಿಸುತ್ತೇನೆ ಎಂದು ಆದೇಶ್ ಗುಪ್ತಾ ಹೇಳಿದ್ದಾರೆ.

 

ಮಹಾನಗರ ಪಾಲಿಕೆ ಗೆದ್ದ ಬೆನ್ನಲ್ಲೇ ಆಮ್ ಆದ್ಮಿಗೆ ಎದುರಾಯ್ತು ಸಂಕಷ್ಟ!

ಬಿಜೆಪಿ ಸೋಲಿಗೆ ಮೇಜರ್ ಸರ್ಜರಿ ಮಾಡಲು ಹೈಕಮಾಂಡ್ ಮುಂದಾಗಿದೆ. ಚುನಾವಣೆ ಎದುರಿಸಿದ ಬಿಜೆಪಿ ತಂತ್ರಗಾರಿಯಲ್ಲೂ ಕೆಲ ಲೋಪಗಳು ಇದೀಗ ಚರ್ಚೆಯಾಗುತ್ತಿದೆ. ಅಸಮರ್ಪಕ ಟಿಕೆಟ್‌ ಹಂಚಿಕೆ ನಿರ್ಧಾರ ಕೂಡಾ ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಶಾಸಕರು ಹಾಗೂ ಸಂಸದರೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸದೇ ಟಿಕೆಟ್‌ ನೀಡಲಾಗಿತ್ತು. ಇದು ಸೋಲಿಗೆ ಕಾರಣವಾಯಿತು ಅನ್ನೋ ಬಲವದಾ ಚರ್ಚೆಯಾಗಿದೆ.

ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್‌ ಗುಪ್ತ ಅವರ ನೇತೃತ್ವದಲ್ಲಿ ಬಿಜೆಪಿ ಯಾವ ಚುನಾವಣೆಯನೂ ಗೆದ್ದಿಲ್ಲ. ಆದರೂ ರಾಜ್ಯ ಘಟಕದ ನಾಯಕತ್ವದಲ್ಲಿ ಬದಲಾವಣೆ ತರಲು ಯಾವ ಪ್ರಯತ್ನ ನಡೆಸಲಾಗಿಲ್ಲ. ಪ್ರಭಾವಿ ಮುಖ, ಪ್ರಬಲ ನಾಯಕತ್ವ, ಸ್ವಪಕ್ಷೀಯ ಕಲಹ ಬಿಜೆಪಿಗೆ ಮುಳುವಾಯಿತು.

ಆಪ್‌ ತೆಕ್ಕೆಗೆ ದೆಹಲಿ ಪಾಲಿಕೆ: ಬಿಜೆಪಿಯ 15 ವರ್ಷಗಳ ಅಧಿಕಾರ ಕೊನೆಗೊಳಿಸಿದ ಕೇಜ್ರಿವಾಲ್‌..!

ದೆಹಲಿಯಲ್ಲಿ ಸಿಎಎ ವಿರೋಧಿಸಿ ನಡೆದ ದಂಗೆಗಳ ಬಳಿಕ 2021ರಲ್ಲಿ ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಆಪ್‌ 5 ಸೀಟುಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿತು. 1 ಸೀಟು ಕಾಂಗ್ರೆಸ್‌ ಗೆದ್ದಿತ್ತು. ಆಗಲೇ ಮತದಾರರ ಮನದಲ್ಲಿ ಬಿಜೆಪಿಗೆ ಬದಲಾಗಿ ಒಂದು ಪ್ರಬಲ ಪಕ್ಷವಾಗಿ ಆಪ್‌ ಹೊರಹೊಮ್ಮಿತ್ತು. ಆದರೆ ಬಿಜೆಪಿ ಇದನ್ನು ನಿರ್ಲಕ್ಷಿಸಿತು. ಆಪ್‌ ಸತತವಾಗಿ ಮತದಾರರನ್ನು ಓಲೈಸಲು ಪ್ರಯತ್ನಿಸಿದ್ದಲ್ಲದೇ ಆ ದಿಶೆಯಲ್ಲಿ ಕಾರ್ಯಗತವಾಯಿತು. ದೆಹಲಿಯಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯಲ್ಲಿ ಬಿಜೆಪಿ ವೈಫಲ್ಯದ ಬಗ್ಗೆ ಆಪ್‌ ಅಬ್ಬರದ ಪ್ರಚಾರ ನಡೆಸಿತು. ಅಲ್ಲದೇ ಕಸದ ನಿರ್ವಹಣೆಗಾಗಿ ವೈಜ್ಞಾನಿಕ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿತು.ಪ್ರಭಾವಿ ಮುಖ, ಪ್ರಬಲ ನಾಯಕತ್ವದ ಕೊರತೆಯು ಕಾಂಗ್ರೆಸ್‌ನಲ್ಲೂ ಎದ್ದು ಕಾಣುತ್ತಿತ್ತು. ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಸೋಲೊಪ್ಪಿಕೊಂಡಂತಿತ್ತು. ಹೀಗಾಗಿ ಚುನಾವಣೆ ಬಹುತೇಕ ದ್ವಿಪಕ್ಷೀಯ ಎಂದೇ ಬಿಂಬಿತವಾಗಿತ್ತು.

click me!