ನೂತನ ಸಂಸತ್‌ ಉದ್ಘಾಟನೆ ಬಹಿಷ್ಕಾರಕ್ಕೆ ಮೋದಿ ಕೆಂಗಣ್ಣು: ವಿಪಕ್ಷಗಳ ಹೆಸರೆತ್ತದೆ ಪ್ರಧಾನಿ ತರಾಟೆ

By Kannadaprabha News  |  First Published May 26, 2023, 5:47 AM IST

ನೂತನ ಸಂಸತ್‌ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿರುವ ವಿರೋಧ ಪಕ್ಷಗಳ ನಡೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ‘ಆಸ್ಪ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ, ವಿರೋಧ ಪಕ್ಷಗಳ ಸಂಸದರು ಕೂಡ ತಮ್ಮ ದೇಶಕ್ಕಾಗಿ ಬಂದಿದ್ದರು’ ಎನ್ನುವ ಮೂಲಕ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ನವದೆಹಲಿ (ಮೇ.26): ನೂತನ ಸಂಸತ್‌ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿರುವ ವಿರೋಧ ಪಕ್ಷಗಳ ನಡೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ‘ಆಸ್ಪ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ, ವಿರೋಧ ಪಕ್ಷಗಳ ಸಂಸದರು ಕೂಡ ತಮ್ಮ ದೇಶಕ್ಕಾಗಿ ಬಂದಿದ್ದರು’ ಎನ್ನುವ ಮೂಲಕ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ದೇಶಗಳ ಪ್ರವಾಸ ಮುಗಿಸಿ ಗುರುವಾರ ಆಗಮಿಸಿದ ಮೋದಿ ಪಾಲಂ ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸಲು ನೆರೆದವರನ್ನು ಉದ್ದೇಶಿಸಿ ಮಾತನಾಡಿ, ‘ಆಸ್ಪ್ರೇಲಿಯಾದ ಸಿಡ್ನಿಯಲ್ಲಿ ಏರ್ಪಡಿಸಿದ್ದ ಸಾಮೂಹಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರು ಮಾತ್ರವಲ್ಲ, ಆ ದೇಶದ ಮಾಜಿ ಪ್ರಧಾನಿ ಹಾಗೂ ವಿರೋಧ ಪಕ್ಷದ ಸಂಸದರು ಕೂಡ ಭಾಗವಹಿಸಿದ್ದರು. ಅವರೆಲ್ಲರೂ ತಮ್ಮ ದೇಶಕ್ಕಾಗಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು’ ಎಂದು ಹೇಳಿದರು.

ಮೋದಿ ಅವರು ತಮ್ಮ ಮಾತಿನಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಲಿಲ್ಲ. ಆದರೆ ಅವರ ಗುರಿ ಭಾರತದ ವಿಪಕ್ಷಗಳು ಎಂಬದು ಸ್ಪಷ್ಟವಾಗಿತ್ತು. ಇನ್ನು ಕೋವಿಡ್‌ ಸಮಯದಲ್ಲಿ ವಿದೇಶಕ್ಕೆ ಲಸಿಕೆ ನೀಡುವ ತಮ್ಮ ನಿರ್ಧಾರವನ್ನು ಟೀಕಿಸಿದ್ದ ವಿರೋಧ ಪಕ್ಷಗಳ ನಡೆಯನ್ನೂ ಇದೇ ವೇಳೆ ಖಂಡಿಸಿದ ಅವರು, ‘ಆಪತ್ತಿನ ಸಮಯದಲ್ಲಿ ಮೋದಿ ಏಕೆ ಜಗತ್ತಿಗೆ ಲಸಿಕೆ ನೀಡುತ್ತಿದ್ದಾರೆಂದು ಅವರು ಕೇಳಿದರು. ನೆನಪಿಡಿ, ನಮ್ಮದು ಬುದ್ಧ ಹಾಗೂ ಗಾಂಧಿಯ ನಾಡು! ನಾವು ನಮ್ಮ ಶತ್ರುಗಳಿಗೂ ಕಾಳಜಿ ತೋರುತ್ತೇವೆ. ನಾವು ಕರುಣೆಯಿಂದ ಸ್ಫೂರ್ತಿ ಪಡೆದ ಜನ’ ಎಂದು ಹೇಳಿದರು. ಭಾನುವಾರ ನಡೆಯುವ ನೂತನ ಸಂಸತ್‌ ಭವನದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನೆರವೇರಿಸದೆ ಪ್ರಧಾನಿ ಮೋದಿ ನೆರವೇರಿಸುತ್ತಿರುವುದನ್ನು ಆಕ್ಷೇಪಿಸಿ 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಹಿಷ್ಕರಿಸಿವೆ.

Tap to resize

Latest Videos

ಸ್ತ್ರೀಯರಿಗೆ ಫ್ರೀ ಟಿಕೆಟ್‌ ಕೊಟ್ಟು ನಮ್ಮ ಕಾಪಾಡಿ: ಸಾರಿಗೆ ನೌಕರರ ಅಳಲು!

ಸಂಸತ್‌ ಉದ್ಘಾಟನೆಗೆ ಹೋಗಲು ಇನ್ನೂ 3 ವಿಪಕ್ಷ ಒಪ್ಪಿಗೆ: ನೂತನ ಸಂಸತ್‌ ಕಟ್ಟಡದ ಉದ್ಘಾಟನಾ ಸಮಾರಂಭವನ್ನು 21 ವಿಪಕ್ಷಗಳು ಬಹಿಷ್ಕರಿಸಿರುವ ನಡುವೆಯೇ ಜಾತ್ಯತೀತ ಜನತಾದಳ, ತೆಲುಗು ದೇಶಂ ಪಕ್ಷ ಹಾಗೂ ಬಿಎಸ್‌ಪಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಗುರುವಾರ ಘೋಷಿಸಿವೆ. ಈ ಮೂಲಕ ಹಾಜರಾಗುವುದಾಗಿ ಘೋಷಿಸಿದ್ದ ಬಿಜೆಡಿ, ಅಕಾಲಿದಳ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ಗಳ ಸಾಲಿಗೆ ಇವೂ ಸೇರ್ಪಡೆಯಾಗಿದೆ. ಬೆಂಗಳೂರಿನಲ್ಲಿ ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸಮಾರಂಭದಲ್ಲಿ ಪಾಲ್ಗೊಳ್ಳುವ ಘೋಷಣೆ ಮಾಡಿದ್ದಾರೆ.

ಮಂತ್ರಿಮಂಡಲ ಪೂರ್ಣ ಭರ್ತಿಗೆ ನಿರ್ಧಾರ, 24 ಮಂದಿಗೆ ಸಚಿವ ಸ್ಥಾನ: ಪ್ರಭಾವಿ ಖಾತೆಗೆ ಸಿದ್ದು-ಡಿಕೆಶಿ ಪೈಪೋಟಿ

ಇನ್ನು ಪಕ್ಷದ ಪರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಕ್ಷದ ಪರವಾಗಿ ಭಾಗಿಯಾಗುವಂತೆ ರಾಜ್ಯಸಭಾ ಸಂಸದ ಕನಕಮೇದಾಳ ರವೀಂದ್ರ ಕುಮಾರ್‌ ಅವರಿಗೆ ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ. ಇನ್ನೊಂದೆಡೆ, ಸಂಸತ್‌ ಭವನದ ಉದ್ಘಾಟನಾ ಸಮಾರಂಭವನ್ನು ವಿಪಕ್ಷಗಳು ಬಹಿಷ್ಕರಿಸುವುದು ಸರಿಯಾದ ನಡೆಯಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿ ಸರ್ಕಾರವಿರಲಿ ದೇಶದ ವಿಷಯಕ್ಕೆ ಬಂದರೆ ಬಿಎಸ್‌ಪಿ ಅವರನ್ನು ಬೆಂಬಲಿಸುತ್ತದೆ ಎಂದು ಬಿಎಸ್‌ಪಿ ನಾಯಕಿಮಾಯಾವತಿ ಹೇಳಿದ್ದಾರೆ.

click me!