ಪ್ರಧಾನಿ ಮೋದಿಯನ್ನು ಹೊಗಳದೆ ಈ ದೇಶದಲ್ಲಿ ಇನ್ಯಾರನ್ನು ಹೊಗಳಲಿ? ಪ್ರಮೋದ್ ಮಧ್ವರಾಜ್

By Ravi Janekal  |  First Published Jan 27, 2023, 12:52 PM IST

ಮೋದಿಯನ್ನು ಹೊಗಳದೆ ಈ ದೇಶದಲ್ಲಿ ಇನ್ಯಾರನ್ನು ಹೊಗಳಲಿ? ಇಡೀ ದೇಶ ಹೊಗಳುವಾಗ ನಾನು ಹೊಗಳದೆ ಇರುವುದು ಮೂರ್ಖತನ. ಕಾಂಗ್ರೆಸ್ ಇದೇ ರೀತಿ ಮೋದಿಯನ್ನು ಟೀಕಿಸುತ್ತಿದ್ದರೆ ಸಿಗುವ ನಾಲ್ಕು ಓಟು ಸಿಗಲ್ಲ. ಸಿದ್ದರಾಮಯ್ಯ ಡಿಕೆಶಿಗೆ ಪುಕ್ಸಟ್ಟೆ ಸಲಹೆ ಕೊಡುತ್ತೇನೆ ಎಂದ ಪ್ರಮೋದ್ ಮಧ್ವರಾಜ್.


ಉಡುಪಿ (ಜ.27) : 'ಸಿದ್ದರಾಮಯ್ಯ ಈವರೆಗೆ ಏಳು ಬಾರಿ ಪಕ್ಷವನ್ನು ಬದಲಾಯಿಸಿದ್ದಾರೆ. ನಾನು ಹುಟ್ಟಿನಿಂದ ಕಾಂಗ್ರೆಸ್ ಈಗ ಬಿಜೆಪಿ ಸೇರಿದ್ದೇನೆ' ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮಧ್ವರಾಜ್.

ಪ್ರಜಾಧ್ವನಿ ಯಾತ್ರೆ(Prajadhwani yatre)ಯಲ್ಲಿ ಪ್ರಮೋದ್ ಮಧ್ವರಾಜ(Pramood Madhwaraj)ರನ್ನು ಟೀಕಿಸಿದ್ದ ಸಿದ್ದರಾಮಯ್ಯ,(Siddaramaiah) ಡಿ.ಕೆ.ಶಿವಕುಮಾರ(DK Shivakumar). ಕಾಂಗ್ರೆಸ್‌ನ ಇಬ್ಬರು ನಾಯಕರ ಹೇಳಿಕೆ ವಿರುದ್ಧ ತಿರುಗಿಬಿದ್ದ ಪ್ರಮೋದ್ ಮಧ್ವರಾಜ್.

Tap to resize

Latest Videos

undefined

Pancharatna Ratha Yatre: ಬಿ.ಫಾರ್ಮ್ ಕೊಡೋದು ದೇವೇಗೌಡ್ರು, ನಾನಲ್ಲ: ಕುಮಾರಸ್ವಾಮಿ

ಸಿದ್ದರಾಮಯ್ಯ 1978 ರಲ್ಲಿ ರೈತಸಂಘದಲ್ಲಿದ್ದರು.  1983 ರಲ್ಲಿ ಭಾರತೀಯ ಲೋಕದಳ, ಸಮಾಜಪಕ್ಷ ಜನತಾದಳ, ಜಾತ್ಯಾತೀತ ಜನತಾದಳ, ಅಹಿಂದ ಸೇರಿಕೊಂಡರು. ಎಲ್ಲ ಕಡೆ ಸಿದ್ದರಾಮಯ್ಯ ಅಶಿಸ್ತಿನ ವಾತಾವರಣ ಸೃಷ್ಟಿಸಿ ಹೊರದಬ್ಬಿಸಿಕೊಂಡವರು ಎಂದು ಸಿದ್ದರಾಮಯ್ಯರ ಕಿಡಿ ಕಾರಿದರು.

ಸಿದ್ದರಾಮಯ್ಯ, ಡಿಕೆಶಿಗೆ ಸವಾಲ್:

ನನ್ನನ್ನು ಅಸಾಮಿ, ಗಿರಾಕಿ ಅಂತಾ ಹೇಳಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಕೆಟ್ಟದಾಗಿ ಮಾತನಾಡಲು ನನಗೂ ಬರುತ್ತದೆ. ಆದರೆ  ತಂದೆ ತಾಯಿ ನನಗೆ ಸಂಸ್ಕಾರ ಸೌಜನ್ಯತೆ ಕಲಿಸಿದ್ದಾರೆ. ನನ್ನ ಮೇಲೆ ಇಷ್ಟು ಕೆಟ್ಟದಾಗಿ ಮಾತಾಡುವವರು, ಇನ್ನು ಜನಸಾಮಾನ್ಯರ ಮೇಲೆ ಹೇಗೆ ವರ್ತಿಸಬೇಡ? ನಾನು ಸಿದ್ದರಾಮಯ್ಯ ಕ್ಯಾಬಿನೆಟ್ ನಲ್ಲಿ ಮಂತ್ರಿಯಾಗಿದ್ದೆ, ಕಾಂಗ್ರೆಸ್ ಪಕ್ಷದ ಒಳಜಗಳ, ಭ್ರಷ್ಟಾಚಾರಕ್ಕೆ ಬೇಸತ್ತು ಬಿಜೆಪಿಗೆ ಬಂದಿದ್ದೇನೆ. ಸನ್ನಿವೇಶಕ್ಕೆ ಅನುಗುಣವಾಗಿ ದೇಶದಲ್ಲಿ ಪಕ್ಷಾಂತರ ಸಾಮಾನ್ಯ. ಆದರೆ ನನ್ನನ್ನು ಗಿರಾಕಿ,ಆಸಾಮಿ ಅನ್ನುವ ಕಾಂಗ್ರೆಸ್ ನಾಯಕರು, ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬರಬೇಡಿ ಎಂದು ಘೋಷಿಸಲಿ ನೋಡೋಣ ಎಂದು ಸವಾಲು ಹಾಕಿದರು

ಚಿಕ್ಕಮಗಳೂರು, ಉ.ಕನ್ನಡ ಮೈತ್ರಿ ಸೀಟ್ ಆಗಿತ್ತು.  ಸಿದ್ದರಾಮಯ್ಯ ಮೈಸೂರು ಕ್ಷೇತ್ರ ಉಳಿಸಲು ಸ್ವಾರ್ಥ ಸಾಧನೆ ಮಾಡಿದರು. ಜೆಡಿಎಸ್ ನಲ್ಲಿ ಟಿಕೆಟ್ ಪಡೆಯೋ ಮೊದಲು ಸಿದ್ದರಾಮಯ್ಯ ದಿನೇಶ್ ಗುಂಡೂರಾವ್ ಪರವಾನಿಗೆ ಪಡೆದಿದ್ದೇನೆ. ಸಿದ್ದರಾಮಯ್ಯ ಅವರ ಸುಳ್ಳಿನ ಬಗ್ಗೆ ಆಕ್ಷೇಪ ಇದೆ. ನಾನು ಖಂಡಿಸುತ್ತೇನೆ ಜೆಡಿಎಸ್ ನಿಂದ ಹಣ ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ ಜೆಡಿಎಸ್ ನಿಂದ ಬಂದ ಫಂಡನ್ನು ಜಿಲ್ಲಾ ಕಾಂಗ್ರೆಸ್ ಪಡೆದಿದೆ ಎಲ್ಲಾ ಹಂಚಿಕೆ ಮಾಡಿದ್ದೇನೆ ಎಂದರು.

ಡಿಕೆಶಿ ವಿರುದ್ಧ ವಾಗ್ದಾಳಿ: 

ನನ್ನ ತಂದೆ ಸ್ವಂತ ಹಣದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ಸಂಪೂರ್ಣ ನೆಲಕ್ಕಚ್ಚಿದ ಕಾಂಗ್ರೆಸ್ ನ್ನು ನಾನು ಪುನರುಜ್ಜೀವನ ಮಾಡಿದ್ದೇನೆ. ಲಂಚದ ಹಣದಿಂದ, ಇನ್ನೊಬ್ರ ಕಿಸೆಯಿಂದ ಕಿತ್ಕೊಂಡು ಪಕ್ಷ ಕಟ್ಟಿಲ್ಲ. ಸ್ವಜನ ಪಕ್ಷಪಾತ, ಲಂಚ ಪಡೆಯಲು ಪಕ್ಷವನ್ನು ಉಪಯೋಗಿಸಿಲ್ಲ. ಎಸ್‌ಎಂ ಕೃಷ್ಣ ಪದ್ಮಭೂಷಣ ಪಡೆದಿದ್ದಾರೆ ನನ್ನ ಅಭಿನಂದನೆ ಇದೆ. ಡಿಕೆಶಿ ಎಸ್ ಎಂಕೆಯನ್ನು ಯಾಕೆ ಟೀಕಿಸಿಲ್ಲ? ಕೃಷ್ಣ ಮೊಮ್ಮಗನಿಗೆ ಮಗಳನ್ನು ಕೊಟ್ಟಾಗ ಪಕ್ಷಾಂತರ ನೆನಪಾಗಿಲ್ವಾ? ಎಂದು ಪ್ರಶ್ನಿಸಿದರು.

2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐದಕ್ಕೈದು ಸ್ಥಾನ ಗೆಲ್ಲುತ್ತದೆ. ಬಿಜೆಪಿ ಸೋಲಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಪ್ರಮೋದ್ ಜೊತೆ ಒಬ್ಬನೂ ಸೇರಿಲ್ಲ ಎಂದಿದ್ದಾರೆ. ಸಂಘರ್ಷದ ಸಂದರ್ಭದಲ್ಲಿ ಸೇರ್ಪಡೆ ಮಾಡಿಲ್ಲ. ಚುನಾವಣೆ ಹತ್ತಿರವಾಗುವವರೆಗೆ ಕಾಯಿರಿ. ಈಗಲೇ ಕಾರ್ಯಕರ್ತರಿಗೆ ಅಭಿನಂದನೆ ಕೊಡಬೇಡಿ ಎನ್ನುವ ಮೂಲಕ ಕಾಂಗ್ರೆಸ್‌ನಿಂದ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳುವ ಸುಳಿವು ನೀಡಿದರು.

ಪಕ್ಷ ಅವಕಾಶ ಕೊಟ್ಟರೆ ಜನಸೇವೆ:

ಪಕ್ಷ ಅವಕಾಶ ಕೊಟ್ಟರೆ ಜನರ ಸೇವೆ ಮಾಡುತ್ತೇನೆ. ಅವಕಾಶ ಸಿಗದಿದ್ದರೆ ಪಕ್ಷದ ಸೇವೆ ಮಾಡುತ್ತೇನೆ. ನಾನು ಯಾವುದೇ ಷರತ್ತು ಹಾಕಿ ಬಿಜೆಪಿಗೆ ಬಂದಿಲ್ಲ. ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಅವಕಾಶ ಸಿಗದಿದ್ದರೆ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತೇನೆ ಎಂದರು.

Disha Amrit: ಗಣರಾಜ್ಯೋತ್ಸವದಲ್ಲಿ ನೌಕಾ ಪರೇಡ್‌ ಮುನ್ನಡೆಸಿದ ಕುಡ್ಲಾದ ಕುವರಿ ದಿಶಾ ಅಮೃತ್‌

ಮೋದಿಯನ್ನು ಹೊಗಳದೆ ಈ ದೇಶದಲ್ಲಿ ಇನ್ಯಾರನ್ನು ಹೊಗಳಲಿ? ಇಡೀ ದೇಶ ಹೊಗಳುವಾಗ ನಾನು ಹೊಗಳದೆ ಇರುವುದು ಮೂರ್ಖತನ. ಕಾಂಗ್ರೆಸ್ ಇದೇ ರೀತಿ ಮೋದಿಯನ್ನು ಟೀಕಿಸುತ್ತಿದ್ದರೆ ಸಿಗುವ ನಾಲ್ಕು ಓಟು ಸಿಗಲ್ಲ. ಸಿದ್ದರಾಮಯ್ಯ ಡಿಕೆಶಿಗೆ ಪುಕ್ಸಟ್ಟೆ ಸಲಹೆ ಕೊಡುತ್ತೇನೆ ಎಂದ ಪ್ರಮೋದ್ ಮಧ್ವರಾಜ್.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದೆ. ಬಿಜೆಪಿ ಈ ಬಾರಿ 150 ಸ್ಥಾನ ಗೆಲ್ಲುತ್ತದೆ ಸಂಪೂರ್ಣ ಬಹುಮತ ಬರಲಿದೆ. ಯತ್ನಾಳ್ ಯಡಿಯೂರಪ್ಪ ಬಗ್ಗೆ ಮಾತಾಡಲ್ಲ ಅಂದಿದ್ದಾರೆ. ಪ್ರಧಾನಿ ಮೋದಿ ಅಮಿತ್ ಶಾ ರಾಜ್ಯ ಪ್ರವಾಸ ಶುರುಮಾಡಿದ್ದಾರೆ. ರಾಜ್ಯದಲ್ಲಿ ರಿಪೇರಿ ಶುರುವಾದಾಗ ಎಲ್ಲಾ ಗೊಂದಲ ಸರಿಯಾಗುತ್ತದೆ ಕಾದು ನೋಡಿ ಎಂದು ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್

click me!