Asianet Suvarna News Asianet Suvarna News

5 ವರ್ಷದ ಬಳಿಕ ಪೆಟ್ರೋಲ್ ಕಂಪ್ಲೀಟ್‌ ಬ್ಯಾನ್? ನಿತಿನ್ ಗಡ್ಕರಿ ಹೀಗೆ ಹೇಳಿದ್ದೇಕೆ?

* ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಘಾತಕಾರಿ ಹೇಳಿಕೆ 

* 5 ವರ್ಷದ ಬಳಿಕ ಪೆಟ್ರೋಲ್ ಕಂಪ್ಲೀಟ್‌ ಬ್ಯಾನ್?

* ಬಯೋಇಥೆನಾಲ್ ಉದಾಹರಣೆಯನ್ನು ಉಲ್ಲೇಖ

Green fuel will end India need for petrol after five years Nitin Gadkari pod
Author
Bangalore, First Published Jul 9, 2022, 7:16 PM IST

ನವದೆಹಲಿ(ಜು.09): ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಐದು ವರ್ಷಗಳಲ್ಲಿ ಪೆಟ್ರೋಲ್ ಬಳಕೆ ನಿಲ್ಲಿಸುವುದಾಗಿ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಅವರು ಈ ವಿಷಯ ತಿಳಿಸಿದರು. ಅವರು ಬಯೋಇಥೆನಾಲ್ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಅನ್ನು ಸಹ ನಿಷೇಧಿಸಬಹುದು ಎಂದು ಸೂಚಿಸಿದರು.

ಬಯೋಇಥೆನಾಲ್ ಬಳಕೆ 

ದೇಶದಲ್ಲಿ ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಪೆಟ್ರೋಲ್ ವಿಚಾರವಾಗಿ ನಿತಿನ್ ಗಡ್ಕರಿ ಹೇಳಿಕೆ ಸಾಕಷ್ಟು ಸುದ್ದಿಯಲ್ಲಿದೆ. ವಾಸ್ತವವಾಗಿ, ಮುಂಬರುವ ಐದು ವರ್ಷಗಳಲ್ಲಿ ಪೆಟ್ರೋಲ್ ಬಳಕೆಯನ್ನು ನಿಲ್ಲಿಸಲಾಗುವುದು ಎಂದು ಅವರು ಗುರುವಾರ ಹೇಳಿದರು. ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ತಯಾರಾಗುತ್ತಿರುವ ಬಯೋಇಥೆನಾಲ್ ಅನ್ನು ವಾಹನಗಳಲ್ಲಿ ಬಳಸಲಾಗುವುದು. ಹಸಿರು ಜಲಜನಕವನ್ನು ಪರ್ಯಾಯವಾಗಿಯೂ ಬಳಸಬಹುದು ಎಂದು ಕೇಂದ್ರ ಸಚಿವರು ಹೇಳಿದರು. ಆಳವಾದ ಬಾವಿಯ ನೀರಿನಿಂದ ಇದನ್ನು ತಯಾರಿಸಬಹುದು ಮತ್ತು ಜನರಿಗೆ ಕೆಜಿಗೆ 70 ರೂ.ಗೆ ಮಾರಾಟ ಮಾಡಬಹುದು. ಮುಂದಿನ ದಿನಗಳಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಹಸಿರು ಹೈಡ್ರೋಜನ್, ಎಥೆನಾಲ್ ಮತ್ತು ಸಿಎನ್‌ಜಿಯಿಂದ ಚಲಿಸಲಿವೆ.

ನಿತಿನ್ ಗಡ್ಕರಿ ಅವರ ಈ ಹೇಳಿಕೆ ಚರ್ಚೆಯಲ್ಲಿದೆ

ನಿತಿನ್ ಗಡ್ಕರಿಯವರ ಈ ಹೇಳಿಕೆ ಬಹಳ ಚರ್ಚೆಗೆ ಗ್ರಾಸವಾಗಿದೆ ಎಂಬುವುದು ಉಲ್ಲೇಖನೀಯ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದುಬಾರಿಯಾಗಿರುವ ಈ ಸಮಯದಲ್ಲಿ, ಜನರು ಈ ಹೇಳಿಕೆಯನ್ನು ವಿಚಿತ್ರವಾಗಿ ಪರಿಗಣಿಸಿದ್ದಾರೆ. ಕಳೆದ ಗುರುವಾರ ಮಹಾರಾಷ್ಟ್ರದ ಅಕೋಲಾದಲ್ಲಿ ಪಂಜಾಬ್‌ರಾವ್ ದೇಶಮುಖ ಕೃಷಿ ವಿದ್ಯಾಪೀಠದಿಂದ ಗಡ್ಕರಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ (ಡಿಎಸ್‌ಸಿ) ಗೌರವ ಪದವಿಯನ್ನು ನೀಡಲಾಯಿತು ಎಂಬುವುದು ಉಲ್ಲೇಖನೀಯ. ಈ ಸಂದರ್ಭದಲ್ಲಿ ಅವರು ಈ ವಿಷಯಗಳನ್ನು ಹೇಳಿದ್ದಾರೆ. ರೈತರು ಭವಿಷ್ಯದಲ್ಲಿ ಇಂಧನ ಪೂರೈಕೆದಾರರಾಗಿಯೂ ಕೊಡುಗೆ ನೀಡಬಹುದು ಎಂದು ಗಡ್ಕರಿ ಹೇಳಿದರು. ಗೋಧಿ, ಅಕ್ಕಿ, ಜೋಳ ಹಾಕುವುದರಿಂದ ಮಾತ್ರ ದೇಶದ ರೈತರ ಭವಿಷ್ಯ ಬದಲಾಗುವುದಿಲ್ಲ. ರೈತರು ಇಂಧನ ಪೂರೈಕೆದಾರರಾಗಬೇಕು.

ರೈತರಿಗೆ ಲಾಭ ಸಿಗುತ್ತಿದೆ

ಪೆಟ್ರೋಲ್, ಡೀಸೆಲ್ ನಿಂದ ಮಾಲಿನ್ಯ ತುಂಬಾ ಹೆಚ್ಚುತ್ತದೆ ಎಂದರು. ಇದರಿಂದ ಪರಿಸರಕ್ಕೂ ಧಕ್ಕೆ ಉಂಟಾಗುತ್ತಿದೆ. ಹಸಿರು ಹೈಡ್ರೋಜನ್, ಎಥೆನಾಲ್, ಸಿಎನ್‌ಜಿಯಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ‘ರೈತರು ಹಾಗೂ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಮಿಶ್ರಿತ ಎಣ್ಣೆ ಮಾರಾಟ ಮಾಡಿ ಲಾಭ ಗಳಿಸುತ್ತಿವೆ’ ಎಂದರು. ಇದರಿಂದ ಕಳೆದ ವರ್ಷ 20 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ. ಇದು ಸಾಕಷ್ಟು ಪ್ರಯೋಜನಕಾರಿಯಾಗಿದೆ.

Follow Us:
Download App:
  • android
  • ios