Congress Padayatra: ಸ್ವಾರ್ಥ ರಾಜಕೀಯ, ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ: ಬಿಜೆಪಿ

Kannadaprabha News   | Asianet News
Published : Jan 12, 2022, 06:56 AM IST
Congress Padayatra: ಸ್ವಾರ್ಥ ರಾಜಕೀಯ, ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ: ಬಿಜೆಪಿ

ಸಾರಾಂಶ

*   ಕಾಂಗ್ರೆಸ್‌ನಿಂದಲೇ ಯೋಜನಾ ವೆಚ್ಚ ಏರಿಕೆ *   ನಾಲ್ಕು ದಶಕಗಳಿಂದ ರಾಜಕಾರಣ ಮಾಡಿದ ಶಿವಕುಮಾರ್‌ ಪ್ರಮುಖ ಹೆಜ್ಜೆ ಗುರುತುಗಳು ಏನು?  *   ಬಂಡೆ, ಗುಡ್ಡೆ, ಗೋಮಾಳ ನುಂಗೋದೇ ಡಿಕೆಶಿ ಸಾಧನೆ  

ಬೆಂಗಳೂರು(ಜ.12):  ಕಾಂಗ್ರೆಸ್‌ಗೆ ಮತ್ತು ಅದರ ನಾಯಕರಿಗೆ ಒಂದು ಕ್ಯಾರೆಕ್ಟರ್‌ ಇಲ್ಲ. ಸ್ವಾರ್ಥದ ರಾಜಕೀಯ, ಅಧಿಕಾರದ ಹಪಾಹಪಿತನಕ್ಕೆ ಮೇಕೆದಾಟು ಪಾದಯಾತ್ರೆ(Mekedatu Padayatra) ಮಾಡುತ್ತಿದ್ದಾರೆ ಎಂದು ಬಿಜೆಪಿ(BJP) ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್‌(MG Mahesh) ಅವರು ಕಟುವಾಗಿ ಟೀಕಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಸ್‌.ನಿಂಜಲಿಂಗಪ್ಪ ಅವರ ಕಾಲದಿಂದ ಪ್ರಾರಂಭವಾದ ಮೇಕೆದಾಟು ಯೋಜನೆ(Mekedatu Project) ಇಲ್ಲಿವರೆಗೆ ಏಕೆ ಬಂತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಅವರನ್ನು ಪ್ರಶ್ನಿಸುತ್ತೇನೆ. ವಿಳಂಬ ಧೋರಣೆಯಿಂದ ಯೋಜನಾ ವೆಚ್ಚ ಐದು ಸಾವಿರ ಕೋಟಿ ರು.ನಿಂದ ಹತ್ತು ಸಾವಿರ ಕೋಟಿ ರು.ಗೆ ಏರಿಕೆಯಾಗಿದೆ. ನಾಲ್ಕು ದಶಕಗಳಿಂದ ರಾಜಕಾರಣ(Politics) ಮಾಡಿದ ಶಿವಕುಮಾರ್‌ ಅವರ ಪ್ರಮುಖ ಹೆಜ್ಜೆ ಗುರುತುಗಳು ಏನು? ಬಂಡೆ, ಗುಡ್ಡೆ, ಗೋಮಾಳ ನುಂಗೋದೇ ಅವರ ಸಾಧನೆ ಎಂದು ಕಿಡಿಕಾರಿದರು.

Mekedatu Politics: ಹೆದರಿಸಿ ಪಾದಯಾತ್ರೆ ನಿಲ್ಲಿಸಲಾಗದು: ಸಿದ್ದು

ಕೀಳುಮಟ್ಟದ ಭಾಷೆ ಬಳಸುವುದು ರಾಜಕೀಯ ಸಂಸ್ಕೃತಿಯೇ? ಕೊತ್ವಾಲ್‌ ರಾಮಚಂದ್ರನ ಗುರುಕುಲದಲ್ಲಿ ಕಲಿತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕಾಂಗ್ರೆಸ್‌(Congress) ನಾಟಕವನ್ನು ದೇಶದ ಜನರು ನೋಡಿದ್ದಾರೆ. ಮೇಕೆದಾಟು ಯೋಜನೆಯನ್ನು ಬಿಜೆಪಿ ಸರ್ಕಾರ(BJP Government) ಪೂರ್ಣಗೊಳಿಸಲಿದೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್‌ ರೆಡ್ಡಿ ಮಾತನಾಡಿ, ಮೇಕೆದಾಟು ಯೋಜನೆಗೆ ನದಿ ನೀರು ಹಂಚಿಕೆ ಕುರಿತ 2007ರಲ್ಲಿ ಟ್ರಿಬ್ಯೂನಲ್‌ ಒಪ್ಪಿಗೆ ನೀಡಿತ್ತು. ಇದನ್ನು ವಿರೋಧಿಸಿ ತಮಿಳುನಾಡು ಸರ್ಕಾರ ಬಲವಾದ ಪ್ರತಿವಾದ ಮಂಡಿಸಿತು. ಮೇಲಿನ ರಾಜ್ಯವಾಗಿ ನಮಗೆ ಅದರ ಮೇಲೆ ನಿಯಂತ್ರಣ ಇದೆ ಎಂದು ಕರ್ನಾಟಕ ವಾದ ಮುಂದಿಟ್ಟಿತು. ಅಣೆಕಟ್ಟು ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿತು. 2013ರಿಂದ 2018ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ಡಿಪಿಆರ್‌ ಸಿದ್ಧಪಡಿಸಲು ಐದು ವರ್ಷ ತೆಗೆದುಕೊಂಡಿತು. ಇದೀಗ ಕಾಂಗ್ರೆಸ್‌ ತನ್ನ ಪುನಶ್ಚೇತನಕ್ಕಾಗಿ ಕೊರೋನಾ ಸಂದರ್ಭದಲ್ಲಿ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಜೀವದ ಜೊತೆ ಕಾಂಗ್ರೆಸ್‌ ಚೆಲ್ಲಾಟ: 'ಕೈ' ನಾಯಕರ ವಿರದ್ಧ ಎಸ್‌ಟಿಎಸ್‌ ಗರಂ

ಪಾದಯಾತ್ರೆ ಹೆಸರಿನಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಕೊರೋನಾ ಹರಡುವ ಮೂಲಕ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌(ST Somashekhar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆ ಮುಖಾಂತರ ಬೆಂಗಳೂರಿಗೆ(Bengaluru) ಕೊರೋನಾ(Coronavirus) ಹಬ್ಬಿಸಿ ಲಾಕ್‌ಡೌನ್‌(Lockdown) ಮಾಡುವ ಸ್ಥಿತಿ ನಿರ್ಮಿಸಲು ಕಾಂಗ್ರೆಸ್‌ ಶತಾಯಗತಾಯ ಪ್ರಯತ್ನಿಸುತ್ತಿದೆ. ಕರ್ನಾಟಕವನ್ನು(Karnataka) ಕೋವಿಡ್‌ ಹಬ್‌ ಮಾಡುವ ಉದ್ದೇಶ ಹೊಂದಿದೆ ಎಂದೂ ಅವರು ಆಪಾದಿಸಿದ್ದಾರೆ.

FIR ದಾಖಲಿಸಿದ್ದಕ್ಕೆ ಸಿದ್ದರಾಮಯ್ಯ ಆಕ್ರೋಶ, ಸರ್ಕಾರಕ್ಕೊಂದು ಸವಾಲು

ಜನರ ಜೀವ ರಕ್ಷಣೆ ಹೊಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಚುನಾಯಿತ ಜನಪ್ರತಿನಿಧಿಗಳೆಲ್ಲರೂ ನಾಗರಿಕರ ಹಿತ ಕಾಯಬೇಕು. ಕೋವಿಡ್‌ನಂತಹ(Covid19) ಸಂದಿಗ್ಧ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ನಿಂತು ಸಲಹೆಗಳನ್ನು ನೀಡಿ ಜನಹಿತ ಕಾಪಾಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್‌, ಪಾದಯಾತ್ರೆ ಹೆಸರಿನಲ್ಲಿ ಕೊರೋನಾ ಹರಡಿ ಅಮಾಯಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸರ್ಕಾರ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ, ಕಾಂಗ್ರೆಸ್‌ ಪಾದಯಾತ್ರೆ ಹೆಸರಿನಲ್ಲಿ ಜನರ ಗುಂಪು ಕಟ್ಟಿಕೊಂಡು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದೆ ಎಂದು ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.

ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್‌.ಎಂ.ರೇವಣ್ಣ(HM Revanna) ಅವರಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಇವರ ಜತೆ ಹೆಜ್ಜೆ ಹಾಕಿದವರಿಗೂ ಸೋಂಕು ಹರಡಲಿದೆ. ಪಾದಯಾತ್ರೆ ಎಂಬ ಜನಜಾತ್ರೆಯಿಂದ ಬೆಂಗಳೂರಿಗೆ ಕೋವಿಡ್‌ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿಯೂ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ