* ರಾಜ್ಯದಲ್ಲಿ ಲಾಕ್‌ಡೌನ್ ಮಾಡೋದು ಬೇಡ
* ಲಾಕ್‌ಡೌನ್ ಮಾಡಿದರೆ ರಾಜ್ಯದ ಜನತೆಗೆ ಬಹಳಷ್ಟು ತೊಂದರೆ
* ಕೋವಿಡ್ ನಿಯಂತ್ರಣ ಮಾಡಬೇಕಿರೋದು ಸರ್ಕಾರದ ಕೆಲಸ
ಬೆಂಗಳೂರು(ಜ.12): ನಾವು ಕೋವಿಡ್(Covid19) ನಿಯಂತ್ರಣಕ್ಕಾಗಿ ಸಹಕಾರ ಕೊಡುತ್ತಿದ್ದೇವೆ. ಕೋವಿಡ್ ನಿಯಂತ್ರಣ ಮಾಡಬೇಕಿರೋದು ಸರ್ಕಾರದ ಕೆಲಸವಾಗಿದೆ. ಕೊರೋನಾ ಹೆಚ್ಚಳಕ್ಕೆ ಕಾರಣ ಪ್ರಧಾನಿ ಮೋದಿಯವರು(Narendra Modi). ಮೂರನೇ ಅಲೆ ಆರಂಭವಾದ ಮೇಲೆ ಪಬ್ಲಿಕ್ ಫಂಕ್ಷನ್ ಮಾಡಲಿಲ್ವಾ?. ಅವರ ಎಂಎಲ್‌ಎಗಳನ್ನ ಮೆರವಣಿಗೆ ಮಾಡಿದ್ರು, ಜಾತ್ರೆಗಳನ್ನ ಮಾಡಿದ್ರು, ಅವರ ಶಾಸಕರನ್ನೇ ನಿಯಂತ್ರಣ ಮಾಡೋಕೆ ಆಗದೇ ಇರೋರು ನಮ್ಗೆ ಏನು ಹೇಳೋದು? ಅಂತ ರಾಜ್ಯ ಸರ್ಕಾರದ(Government of Karnataka) ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕಿಡಿ ಕಾರಿದ್ದಾರೆ.
ರೇಣುಕಾಚಾರ್ಯ(MP Renukacharya) ಕ್ಷಮೆ ಕೇಳಿಬಿಟ್ಟರೆ ಎಲ್ಲವೂ ಮುಗಿದು ಬಿಡುತ್ತಾ?. ಕೊಲೆ ಮಾಡಿಬಿಟ್ಟು ಕ್ಷಮೆ ಕೇಳಿಬಿಟ್ಟರೆ ಸುಮ್ಮನೆ ಬಿಟ್ಟು ಬಿಡೋದಾ?. ಕ್ಷಮೆ is not excuse, ನಾನು ಕ್ಷಮೆ ಕೇಳಬಹುದಲ್ಲ. ಕೇಸ್ ಹಾಕಬಾರದು ಅಂತ ಕ್ಷಮೆಕೇಳಿಲ್ಲ. ರೇಣುಕಾಚಾರ್ಯ ಮೇಲೆ ಯಾಕೆ ಕೇಸ್ ಹಾಕಿಲ್ಲ? ಅಂತ ಪ್ರಶ್ನೆ ಮಾಡಿದ್ದಾರೆ.
undefined
Mekedatu ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಸಿದ್ದು ಸರ್ಕಾರವೇ ಕಾರಣ: ಬಿಜೆಪಿ
ಗೃಹ ಸಚಿವ ಅರಗ ಜ್ಞಾನೇಂದ್ರ(Araga Jnanendra) ಇಂದು(ಬುಧವಾರ) ದೂರವಾಣಿ ಮೂಲಕ ಸಿದ್ದರಾಮಯ್ಯ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ(DK Shivakumar ) ಆರೋಗ್ಯ ಸರಿ ಇಲ್ಲ. ಹೀಗಾಗಿ ಡಿಕೆಶಿ ಪಾದಯಾತ್ರೆಯನ್ನ(Padayatra) ನಿಲ್ಲಿಸಬೇಕು. ರಾಜ್ಯದ(Karnataka) ಜನತೆಯ ಆರೋಗ್ಯದ ಬಗ್ಗೆ ಕಾಳಜಿ ಇದ್ರೆ ಪಾದಯಾತ್ರೆಯನ್ನ ಕೈಬಿಡಿ. ಕೊರೋನಾ(Coronavirus) ಕೇಸ್ ಸುಳ್ಳು ಸೃಷ್ಟಿ ಮಾಡೋಕೆ ಆಗತ್ತಾ?. ವಿಪಕ್ಷ ನಾಯಕರನ್ನು ಸಿದ್ದರಾಮಯ್ಯ ಅವರನ್ನ ಬಂಧಿಸೋಕೆ ಆಗತ್ತಾ?. ಅವರೇ ಪಾದಯಾತ್ರೆಯನ್ನ ನಿಲ್ಲಿಸಬೇಕು. ಸರ್ಕಾರ ಬ್ಯಾಲೆನ್ಸ್ ಆಗಿ ಹೋಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರ ಕೇಸ್ ಹಾಕಿದೆ. ನಾವು ಮೇಕೆದಾಟು ಯೋಜನೆ(Mekedatu Project) ವಿರುದ್ಧ ಇದ್ದೀವಾ?. ನಾವು ಮೇಕೆದಾಟು ಪರವಾಗಿಯೇ ಇದ್ದೇವೆ. ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ತಪ್ಪಾಗಿ ಮಾತನಾಡುತ್ತಿದ್ದಾರೆ. ಕೃಷಿ ಭೂಮಿಗೆ ಮೇಕೆದಾಟು ನೀರು ಬಳಸ್ತಿವಿ ಅಂತ ಹೇಳಿಕೆಗಳನ್ನ ಕೊಡುತ್ತಿದ್ದಾರೆ. ಈ ತರ ಹೆಳೋದು ತಪ್ಪಾಗುತ್ತದೆ. ನ್ಯಾಯಾಲಯ ಕೂಡ ಇವರ ಹೇಳಿಕೆಗಳನ್ನ ಗಮನಿಸುತ್ತೆ ಅಂತ ಬಿಜೆಪಿ ನಾಯಕ ಎನ್.ಮಹೇಶ್(N Mahesh) ಹೇಳಿದ್ದಾರೆ.
ರಾಜ್ಯದಲ್ಲಿ ಲಾಕ್‌ಡೌನ್(Lockdown) ಮಾಡೋದು ಬೇಡ. ಆರ್ಥಿಕವಾಗಿ ಮೊದಲೇ ಹೊರೆ ಆಗಿದೆ. ಹೀಗಾಗಿ ಸಂಪೂರ್ಣ ಲಾಕ್‌ಡೌನ್ ಮಾಡಿದರೆ ರಾಜ್ಯದ ಜನತೆಗೆ ಬಹಳಷ್ಟು ತೊಂದರೆಯಾಗುತ್ತದೆ. ಇನ್ನು ಆರೋಗ್ಯ ಸರಿ ಇಲ್ಲ ಪಾದಯಾತ್ರೆ ಕೈ ಬಿಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು ನಾನು ಫಿಟ್ ಇದ್ದೇನೆ ಅಂತ ತಿಳಿಸಿದ್ದಾರೆ.
Congress Padayatra: ಕೋವಿಡ್ ಹೋದ್ಮೇಲೆ ಮೇಕೆದಾಟಿನಲ್ಲಿ ಬಿದ್ದು ಒದ್ದಾಡಿ: ಈಶ್ವರಪ್ಪ
ಪಾದಯಾತ್ರೆಯಲ್ಲಿದ್ದ ಸಿದ್ದರಾಮಯ್ಯಗೆ ಜ್ವರ, ಕಳವಳ ವ್ಯಕ್ತಪಡಿಸಿದ ಸಚಿವ
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದ್ದು ನನಗೆ ಕಳವಳ ಆಗಿದೆ. ಸಿದ್ದರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ.ತಮ್ಮ ಆರೋಗ್ಯ ರಕ್ಷಣೆ ಮಹತ್ವದ್ದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದರು.
ವೀಕೆಂಡ್ ಕರ್ಫ್ಯೂ ನಡುವೆಯೂ ಕಾಂಗ್ರೆಸ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡಿದೆ. ನಮ್ಮ ನೀರು, ನಮ್ಮ ಹಕ್ಕು ಎಂದು ಹತ್ತು ದಿನ ಪಾದಯಾತ್ರೆ ಮಾಡಲಿದ್ದಾರೆ.
ಕನಕಪುರ ತಾಲೂಕಿನ ಕಾವೇರಿ ತಟ, ಸಂಗಮದಲ್ಲಿ ಚಾಲನೆ ದೊರೆತ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸುಮಾರು ನಾಲ್ಕು ಕಿಲೋ ಮೀಟರ್ ದೂರ ಕ್ರಮಿಸಿದ್ದರು. ಆದರೆ ನಾಲ್ಕೈದು ಕಿಲೋ ಮೀಟರ್ ನಡೆಯುತ್ತಲೇ 73 ವರ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಸ್ತಾಗಿದ್ದರ. ಪಾದಯಾತ್ರೆಗೆಂದು ಸಿದ್ದರಾಮಯ್ಯನವರು ಹೊಸ ಶೂ ಖರೀದಿಸಿದ್ದರು.