ರಾಜಕಾರಣ ಅದೃಷ್ಟವಲ್ಲ, ಜನಸೇವೆಗೆ ಸಿಕ್ಕ ಅವಕಾಶ: ಸಂಸದ ಸಿದ್ದೇಶ್ವರ

By Kannadaprabha News  |  First Published Aug 13, 2023, 9:17 PM IST

ರಾಜಕಾರಣ ಎಲ್ಲರನ್ನೂ ಕೈಬೀಸಿ ಕರೆದರೂ, ಅದರಲ್ಲಿ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ. ಸಿಕ್ಕ ಅವಕಾಶವನ್ನು ಅದೃಷ್ಟವೆಂದು ಭಾವಿಸದೇ, ಅದೇ ಅವಕಾಶದಲ್ಲಿ ಜನರ ಸೇವೆ ಮಾಡಿ, ಜನರ ಋುಣ ತೀರಿಸಿ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಜನ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು. 


ದಾವಣಗೆರೆ (ಆ.13): ರಾಜಕಾರಣ ಎಲ್ಲರನ್ನೂ ಕೈಬೀಸಿ ಕರೆದರೂ, ಅದರಲ್ಲಿ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ. ಸಿಕ್ಕ ಅವಕಾಶವನ್ನು ಅದೃಷ್ಟವೆಂದು ಭಾವಿಸದೇ, ಅದೇ ಅವಕಾಶದಲ್ಲಿ ಜನರ ಸೇವೆ ಮಾಡಿ, ಜನರ ಋುಣ ತೀರಿಸಿ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಜನ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು. ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದ ಸಂಸದ ಜನ ಸಂಪರ್ಕ ಕಚೇರಿಯಲ್ಲಿ ಶನಿವಾರ ತಾಲೂಕಿನ ಬೆಳವನೂರು ಗ್ರಾಪಂಗೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಸನ್ಮಾನಿಸಿ, ಅಭಿನಂದಿಸಿ ಮಾತನಾಡಿ ಸಿಕ್ಕಿರುವುದು ಅದೃಷ್ಟವಲ್ಲ, ಅವಕಾಶ ಎಂಬುದನ್ನು ಅರಿತು, ಜನರ ಸೇವೆ ಮಾಡಿ ಎಂದರು.

ಸರ್ಕಾರಗಳಿಂದ ಸಾಕಷ್ಟುಅನುದಾನ ನೇರವಾಗಿ ಗ್ರಾಪಂಗಳಿಗೆ ಬರುತ್ತದೆ. 15ನೇ ಹಣಕಾಸು ಯೋಜನೆಯಡಿ ಬರುವ ಅನುದಾನ ಸದ್ಭಳಕೆ ಮಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಶಾಶ್ವತ ಕೆಲಸ ಮಾಡಿ, ಜನಮಾನಸದಲ್ಲಿ ಉಳಿಯಿರಿ. ಗ್ರಾಪಂನಲ್ಲಿ ಉತ್ತಮ ಅನುಭವ ಪಡೆದರೆ, ಮುಂಬರುವ ರಾಜಕೀಯ ಪಯಣವೂ ಸುಲಭವಾಗಲಿದೆ. ಈ ಬಗ್ಗೆ ನಿಮ್ಮ ಗಮನ ಇರಲಿ ಎಂದು ತಿಳಿಸಿದರು.

Latest Videos

undefined

ಇಲ್ಲೇ ನೀರಿಲ್ಲ, ತಮಿಳುನಾಡಿಗೆ ಕೊಡೋದ್ಹೇಗೆ?: ಸಿಎಂ ಸಿದ್ದರಾಮಯ್ಯ

ಗ್ರಾಪಂ ಪಿಡಿಒಗಳು, ಕಾರ್ಯದರ್ಶಿಗಳ ಮೇಲೆ ಸಾಕಷ್ಟು ಸದಸ್ಯರು ಆರೋಪಿಸುತ್ತಾರೆ. ಆದರೆ, ಅಧಿಕಾರಿಗಳು, ಸಿಬ್ಬಂದಿಯಿಂದ ಹೇಗೆ ಕೆಲಸ ತೆಗೆದುಕೊಳ್ಳಬೇಕೆಂಬುದನ್ನು ನೀವು ಹೋಂ ವರ್ಕ್ ಮಾಡಬೇಕಾಗುತ್ತದೆ. ಜಿಲ್ಲೆಯ ಏಳೆಂಟು ಗ್ರಾಪಂಗಳಲ್ಲಿ ಅಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿ, ಸಿಬ್ಬಂದಿ ಸಮನ್ವಯತೆಯಿಂದ ಮಾದರಿ ಎನ್ನಬಹುದಾದ ಕಾಮಗಾರಿ ಮಾಡಿದ್ದು ನನ್ನ ಗಮನಕ್ಕೂ ಬಂದಿದೆ. ಸರ್ಕಾರದ ಅನುದಾನ ಸದ್ಭಳಕೆಯಾಗಿ, ಇತರರಿಗೂ ಮಾದರಿಯಾದರೆ ನಮಗೂ ತೃಪ್ತಿಯಾಗುತ್ತದೆ ಎಂದು ಹೇಳಿದರು.

ಡಿಕೆಶಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ವಿ.ಸೋಮಣ್ಣ

ಇದೇ ವೇಳೆ ಚನ್ನಗಿರಿ ತಾ. ಬುಳಸಾಗರ ಗ್ರಾಪಂ ಅಕ್ಕಳಿಕಟ್ಟೆ ಗ್ರಾಮಸ್ಥರು ತಮ್ಮ ಗ್ರಾಮದ ಗೋಮಾಳವನ್ನು ಗ್ರಾಮಕ್ಕೆ ಅನುಕೂಲವಾಗುವ ಕಾರ್ಯಕ್ಕೆ ಬಳಸುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದರು. ಮುಗಳಹಳ್ಳಿ ಗ್ರಾಮಸ್ಥರು ಬಿಎಸ್ಸೆನ್ನೆಲ್‌ ಟವರ್‌ನ್ನು ತಮ್ಮ ಊರಿನಲ್ಲಿ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲು ಮನವಿ ಮಾಡಿದರು. ಜಗಳೂರು ತಾ. ಚಿಕ್ಕಬಂಟನಹಳ್ಳಿ ಹಾಗೂ ಹರಿಹರ ತಾ. ಎಳೆಹೊಳೆ ಗ್ರಾಮಸ್ಥರು ದೇವಸ್ಥಾನ ನಿರ್ಮಾಣಕ್ಕೆ ಮನವಿ ಮಾಡಿದಾಗ ಈ ಬಗ್ಗೆ ಮುಜರಾಯಿ ಇಲಾಖೆಗೆ ಶಿಫಾರಸ್ಸು ಮಾಡುವುದಾಗಿ ಸಂಸದ ಡಾ.ಸಿದ್ದೇಶ್ವರ ಭರವಸೆ ನೀಡಿದರು. ಜಗಳೂರು ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ, ತುರ್ಚಘಟ್ಟಗ್ರಾಮದ ಮುಖಂಡರಾದ ಕರಿಬಸಪ್ಪ, ಪ್ರಭಣ್ಣ, ಆರನೇಕಲ್ಲು ವಿಜಯಕುಮಾರ ಸೇರಿ ಅನೇಕರು ಹಾಜರಿದ್ದರು.

click me!