
ಹುಬ್ಬಳ್ಳಿ (ಆ.17): ಕಾಂಗ್ರೆಸ್‌ನಂತಹ ಅಯೋಗ್ಯರು ಹುಡುಕಿದರೂ ಸಿಗಲ್ಲ. ಇವರು ಆಳಲಿಕ್ಕೆ ಲಾಯಕ್ ಇಲ್ಲ. ವೀರೇಂದ್ರ ಹೆಗಡೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ಯಾವನೋ ಅಯ್ಯೋಗ್ಯ ಹೇಳಿದ್ದಕ್ಕೆ ಎಸ್ಐಟಿ ರಚನೆ ಮಾಡಿದ್ದೀರಿ ಎಂದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯ ವರೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಂತಹ ಅಯೋಗ್ಯರು ಹುಡುಕಿದರೂ ಸಿಗಲ್ಲ. ಇವರು ಆಳಲಿಕ್ಕೆ ಲಾಯಕ್ ಇಲ್ಲ. ವೀರೇಂದ್ರ ಹೆಗಡೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ಒರಿಜನಲ್ ಕಾಂಗ್ರೆಸ್‌ನ ಕಬಳಿಸಿ ಕೊಂಡಿದ್ದೀರಿ. ನೀವು ನುಸುಳುಕೋರರು, ಅಯೋಗ್ಯರು. ದೇಶದ ಗುಡಿ ಗುಂಡಾರ ಹೊಡೆಯುವ ಪ್ರಯತ್ನ ಮಾಡಿದ್ದೀರಿ. ಮುಸ್ಲಿಂ ಲೀಗ್ ಸೇರಿ ಹಲವು ಸಂಘಟನೆಗಳೊಂದಿದೆ ಸಂಪರ್ಕ ಇಟ್ಟಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.
ಯಾರೋ ಅಯ್ಯೋಗ್ಯ ಹೇಳಿದ್ದಕ್ಕೆ ಎಸ್ಐಟಿ ರಚನೆ ಮಾಡಿದ್ದೀರಿ. ಸೌಜನ್ಯ ಪ್ರಕರಣ ತನಿಖೆ ಮಾಡ್ತೇನೆ ಎಂದಿದ್ದೀರಿ. ಷಡ್ಯಂತ್ರ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎರಡು ದಂಡೆ ಮೇಲೆ ಕಾಲಿಟ್ಟು ಹೋಗುವ ಕೆಲಸ ಮಾಡ್ತಾ ಇದ್ದಾರೆ. ನಿಮ್ಮದು ಮುಸ್ಲಿಂ ಲೀಗ್ ಜೊತೆ ಸಂಪರ್ಕ ಇದೆ. ನಾವು ನಮ್ಮ ಸ್ವತ್ತು ಅಂತ ಹೇಳಿಲ್ಲ. ಕೆಫೆ ಬ್ಲಾಸ್ಟ್ ಆದಾಗ ಭಯೋತ್ಪಾದನೆ ಕೃತ್ಯ ಅಲ್ಲಾ ಹೇಳಿದ್ರಿ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅತ್ಯಂತ ಅಸಭ್ಯವಾಗಿ ಮಾತಾಡಿದ್ದಾರೆ. ಇದುವರೆಗೂ ಕ್ರಮ ಯಾಕೆ ಕೈಗೊಂಡಿಲ್ಲ? ಹುಬ್ಬಳ್ಳಿಯಲ್ಲಿ ಕೇಸ್ ತೆಗೀತಾರೆ, ಅಲ್ಲಿ ಪೊಲೀಸರನ ಕಳ್ಸಿ ಅಗೀತಾರೆ. ದೇಶದಲ್ಲಿ ಹಿಂದೂಗಳು ಜಾಗೃತರಾಗಿದ್ದಾರೆ ಎಂದು ತಿಳಿಸಿದರು.
ಸ್ವತಂತ್ರ ಹೋರಾಟದಲ್ಲಿ ಆರ್.ಎಸ್.ಎಸ್ ಪಾತ್ರ ಏನು ಎಂಬ ವಿಚಾರದ ಬಗ್ಗೆ ಮಾತನಾಡಿ, ಅವರಿಗೆ ಇತಿಹಾಸ ಗೊತ್ತಿಲ್ಲ. ಇದು ನಿಜವಾದ ಕಾಂಗ್ರೆಸ್ ಅಲ್ಲ. ಮುಖರ್ಜಿ ಅವರು ಬಲಿದಾನ ಮಾಡಿದ್ದಾರೆ. ಕಾಂಗ್ರೆಸ್ ಅಂದ್ರೆ ನೀವಾ? ವಲ್ಲಭಾಯಿ ಪಟೇಲ್, ಸುಭಾಸ್ ಚಂದ್ರ ಬೋಸ್ ರನ್ನ ಯಾವ್ ರೀತಿ ನಡೆಸಿಕೊಂಡಿದ್ದಾರೆ. ಇಂದಿರಾ ಗಾಂಧಿಗಿಂತ 10 ಪಟ್ಟು ತ್ಯಾಗ ಮಾಡಿದ ಅಂಬೇಡ್ಕರ್ ಯೋಜನೆ ಎಷ್ಟಿದೆ. ಒಂದು ಖಾಂದಾನ್‌ಗೆ ಬರೆದು ಕೊಟ್ಟಿಲ್ಲ ಇದನ್ನ ಎಂದು ಹೇಳಿದರು.
ವರೂರಿನ ಜೈನ ಮುನಿ ಗುಣದರನಂದಿ ಮಹಾರಾಜ ಮಾತನಾಡಿ, ಧರ್ಮಸ್ಥಳ ಪ್ರಕರಣಕ್ಕೆ ಎಸ್ಐಟಿ ರಚನೆ ಒಳ್ಳೆಯದಾಯಿತು. ಎಸ್ಐಟಿ ತನಿಖೆಯಿಂದ ಸತ್ಯ ಹೊರ ಬರ್ತಿದೆ. ಆರೋಪದಲ್ಲಿ ಹುರುಳಿಲ್ಲ ಅನ್ನೋದು ತನಿಖೆಯಿಂದ ಗೊತ್ತಾಗುತ್ತಿದೆ. ಹೀಗಾಗಿ ಷಡ್ಯಂತ್ರ ಮಾಡಿದವರ ಮೇಲೆ ಕ್ರಮ ಆಗಬೇಕು. ಬೇಗನೆ ಕ್ರಮ ಕೈಗೊಳ್ಳಬೇಕು. ಆತಂಕವಾದಿಯೂ 300 ಕೊಲೆ ಮಾಡಲಾಗಲ್ಲ. ಅಂಥದ್ರಲ್ಲಿ ಇಂತಹ ವ್ಯಕ್ತಿಯ ಮೇಲೆ ಆರೋಪ ಮಾಡ್ತಾರೆ. ಆರೋಪ ಮಾಡಿದವರ ಮೇಲೂ ಒಂದು ತನಿಖೆ ಆಗಬೇಕು. ಅಧಿವೇಶನದಲ್ಲಿ ಯೂಟ್ಯೂಬರ ಮೇಲೆ ಕ್ರಮ ಕೈಗೊಳ್ಳಬೇಕು. ಅದರ ಮೇಲೆ ಒಂದು ನಿಯಮ ಹಾಕಿ. ನಮ್ಮ ಧರ್ಮಾತ್ಮನ ಮೇಲೆ ಆರೋಪ ಮಾಡಿದವನ ಮೇಲೆ ಕ್ರಮ ಆಗಲಿ ಎಂದು ಸ್ವಾಮೀಜಿ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.