ಈ ಹಿಂದೆ ತಮ್ಮೊಂದಿಗೆ ನಿಂತ ಸಮುದಾಯ ಪ್ರಸ್ತುತ ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಆಗಿ ರುವ ಹೊಸ ಸಮೀಕರಣದ ಹಿನ್ನೆಲೆಯಲ್ಲಿ ಜಾತಿವಾರು ಮತದಾರರ ಮಾಹಿತಿ ಹಿಡಿದು ಸೋಲು ಗೆಲುವಿಗೆ ಲೆಕ್ಕಾಚಾರ ಆರಂಭಿಸಿವೆ. ಪ್ರಸ್ತತ ತಮ್ಮ ಪಕ್ಷದ ಪರ ನಿಂತ ಜಾತಿಯ ಮತಗಳನ್ನು ಇನ್ನಷ್ಟು ಭದ್ರಪಡಿಸಿ ಕೊಳ್ಳುವ ಜತೆಗೆ ಇತರೆ ಜಾತಿಯ ಮತಗಳನ್ನು ಸೆಳೆಯಲು ಕೈಗೊಳ್ಳಬೇಕಾದ ಮಾರ್ಗಗಳ ಕುರಿತು ಚಿಂತನೆ ನಡೆಸಿವೆ.
ವಿಜಯ್ ಕೇಸರಿ
ಚನ್ನಪಟ್ಟಣ(ಅ.19): ಪ್ರತಿಷ್ಠಿತ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳು ಜಾತಿಲೆಕ್ಕಾಚಾರದಲ್ಲಿ ತೊಡಗಿವೆ. ಈ ಹಿಂದೆ ತಮ್ಮೊಂದಿಗೆ ನಿಂತ ಸಮುದಾಯ ಪ್ರಸ್ತುತ ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಆಗಿ ರುವ ಹೊಸ ಸಮೀಕರಣದ ಹಿನ್ನೆಲೆಯಲ್ಲಿ ಜಾತಿವಾರು ಮತದಾರರ ಮಾಹಿತಿ ಹಿಡಿದು ಸೋಲು ಗೆಲುವಿಗೆ ಲೆಕ್ಕಾಚಾರ ಆರಂಭಿಸಿವೆ. ಪ್ರಸ್ತತ ತಮ್ಮ ಪಕ್ಷದ ಪರ ನಿಂತ ಜಾತಿಯ ಮತಗಳನ್ನು ಇನ್ನಷ್ಟು ಭದ್ರಪಡಿಸಿ ಕೊಳ್ಳುವ ಜತೆಗೆ ಇತರೆ ಜಾತಿಯ ಮತಗಳನ್ನು ಸೆಳೆಯಲು ಕೈಗೊಳ್ಳಬೇಕಾದ ಮಾರ್ಗಗಳ ಕುರಿತು ಚಿಂತನೆ ನಡೆಸಿವೆ.
undefined
ಒಕ್ಕಲಿಗರ ಶಕ್ತಿ ಕೇಂದ್ರ:
ಚನ್ನಪಟ್ಟಣ ಒಕ್ಕಲಿಗರ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿದೆ. ಕ್ಷೇತ್ರದಲ್ಲಿ ಪ್ರಸ್ತುತ 2.32 ಲಕ್ಷ ಮತದಾರರಿದ್ದಾರೆ. ಇದರಲ್ಲಿ ಒಕ್ಕಲಿಗ ಸಮುದಾಯದ ಸುಮಾರು 1.05 ಲಕ್ಷ ಮತಗಳಿವೆ. ದಲಿತ ಮತಗಳು 40 ಸಾವಿರ, 30 ಸಾವಿರ ಮುಸ್ಲಿಂ ಮತದಾರರಿದ್ದಾರೆ. ಜತೆಗೆ ಹಿಂದುಳಿದ ಸಮುದಾಯ ಗಳಾದಕುರುಬರು?ಸಾವಿರ, ಬೆಸ್ತರುಮತ್ತು ತಿಗಳರು ತಲಾ 10 ಸಾವಿರ, ಇತರೆ ಹಿಂದುಳಿದ ವರ್ಗಗಳು 25 ಸಾವಿರದಷ್ಟಿದ್ದರೆ, ಲಿಂಗಾಯತರು, ಬ್ರಾಹ್ಮಣರು ಹಾಗೂ ಇನ್ನಿತರ ಮುಂದುವರಿದ ಸಮುದಾಯಗಳ 5 ಸಾವಿರ ಮತಗಳಿವೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದೆ ಯಾದರೂ, ಆ ಸಮುದಾಯದ ಮತಗಳು ಮೂರೂ ಪಕ್ಷಗಳಲ್ಲೂ ಹಂಚಿಹೋಗಿದ್ದು, ಅಹಿಂದ ಮತಗಳು ನಿರ್ಣಾಯಕವೆನಿಸಿದೆ.
ಒಕ್ಕಲಿಗ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಜತೆಗೆ ಇನ್ನಿತರ ಸಮು ದಾಯದ ಮತಗಳನ್ನು ಸೆಳೆಯುವುದು ಹೇಗೆಂಬ ನಿಟ್ಟಿನಲ್ಲಿ ಮೂರೂ ಪ್ರಮುಖ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿವೆ.
ಚನ್ನಪಟ್ಟಣ ಉಪಚುನಾವಣೆ: ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನೆಗೆ ಜೆಡಿಎಸ್ ಸಜ್ಜು!
ಬದಲಾದ ಸಮೀಕರಣ:
2018 ಹಾಗೂ 2023ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದಜತೆಗೆ ಅಹಿಂದವರ್ಗದಬಹುಪಾಲು ಮತಗಳು ಜೆಡಿಎಸ್ ಪರ ಚಲಾವಣೆಗೊಂಡ ಹಿನ್ನೆಲೆ ಯಲ್ಲಿ ಪ್ರಸ್ತುತ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಎರಡು ಬಾರಿಯೂ ಕ್ಷೇತ್ರದಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದರು. ಆದರೆ, 2024ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಜತೆಗೆ ಬಹುಪಾಲು ಅಹಿಂದ ವರ್ಗ ಸಹ ಕಾಂಗ್ರೆಸ್ ಬೆಂಬಲಕ್ಕೆ ನಿಂತಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 16 ಸಾವಿರ ಮತ ಪಡೆದಿದ್ದ ಕಾಂಗ್ರೆಸ್ ಅಹಿಂದ ವರ್ಗದೊಡ್ಡಪ್ರಮಾಣದಲ್ಲಿ ತನ್ನಪರನಿಂತ ಹಿನ್ನೆಲೆಯಲ್ಲಿ2024ರಲೋಕಸಭಾಚುನಾವಣೆಯಲ್ಲಿ 86 ಸಾವಿರ ಮತಗಳನ್ನು ಪಡೆದುಕೊಂಡಿತ್ತು. ಇದು ಹೊಸಜಾತಿ ಸಮೀಕರಣಕ್ಕೆ ನಾಂದಿ ಹಾಡಿದ್ದು, ತಾವು ಕಳೆದುಕೊಂಡ ಮತಗಳೆಷ್ಟು ಉಳಿಸಿಕೊಂಡ ಮತಗಳೆ ಷ್ಟು ಎಂಬುದು ಜೆಡಿಎಸ್-ಬಿಜೆಪಿ ಪಾಲಿಗೆ ಪ್ರಶ್ನೆಯಾಗಿ ಯೇ ಉಳಿದುಕೊಂಡಿದೆ. ಮುಸ್ಲಿಂ ಹಾಗೂ ದಲಿತ ಮತಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಪಡೆದುಕೊಂಡುಪ್ರಬಲಸಮಯದಾಯವಾಗಿ ರುವಒಕ್ಕಲಿಗರುಹಾಗೂ ಹಿಂದುಳಿದಸಮುದಾಯದ ಮತಗಳನ್ನು ಸೆಳೆದದ್ದೇ ಆದಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಕಾಂಗ್ರೆಸ್ಸಿನದ್ದಾಗಿದೆ.
ಸೈನಿಕನ ಲೆಕ್ಕಾಚಾರ: ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಐದುಬಾರಿಗೆಲುವುಸಾಧಿ ಸಿದ್ದು, ಈ ಚುನಾವಣೆಗಳಲ್ಲಿ ಅಹಿಂದ ಸಮುದಾಯ ಅವರ ಪರ ನಿಂತಿದ್ದದ್ದೇ ಕಾರಣ. 2004ರಚುನಾವಣೆ ಯನ್ನು ಹೊರತುಪಡಿಸಿದರೆ ಬಹುತೇಕ ಚುನಾವಣೆಗಳಲ್ಲಿ ಮುಸ್ಲಿಂ ಮತದಾರರು ಯೋಗೇಶ್ವರ್‌ಕ್ಕೆ ಹಿಡಿದಿಲ್ಲ. ಆದರೆ, 2013ರಲ್ಲಿ ಸಮಾಜವಾದಿ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡಿದ್ದ ಯೋಗೇಶ್ವರ್‌ಗೆ ಕಾಂಗ್ರೆ ಸ್‌ನಸಾದತ್ ಅಲಿಖಾನ್‌ಗಿಂತ ಹೆಚ್ಚು ಮುಸ್ಲಿಂ ಮತ ಗಳು ಲಭಿಸಿದ್ದವು.
ಚನ್ನಪಟ್ಟಣ ಬೈಎಲೆಕ್ಷನ್: ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆ
ಅಹಿಂದ ಮತಗಳ ಮೇಲೆ ಜೆಡಿಎಸ್ ಕಣ್ಣು:
ಒಕ್ಕಲಿಗ ಮತದಾರರೇ ಜೆಡಿಎಸ್ ಶಕ್ತಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಶೇ.60 ರಷ್ಟು ಮತಗಳನ್ನು ಸೆಳೆಯುವ ಜತೆಗೆ ಶೇ.30ರಿಂದ 40ರಷ್ಟು ಅಹಿಂದ ಮತಗಳನ್ನು ಪಡೆದಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿದಳ ಪತಿ ಕುಮಾರಸ್ವಾಮಿ ಇದ್ದಾರೆ. ತಮ್ಮ ಪಕ್ಷದ ಮುಖಂ ಡರಿಗೂ ತಮ್ಮ ಲೆಕ್ಕಾಚಾರವನ್ನು ವಿವರಿಸಿದ್ದು, ಈನಿಟ್ಟಿ ನಲ್ಲಿಕಾರ್ಯತಂತ್ರ ಅನುಸರಿಸುವಂತೆ ಸೂಚಿಸಿದ್ದಾರೆ.
ಅಹಿಂದ ಮತ ಉಳಿಸಿಕೊಳ್ಳಲು ಕೈಕಸರತ್ತು:
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿದ್ದ ಅಹಿಂದ ಮತಗಳ ಜತೆಗೆ ಒಕ್ಕಲಿಗ ಸಮುದಾಯ ಹಾಗೂ ಇನ್ನಿತರ ಸಮುದಾಯಗಳ ಮತ ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮಗ್ನವಾಗಿದೆ. ಪಕ್ಷದ ಮತ ಬ್ಯಾಂಕ್ ಆದ ಬಿಜೆಪಿ ಸೇರಿದ ಮೇಲೆ ಮುಸ್ಲಿಂ ಹಾಗೂ ದಲಿತ ಮತಗಳು ಅವರಿಂದ ದೂರಾಗಿವೆ. ತಿಗಳರು ಮತ್ತು ಬೆಸ್ತ ಸಮುದಾಯದ ಮತಗಳು ಸೇರಿದಂತೆ ಸಣ್ಣ ಪುಟ್ಟ ಹಿಂದುಳಿದ ಸಮುದಾಯಗಳ ಜತೆಗೆ ಒಕ್ಕಲಿಗ ಸಮುದಾಯದ ಮತಗಳನ್ನು ಪಡೆದಲ್ಲಿ ತಾವು ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.