ರಾಜಕೀಯವೆಂದರೆ ಈಗ ಕೇವಲ ಅಧಿಕಾರದಲ್ಲಿರುವುದಷ್ಟೇ: ನಿತಿನ್‌ ಗಡ್ಕರಿ

Published : Jul 25, 2022, 03:00 PM IST
ರಾಜಕೀಯವೆಂದರೆ ಈಗ ಕೇವಲ ಅಧಿಕಾರದಲ್ಲಿರುವುದಷ್ಟೇ: ನಿತಿನ್‌ ಗಡ್ಕರಿ

ಸಾರಾಂಶ

ಈಗಿನ ರಾಜಕಾರಣವೆಂದರೆ ಅಧಿಕಾರದಲ್ಲಿರುವುದು (power), ನನಗೆ ಒಮ್ಮೊಮ್ಮೆ ರಾಜಕೀಯ ಬಿಡಬೇಕೆಂದು (quitting politics) ಆಗಾಗ್ಗೆ ಅನಿಸುತ್ತಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

2014ರಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ರಾಜಕೀಯ ಚಿತ್ರಣ ಸಾಕಷ್ಟು ಬದಲಾಗುತ್ತಿದೆ. ಭಾರತದ ರಾಜಕೀಯ (politics,) ರಾಜಕೀಯ ನಾಯಕರ ಬಗ್ಗೆ ಆಗಾಗ್ಗೆ ಚರ್ಚೆಗೀಡಾಗುತ್ತಿರುತ್ತದೆ. ಹಾಗೂ, ಬಹುತೇಕರು ಈಗಿನ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ರಾಜಕೀಯ ನಾಯಕರು ಮಾತ್ರ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರಿಲ್ಲಿ, ಸ್ವತ: ಕೇಂದ್ರ ಸಚಿವರೊಬ್ಬರು ಈಗಿನ ರಾಜಕೀಯದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿರುವುದು ಹೀಗೆ ನೋಡಿ.

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಪ್ರಸ್ತುತ ರಾಜಕೀಯದ ಬಗ್ಗೆ ಮಾತನಾಡಿದ್ದು, ಈಗಿನ ರಾಜಕಾರಣವೆಂದರೆ ಅಧಿಕಾರದಲ್ಲಿರುವುದು (power), ನನಗೆ ಒಮ್ಮೊಮ್ಮೆ ರಾಜಕೀಯ ಬಿಡಬೇಕೆಂದು (quitting politics) ಅನಿಸುತ್ತಿರುತ್ತದೆ ಎಂದೂ ಹೇಳಿದ್ದಾರೆ. ನಾಗ್ಪುರದಲ್ಲಿ ಶನಿವಾರ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ನನಗೆ ರಾಜಕೀಯ ತೊರೆಯಬೇಕೆಂದು ಒಮ್ಮೊಮ್ಮೆ ಅನಿಸುತ್ತಿರುತ್ತದೆ. ಏಕೆಂದರೆ, ಸಮಾಜಕ್ಕಾಗಿ (society) ಇನ್ನೂ ಅನೇಕ ಕೆಲಸಗಳನ್ನು ಮಾಡಬೇಕಾಗಿದೆ ಎಂದೂ ಗಡ್ಕರಿ ಹೇಳಿದ್ದಾರೆ. ಹಾಗೂ, ರಾಜಕೀಯವು ಇಂದಿನ ದಿನಗಳಲ್ಲಿ ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿಯ (development) ವಾಹಕವಾಗಿರುವುದಕ್ಕಿಂತ ಹೆಚ್ಚಾಗಿ ಅಧಿಕಾರದಲ್ಲಿ ಉಳಿಯುವುದು ಎಂಬಂತಾಗಿ ಮಾರ್ಪಟ್ಟಿದೆ ಎಂದು ಕೇಸರಿ ಪಕ್ಷದ ಮಾಜಿ ಅಧ್ಯಕ್ಷರೂ ಆಗಿದ್ದ ನಿತಿನ್‌ ಗಡ್ಕರಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ.

5 ವರ್ಷದ ಬಳಿಕ ಪೆಟ್ರೋಲ್ ಕಂಪ್ಲೀಟ್‌ ಬ್ಯಾನ್? ನಿತಿನ್ ಗಡ್ಕರಿ ಹೀಗೆ ಹೇಳಿದ್ದೇಕೆ?

ರಾಜಕೀಯವೆಂದರೆ ಏನು ಎಂಬ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ಇದು ಸಮಾಜದ, ದೇಶದ ಕಲ್ಯಾಣಕ್ಕಾಗಿಯೇ ಅಥವಾ ಸರ್ಕಾರದಲ್ಲಿರುವುದರ ಬಗ್ಗೆಯೇ..? ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದರು. ಅಲ್ಲದೆ, "ರಾಜಕೀಯವು ಮಹಾತ್ಮ ಗಾಂಧಿಯವರ ಕಾಲದಿಂದಲೂ ಸಾಮಾಜಿಕ ಚಳುವಳಿಯ ಒಂದು ಭಾಗವಾಗಿದೆ, ಆದರೆ, ನಂತರ ಅದು ರಾಷ್ಟ್ರ ಮತ್ತು ಅಭಿವೃದ್ಧಿ ಗುರಿಗಳ ಮೇಲೆ ಕೇಂದ್ರೀಕರಿಸಿದೆ" ಎಂದೂ ಕೇಂದ್ರ ಸಚಿವರು ಹೇಳಿದ್ದಾರೆ.

ನಾವು ಇಂದು ರಾಜಕೀಯದಲ್ಲಿ ನೋಡುತ್ತಿರುವುದು ಏನೆಂದರೆ ಶೇಕಡ 100 ರಷ್ಟು ಅಧಿಕಾರಕ್ಕೆ ಬರುವುದು. ರಾಜಕೀಯವು ಸಾಮಾಜಿಕ-ಆರ್ಥಿಕ ಸುಧಾರಣೆಯ ನಿಜವಾದ ಸಾಧನವಾಗಿದೆ. ಅದಕ್ಕಾಗಿಯೇ ಇಂದಿನ ರಾಜಕಾರಣಿಗಳು ಸಮಾಜದಲ್ಲಿ ಶಿಕ್ಷಣ, ಕಲೆ ಇತ್ಯಾದಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. 

ಗಿರೀಶ್‌ ಗಾಂಧಿ, ಜಾರ್ಜ್‌ ಫರ್ನಾಂಡೀಸ್‌ರನ್ನು ಹೊಗಳಿದ ಕೇಂದ್ರ ಸಚಿವ

ಸಾಮಾಜಿಕ ಕಾರ್ಯಕರ್ತ ಗಿರೀಶ್‌ ಗಾಂಧಿಯನ್ನು ಅಭಿನಂದಿಸುವ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವರು ಈ ಮಾತುಗಳನ್ನಾಡಿದ್ದಾರೆ ಅನ್ನೋದು ವಿಶೇಷ. ಗಿರೀಶ್‌ ಗಾಂಧಿಗೆ ಹಲವು ರಾಜಕೀಯ ಪಕ್ಷಗಳಲ್ಲಿ ಗೆಳೆಯರಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಸ್ವತ: ರಾಜಕಾರಣಿಯಾಗಿರುವ ಗಿರೀಶ್‌ ಗಾಂಧಿ, ಎಂಎಲ್‌ಸಿಯೂ ಆಗಿದ್ದರು. ಎನ್‌ಸಿಪಿಯಲ್ಲಿದ್ದ ಅವರು, 2014 ರಲ್ಲಿ ಆ ಪಕ್ಷವನ್ನು ತೊರೆದಿದ್ದರು. 

ನೋ ಪಾರ್ಕಿಂಗ್‌ನಲ್ಲಿ ವಾಹನ ನಿಂತ ಚಿತ್ರ ಕಳಿಸಿದರೆ ಸಿಗುತ್ತೆ ಬಹುಮಾನ!

ಗಿರೀಶ್‌ ಅವರು ರಾಜಕೀಯದಲ್ಲಿದ್ದಾಗ, ನನಗೆ  ರಾಜಕೀಯ ತೊರೆಯಬೇಕೆಂದು ಒಮ್ಮೊಮ್ಮೆ ಅನಿಸುತ್ತದೆ ಎಂದು ಅವರಿಗೆ ಹೇಳುತ್ತಿದ್ದೆ. ಈ ಮೂಲಕ ನಾನು ಅವರನ್ನು ನಿರುತ್ಸಾಹಗೊಳಿಸುತ್ತಿದ್ದೆ ಎಂಬ ವಿಚಾರವನ್ನೂ ನಿತಿನ್‌ ಗಡ್ಕರಿ ಹೇಳಿಕೊಂಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ, ಮಾಜಿ ರೈಲ್ವೆ ಸಚಿವ ಜಾರ್ಜ್‌ ಫರ್ನಾಂಡೀಸ್‌ರನ್ನು ಸಹ ನಾಗ್ಪುರ ಸಂಸದ ನಿತಿನ್‌ ಗಡ್ಕರಿ ಶ್ಲಾಘಿಸಿದ್ದಾರೆ. ಸಮಾಜವಾದಿ ರಾಜಕಾರಣಿಯಾಗಿದ್ದ ಅವರು ಸರಳ ಜೀವನಶೈಲಿಯನ್ನು ಪಾಲಿಸುತ್ತಿದ್ದರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರು ಅಧಿಕಾರದ ವ್ಯಾಮೋಹದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರು ಉತ್ಸಾಹಿ ಜೀವನವನ್ನು ನಡೆಸಿದ್ದರು. ಇದೇ ರೀತಿ, ನನಗೂ ಸಹ ಯಾರಾದರೂ ಬೊಕ್ಕೆಗಳನ್ನು ನೀಡಿದರೆ ಅಥವಾ ನನ್ನ ಪೋಸ್ಟರ್‌ಗಳನ್ನು ಹಾಕಿದರೆ ನನಗೆ ಇಷ್ಟವಾಗುವುದಿಲ್ಲ ಎಂದೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ ನಾಗ್ಪುರದಲ್ಲಿ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌