ಕಳೆದ ಬಾರಿ ನನ್ನಿಂದಲೇ ಪ್ರಜ್ವಲ್ ರೇವಣ್ಣ ಗೆದ್ದಿದ್ದು, ಈ ಬಾರಿ ನಾನೇ ಹೋಗಿ ಸೋಲಿಸುತ್ತೇನೆ: ಸಿಎಂ ಸಿದ್ದರಾಮಯ್ಯ

By Sathish Kumar KHFirst Published Apr 2, 2024, 3:04 PM IST
Highlights

ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಪ್ರಚಾರ ಮಾಡಿದ್ದರಿಂದಲೇ ಪ್ರಜ್ವಲ್ ಗೆದ್ದುದ್ದು. ಈ ಬಾರಿ ನಾನೇ ಹೋಗಿ ಪ್ರಜ್ವಲ್‌ನನ್ನು ಸೋಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರು (ಏ.02): ಕಳೆದ ಬಾರಿ ನಾನು ಹಾಸನಲ್ಲಿ ಪ್ರಚಾರಕ್ಕೆ ಹೋಗಿದ್ದರಿಂದಲೇ ಪ್ರಜ್ವಲ್ ರೇವಣ್ಣ ಗೆದಿದ್ದು. ಈ ಬಾರಿಯೂ ಹಾಸನಕ್ಕೆ ಹೋಗುತ್ತೇನೆ. ಪ್ರಜ್ವಲ್‌ನನ್ನು ಸೋಲಿಸುತ್ತೇನೆ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಪ್ರಜ್ವಲ್ ರೇವಣ್ಣನನ್ನು ಸೋಲಿಸಲೇ ಬೇಕೆಂದು ಪಣ ತೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.'

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡಿತ್ತು. ಹೀಗಾಗಿ, ನಾನು ಹಾಸನಕ್ಕೆ ಹೋಗಿ ಪ್ರಚಾರ ಮಾಡಿದ್ದರಿಂದಲೇ ಪ್ರಜ್ವಲ್ ಗೆದ್ದಿದ್ದು. ಆದರೆ, ಈ ಬಾರಿ ನಮ್ಮ ಕಾರ್ಯಕರ್ತರು ಹಾಗೂ ನಾಯಕರು ಪ್ರಜ್ವಲ್ ಸೋಲಿಸಬೇಕೆಂದು ಪಣ ತೊಟ್ಟಿದ್ದಾರೆ. ಈ ಬಾರಿಯೂ ನಾನು ಹಾಸನಕ್ಕೆ ಹೋಗುತ್ತೇನೆ. ಆದರೆ, ನಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿ ನಾನೇ ಪ್ರಜ್ವಲ್‌ನನ್ನು ಸೋಲಿಸುತ್ತೇನೆ. ಈ ಬಾರಿ ಹಾಸನದಲ್ಲಿ ಪ್ರಜ್ವಲ್ ಸೋಲುತ್ತಾನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಣೆ; 2028ರಿಂದ ಚುನಾವಣೆಯಲ್ಲಿ ಸ್ಪರ್ಧಿಸೊಲ್ಲ!

ಮಂಡ್ಯದ ಸ್ಪರ್ಧೆ ದೇವರ ಇಚ್ಚೆ ಎಂದ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಕಳೆದ ಬಾರಿ ಮಂಡ್ಯದಲ್ಲಿ ಮಗನನ್ನ ನಿಲ್ಲಿಸುವಾಗ ಯಾರ ಇಚ್ಛೆಯಿತ್ತು. ಈಗ ದೇವರು ಎಂದರೆ ಆಗ ಯಾರಿದ್ದರು. ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗಲೇ ಅವರ ಮಗ ಅಲ್ಲಿ ಸೋತ್ತಿದ್ದಾನೆ. ಈ ಬಾರಿ ಜೆಡಿಎಸ್ ನವರು ಮೂರಕ್ಕೆ ಮೂರು ಕ್ಷೇತ್ರದಲ್ಲೂ ಸೋಲುತ್ತಾರೆ. ಕಳೆದ ಬಾರಿ ಮೈಸೂರಿನಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಗೆ ಹಾಕಿದ್ದು ಯಾವ ಚೂರಿ? ಮೈತ್ರಿ ಧರ್ಮ ಎಂದರೆ ಎಲ್ಲಾ ಕ್ಷೇತ್ರಕ್ಕೂ ಒಂದೇ. ಮೈಸೂರಿನಲ್ಲಿ ಚೂರಿ ಹಾಕಿ ಈಗ ಮಂಡ್ಯದಲ್ಲಿ ನಮಗೆ ಚೂರಿ ಹಾಕಿದರು ಎಂದರೇ? ಅದರಲ್ಲಿ ಯಾವ ನ್ಯಾಯ ಇದೆ ಹೇಳಿ ಎಂದರು.

ಕುಮಾರಸ್ವಾಮಿ ರಾಜ್ಯಕ್ಕೆ ಬರ ಪರಿಹಾರ ಕೊಡಿಸ್ತಾರಾ? 
ಅಮಿತ್ ಶಾಗೆ ಕನ್ನಡಿಗರ ಮತ ಕೇಳಲು ಯಾವ ನೈತಿಕತೆ ಇದೆ. ನಮಗೆ ಬರಗಾಲದ ಪರಿಹಾರ 5 ಪೈಸೆಯೂ ಬಂದಿಲ್ಲ. ಪರಿಹಾರ ಕೊಡದೆ ಹೇಗೆ ಬಂದು ಇಲ್ಲಿ ಮತ ಕೇಳುತ್ತಾರೆ. ಅಮಿತ್ ಶಾ ತಮ್ಮ ಮನೆಯಿಂದ ಏನು ಬರ ಪರಿಹಾರದ ಹಣ ಕೊಡುತ್ತಾರಾ? ಅದೆನ್ನು ನಮಗೆ ಭಿಕ್ಷೆನಾ? ಎಚ್.ಡಿ ಕುಮಾರಸ್ವಾಮಿ ರಾಜ್ಯಕ್ಕೆ ಪರಿಹಾರ ಕೊಡಿಸಿ ನಂತರ ಕರೆದುಕೊಂಡು ಬರಬೇಕಿತ್ತು. ಕನ್ನಡಿಗರು ಈ ಚುನಾವಣೆಯಲ್ಲಿ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಕುಮಾರಸ್ವಾಮಿ ಬಿಜೆಪಿ ದೊಡ್ಡ ವಕ್ತಾರ ರೀತಿ ಇದ್ದಾರೆ. ಅವರಿಗೆ ಇದನ್ನೆಲ್ಲಾ ಕೇಳಬೇಕು. ಪರಿಹಾರ ಕೊಡದನ್ನ ಕುಮಾರಸ್ವಾಮಿ ಸಮರ್ಥಿಸಿಕೊಳ್ಳುತ್ತಾರಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಕೇಳಿದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಕರೆ ಮಾಡಿ ದೆಹಲಿಗೆ ಬುಲಾವ್ ಮಾಡಿದ ಕೇಂದ್ರ ಸಚಿವ ಅಮಿತ್ ಶಾ

ಸಚಿವ ನಾಗೇಂದ್ರ ಹಾಗೂ ಸಂತೋಷ್ ಲಾಡ್ ವಿರುದ್ಧ ಜನಾರ್ಧನ್ ರೆಡ್ಡಿ ಆರೋಪದ ಕುರಿತು ಮಾತನಾಡಿ, ರೆಡ್ಡಿ ಬೇಕಾದರೆ ಕೋರ್ಟ್ ಗೆ ಹೋಗಲಿ. ನಾನು ಹೋರಾಟ ಮಾಡಿದ್ದ ಸಂತೋಷ್ ಹೆಗ್ಡೆ ವರದಿ ಆದಾರದ ಮೇಲೆ ಹೋರಾಟ ಮಾಡಿದ್ದು. ಸಂತೋಷ್ ಹೆಗ್ಡೆ ವರದಿಯಲ್ಲಿ ಇವರ ಹೆಸರು ಇತ್ತಾ. ಅವರ ಹೆಸರು ಇಲ್ಲದ ಮೇಲೆ ಸುಮ್ನನೆ ಯಾಕೆ ಆರೋಪ‌. ಇವಾಗ ಯಾಕೆ ಆ ಕುರಿತು ಪ್ರಸ್ತಾಪ ಮಾಡ್ತಾರೆ. ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆ. ಆವಾಗ ಮಾತನಾಡದವರು ಇವಾಗ ಏಕೆ ಮಾತನಾಡುತ್ತಿದ್ದಾರೆ. ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಲು ಹೋಗಿದ್ರು ಅಂತ ಸಂತೋಷ್ ಹೆಗ್ಢೆ ವರದಿ ಕೊಟ್ಟಿದ್ದರು. ಈಗ ಅವರು ಬೇಕಾದರೆ ಅವರು ಕೋರ್ಟ್ ಗೆ ಹೋಗಲಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು‌ ನೀಡಿದರು.

click me!